More

    ರೇಣುಕಾಸ್ವಾಮಿ ಕೊಲೆ ಪ್ರಕರಣ: 40 ಲಕ್ಷ ರೂಪಾಯಿ ಕೈ ಸಾಲ ಕೊಟ್ಟ ಮೋಹನ್‌ರಾಜ್‌ ನಾಪತ್ತೆ!

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮುಚ್ಚಿ ಹಾಕಲು ದರ್ಶನ್ ಏನೆಲ್ಲಾ ಮಾಡಲು ಯತ್ನಿಸಿದ್ದರು ಎಂಬ ಸ್ಪೋಟಕ ವಿಚಾರ ಬಯಲಾಗಿದೆ. ಮೊನ್ನೆಯಷ್ಟೇ ಆರ್​ಆರ್​ ನಗರದಲ್ಲಿರುವ ನಟ ದರ್ಶನ್ ಮನೆಯಲ್ಲಿ ಮತ್ತೆ 37 ಲಕ್ಷದ 40 ಸಾವಿರ ಹಣವನ್ನು, ಪತ್ನಿ ವಿಜಯಲಕ್ಷ್ಮಿ ಬಳಿಯಿಂದ 3 ಲಕ್ಷ ರೂ.ಹಣವನ್ನು ಸೀಜ್ ಮಾಡಲಾಗಿದೆ.

    ಇದನ್ನೂ ಓದಿ: ವಾರದೊಳಗೆ ಬೆಂಗಳೂರಿನಲ್ಲಿ ಹೊಸ ಜಾಹೀರಾತು ನೀತಿ ಸಾರ್ವಜನಿಕ ಚರ್ಚೆಗೆ: ಡಿಸಿಎಂ ಡಿ.ಕೆ.ಶಿವಕುಮಾರ್

    ದರ್ಶನ್ ಮನೆಯ ಬೆಡ್ ರೂಮ್ ನಲ್ಲಿ ಕಬೋಡ್ ನಲ್ಲಿ 37 ಲಕ್ಷ ಹಣ ಸೀಜ್ ಆಗಿದೆ ಎಂದು ವರದಿ ಆಗಿದೆ. ಬ್ಯಾಗ್ ಒಳಗೆ ಇದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಂತೆ. ಅಷ್ಟೇ ಅಲ್ಲದೇ ವಿಜಯಲಕ್ಷ್ಮಿ ಇರುವ ಅಪಾರ್ಟ್ ಮೆಂಟ್ ನಲ್ಲೂ ಪೊಲೀಸರು 3 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ ಎಂದು ವರದಿ ಆಗಿದೆ.

    ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಹೇಳದಂತೆ ಡೀಲ್ ಕೂಡ ಮಾಡಿದ್ದರಂತೆ. ಡೀಲ್ ಗಾಗಿ ನೀಡಿದ್ದ 30 ಲಕ್ಷ ರೂ. ಹಣವನ್ನು ಈ ಹಿಂದೆಯೇ ಪೊಲೀಸರು ಸೀಜ್ ಮಾಡಿದ್ದರು ಎಂದು ವರದಿ ಆಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 70 ಲಕ್ಷದ 40 ಸಾವಿರ ಹಣವನ್ನು ಸೀಜ್ ಮಾಡಿದ್ದಾರೆ ಎನ್ನಲಾಗ್ತಿದೆ.

    ಈ ಹಣದ ಬೆನ್ನತ್ತಿದ್ದ ಪೊಲೀಸರಿಗೆ, ಶಾಸಕರೊಬ್ಬರ ಆಪ್ತನ ಲಿಂಕ್ ಪತ್ತೆಯಾಗಿದೆ. ತಮ್ಮ ಆಪ್ತ ಮೋಹನ್‌ರಾಜ್ ಎನ್ನುವವರ ಬಳಿ ದರ್ಶನ್ 40 ಲಕ್ಷ ರೂಪಾಯಿ ಕೈಸಾಲ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ವಿಚಾರಣೆ ಮುಂದಾಗುತ್ತಿದ್ದಂತೆ ಮೋಹನ್‌ರಾಜ್ ಮೊಬೈಲ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ದರ್ಶನ್‌ಗೆ ಈ ಹಣ ನೀಡುವಾಗ ಮೋಹನ್‌ರಾಜ್‌ಗೆ ಕೊಲೆ ವಿಚಾರ ಗೊತ್ತಾಗಿತ್ತಾ ಇಲ್ವಾ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಒಂದೊಮ್ಮೆ ಕೊಲೆ ಪ್ರಕರಣ ಮೊದಲೇ ಗೊತ್ತಿತ್ತು ಎನ್ನುವುದಾದ್ರೆ ಮೋಹನ್‌ರಾಜ್‌ಗೂ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

    ದರ್ಶನ್ ಹಣದ ವಹಿವಾಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಐಟಿ ಇಲಾಖೆಗೆ ಪತ್ರ ಬರೆಯಲು ಚಿಂತನೆ ನಡೆಸಿದ್ದಾರೆ ಎಂದು ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

    ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ, ನಟಿ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳನ್ನು ಜೂನ್ 11 ರಂದು​ ಮಂಗಳವಾರ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಇತರೆ ಕೆಲವು ಆರೋಪಿಗಳನ್ನು ನಂತರದ ದಿನಗಳಲ್ಲಿ ಬಂಧಿಸಲಾಗಿದೆ. ಕೆಲವು ಆರೋಪಿಗಳು ತಾವೇ ಪೊಲೀಸರ ಮುಂದೆ ಶರಣಾಗಿದ್ದರು.

    ಈ ಪ್ರಕರಣದಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಟ ದರ್ಶನ್​, ಧನರಾಜ್, ವಿನಯ್, ಪ್ರದ್ಯೂಶ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ- 1 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದರ್ಶನ್​ ಪೊಲೀಸ್​ ಠಾಣೆಗೆ ಹೋದ್ರೆ, ಇತ್ತ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯಬೇಕಿದೆ.

    ತೆಲಂಗಾಣ: ಬಿಆರ್​ಎಸ್​ ತೊರೆದು ಕಾಂಗ್ರೆಸ್​ ಸೇರಿದ ಶಾಸಕ​ ಪೊಚರಂ ಶ್ರೀನಿವಾಸ್ ರೆಡ್ಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts