More

    ಕುಂದಾಪುರಕ್ಕೆ ಆಗಮಿಸಿದ ಕಲ್ಕಿಯ ಬುಜ್ಜಿ: ಭೈರವನ ವಿಶೇಷ ವಾಹನ ಡ್ರೈವ್​ ಮಾಡಿದ ರಿಷಬ್​ ಶೆಟ್ಟಿ

    ಬೆಂಗಳೂರು: ಕಲ್ಕಿ 2898 AD ಚಿತ್ರಕ್ಕಾಗಿ ಪ್ರಪಂಚದಾದ್ಯಂತದ ಚಲನಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಲ್ಕಿ ಸಿನಿಮಾ ಜೂನ್ 27ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

    ಈ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮಿತಾಭ್​ ಬಚ್ಚನ್ ಮತ್ತು ಕಮಲ್ ಹಾಸನ್ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಉಳಿದಂತೆ ಈ ಸಿನಿಮಾದಲ್ಲಿ ಈಗಾಗಲೇ ಬುಜ್ಜಿ ಪಾತ್ರ ಎಲ್ಲರ ಗಮನ ಸೆಳೆದಿದೆ. ಈ ಪಾತ್ರಕ್ಕೆ ಜನಪ್ರಿಯ ನಾಯಕಿ ಕೀರ್ತಿ ಸುರೇಶ್ ಕೂಡ ಧ್ವನಿ ನೀಡಿದ್ದಾರೆ.

    ಬುಜ್ಜಿ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಲು ಕೆಲವು ದಿನಗಳ ಹಿಂದೆ ಅದ್ಧೂರಿ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆ ನಂತರ ಹಲವೆಡೆ ಬುಜ್ಜಿ ವಾಹನವನ್ನು ಓಡಿಸಿದ ಘಟನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟ ನಾಗಚೈತನ್ಯ ಹಾಗೂ ಉದ್ಯಮಿ ಆನಂದ್​ ಮಹೀಂದ್ರಾ ಬುಜ್ಜಿಯನ್ನು ಓಡಿಸಿದ್ದಾರೆ. ಇದೀಗ ಅದೇ ಬುಜ್ಜಿಯನ್ನು ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

    ಇತ್ತೀಚೆಗಷ್ಟೇ ರಿಷಬ್​​ ಅವರು ಬುಜ್ಜಿ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬುಜ್ಜಿಯನ್ನು ಕುಂದಾಪುರಕ್ಕೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ರಿಷಬ್​ ವಾಹನ ಏರಿ ಮೂರ್ನಾಲ್ಕು ರೌಂಡ್​ ಹಾಕಿದ್ದಾರೆ. ಈ ವಿಡಿಯೋವನ್ನು ಕಲ್ಕಿ ತಂಡ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಮಾಡಿದೆ. ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಬುಜ್ಜಿಯನ್ನು ಡ್ರೈವಿಂಗ್​ ಮಾಡಿದ ಅನುಭವದ ಬಗ್ಗೆ ಮಾತನಾಡಿರುವ ರಿಷಬ್​​, ಬುಜ್ಜಿಯನ್ನು ಓಡಿಸಿದ್ದು ಅದ್ಭುತ ಅನುಭವ. ಭೈರವ ಮತ್ತು ಬುಜ್ಜಿಗೆ ಒಳ್ಳೆಯದಾಗಲಿ. ಇದೇ ಜೂನ್​ 27ರಂದು ಕಲ್ಕಿ ಬಿಡುಗಡೆಯಾಗಲಿದ್ದು, ಎಲ್ಲರು ಚಿತ್ರಮಂದಿರಕ್ಕೆ ಹೋಗಿ, ದೊಡ್ಡ ಪರದೆಯ ಮೇಲೆ ಸಿನಿಮಾವನ್ನು ಎಂಜಾಯ್​ ಮಾಡಿ. ಪ್ರಭಾಸ್​ ಸರ್​ಗೆ ಒಳ್ಳೆಯದಾಗಲಿ ಎಂದು ಕಲ್ಕಿ ಸಿನಿಮಾಗೆ ರಿಷಬ್​ ಶೆಟ್ಟಿ ಶುಭ ಹಾರೈಸಿದ್ದಾರೆ.

    ಅಂದಹಾಗೆ ರಿಷಬ್ ಶೆಟ್ಟಿ ಪ್ರಸ್ತುತ ಕಾಂತಾರ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬರಹಗಾರ ಮತ್ತು ನಿರ್ದೇಶಕರಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಿನಿಪ್ರೇಮಿಗಳಲ್ಲಿ ಒಳ್ಳೆಯ ನಿರೀಕ್ಷೆಗಳಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts