More

    ರಸ್ತೆ ಸುರಕ್ಷತೆ; ಲಕ್ಷಾಂತರ ವಿದ್ಯಾರ್ಥಿಗಳಿಗೆ ಅರಿವು

    ಬೆಂಗಳೂರು: ರಸ್ತೆ ಸುರಕ್ಷತೆ ಕುರಿತು ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಸಂಚಾರ ಪೊಲೀಸರು ಏರ್ಪಡಿಸಿದ್ದ ಸ್ಟೂಡೆಂಟ್ಸ್ ಅಸೋಸಿಯೇಷನ್ ಫಾರ್ ರೋಡ್ ಸೇಫ್ಟಿ (ಎಸ್‌ಎಆರ್‌ಎಸ್) ಅಭಿಯಾನ ಗುರುವಾರ ಅಂತ್ಯಗೊಂಡಿತು.

    ಐದು ದಿನಗಳ ಕಾಲ ನಡೆದ ಅಭಿಯಾನದಲ್ಲಿ ಸಂಚಾರ ಪೊಲೀಸರು ನಗರದ 566 ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ 1,56,769 ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದ, ಕಾರ್ಯಾಗಾರಗಳು, ಪ್ರಾಯೋಗಿಕ ಪ್ರದರ್ಶನ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಂಚಾರ ಪೊಲೀಸ್ ವಿಭಾಗದ ಪರಿಣಿತ ಅಧಿಕಾರಿಗಳು ಪಾದಚಾರಿಗಳ ಸುರಕ್ಷತೆ, ಸಂಚಾರ ನಿಯಮ, ಹೆಲ್ಮೆಟ್- ಸೀಟ್ ಬೆಲ್ಟ್ ಬಳಕೆ ಮತ್ತಿತರ ಅಂಶಗಳ ಕುರಿತುಉ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

    ವಿದ್ಯಾರ್ಥಿಗಳಿಗೆ ಕಲಿಕೆಯ ಅನುಭವವನ್ನು ಒದಗಿಸಲು ಜೀಬ್ರಾ ಕ್ರಾಸಿಂಗ್‌ಗಳನ್ನು ಬಳಸುವುದು, ಟ್ರಾಫಿಕ್ ಸಿಗ್ನಲ್ ಅರ್ಥ ಮಾಡಿಕೊಳ್ಳುವುದು ಮತ್ತು ಸಂಭಾವ್ಯ ಅಪಾಯಗಳನ್ನು ಗುರುತಿಸುವ ಕುರಿತು ಪ್ರಾಯೋಗಿಕ ಪ್ರದರ್ಶನಗಳನ್ನು ಸಹ ನಡೆಸಲಾಯಿತು.

    ಶಿಕ್ಷಣ ಮತ್ತು ರಸ್ತೆ ಸುರಕ್ಷತಾ ಜಾಗೃತಿ ಮೂಲಕ ರಸ್ತೆ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಜತೆಗೆ ಅಪಘಾತ ರಹಿತವನ್ನಾಗಿಸಲು ಸಂಚಾರ ಪೊಲೀಸರ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿರುವುದು ಉತ್ತಮ ಬೆಳವಣಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts