More

    ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಮಹತ್ವದ ಘೋಷಣೆ ಮಾಡಿದ ಜಯ್​ ಷಾ!

    ನವದೆಹಲಿ: ಟೀಮ್​ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಲು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಲೆಜೆಂಡರಿ ಆಟಗಾರರ ಈ ನಿರ್ಧಾರದಿಂದ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಇನ್ನೂ ಕೆಲ ದಿನಗಳ ಕಾಲ ಚುಟುಕು ಪಂದ್ಯಗಳಲ್ಲಿ ರಂಜಿಸಲಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ, ಈ ಅನಿರೀಕ್ಷಿತ ನಿರ್ಧಾರದಿಂದ ಫ್ಯಾನ್ಸ್​ ಆಘಾತಕ್ಕೊಳಗಾಗಿದ್ದಾರೆ. ಇದರ ನಡುವಯೇ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಅವರು ಕೊಹ್ಲಿ ಹಾಗೂ ರೋಹಿತ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದನ್ನು ಕೇಳಿ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಅಲ್ಲದೆ, ಶಾರ್ಟ್ ಫಾರ್ಮ್ಯಾಟ್​ಗೆ ವಿದಾಯ ಹೇಳಿದ ಬಳಿಕ ಉಳಿದ ಏಕದಿನ ಹಾಗೂ ಟೆಸ್ಟ್ ಮಾದರಿಗಳಿಗೂ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಅವರು ವಿರಾಟ್ ಹಾಗೂ ರೋಹಿತ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ.

    ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಹಿರಿಯ ಆಟಗಾರರು ತಂಡದಲ್ಲಿ ಉಳಿಯುತ್ತಾರೆಂದು ಸುಳಿವು ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

    ಭಾರತ ತಂಡ ಎಲ್ಲ ಪ್ರಶಸ್ತಿಗಳನ್ನು ಗೆಲ್ಲಬೇಕೆಂದು ನಾನು ಬಯಸುತ್ತೇನೆ. ನಮ್ಮಲ್ಲಿ ದೊಡ್ಡ ಸಾಮರ್ಥ್ಯವಿದೆ. ಈ ತಂಡದ ಮೂವರು ಆಟಗಾರರು ಮಾತ್ರ ಜಿಂಬಾಬ್ವೆಗೆ ಹೋಗುತ್ತಿದ್ದಾರೆ. ಅಗತ್ಯವಿದ್ದರೆ ನಾವು ಮೂರು ತಂಡಗಳನ್ನು ಕಣಕ್ಕಿಳಿಸಬಹುದು. ಈ ತಂಡ ಮುನ್ನಡೆಯುತ್ತಿರುವ ರೀತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ನಮ್ಮ ಗುರಿಯಾಗಿದೆ. ಅಲ್ಲಿ ಇದೇ ತಂಡ ಆಡಲಿದೆ ಮತ್ತು ಹಿರಿಯ ಆಟಗಾರರು ಸಹ ಇರುತ್ತಾರೆ ಎಂದು ಜಯ್​ ಷಾ ಅವರು ಪಿಟಿಐಗೆ ತಿಳಿಸಿದ್ದಾರೆ.

    ಒಂದು ವೇಳೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಬಂದರೆ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ತಂಡದಿಂದ ನಿರ್ಗಮಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಜಯ್​ ಷಾ ಮಾಡಿರುವ ಘೋಷಣೆಯಿಂದ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದರೊಂದಿಗೆ ಭಾರತ ಈ ಎರಡು ಪ್ರಶಸ್ತಿಗಳನ್ನೂ ಗೆಲ್ಲಲಿ ಎಂದು ಹಾರೈಸಿದ್ದಾರೆ.

    ಅಂದಹಾಗೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ, ಬಿಸಿಸಿಐ ತನ್ನ ತಂಡವನ್ನು ಸ್ಪರ್ಧೆಗೆ ಕಳುಹಿಸುತ್ತದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಈ ಟೂರ್ನಿಯು ಫೆಬ್ರವರಿ 19 ರಿಂದ ಪ್ರಾರಂಭವಾಗಲಿದೆ ಮತ್ತು ಮಾರ್ಚ್ 9 ರಂದು ಫೈನಲ್ ನಡೆಯಲಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ನನ್ನ ಕೊನೇ ಉಸಿರಿರೋವರೆಗೂ ಆತನನ್ನು ಮರೆಯಲ್ಲ! ವಿಶ್ವಕಪ್​ ಗೆದ್ದ ಬೆನ್ನಲ್ಲೇ ಕಣ್ಣೀರಿಟ್ಟ ಇರ್ಫಾನ್​ ಪಠಾಣ್​

    ಬಾರ್ಬಡೋಸ್​ನಲ್ಲಿ ರೋಹಿತ್ ವಿಶ್ವಕಪ್​ ಎತ್ತಿಹಿಡಿಯಲಿದ್ದಾರೆ ಎಂದು ಫೆಬ್ರವರಿಯಲ್ಲೇ ಭವಿಷ್ಯ ನುಡಿದಿದ್ದರು ಜಯ್​ ಷಾ!

    https://www.vijayavani.net/wp-admin/post.php?post=2204854&action=edit

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts