More

    ಪ್ರಾಮಾಣಿಕ ಭಕ್ತಿಯಿಂದ ಉತ್ತಮ ಫಲಿತಾಂಶ: ಪಿಲಿಕಬೆ ಪ್ರಕಾಶ್

    ಕೊಕ್ಕಡ: ಹತ್ಯಡ್ಕ ಗ್ರಾಮದ ಅರಿಕೆಗುಡ್ದೆ ದೇವಾಲಯದ ದೇವಿಗೆ ದೃಢಕಲಶ, ವನದುರ್ಗಾ ಹೋಮ, ಅಭಿನಂದನಾ ಸಭೆ, ಭಜನೋತ್ಸವ ಕಾರ್ಯಕ್ರಮ ಜರುಗಿತು.

    ದೇವಾಲಯ ಅಧ್ಯಕ್ಷ ಪಿಲಿಕಬೆ ಪ್ರಕಾಶ್ ಮಾತನಾಡಿ, ಪ್ರಾಮಾಣಿಕ ಭಕ್ತಿಯಿಂದ ಸಮಾಜದಲ್ಲಿ ಪುಣ್ಯದ ಕಾರ್ಯ ನೆರವೇರುತ್ತದೆ. ಅದಕ್ಕೆ ಮಾದರಿ ಅರಿಕೆಗುಡ್ಡೆ ಕ್ಷೇತ್ರ. ಈ ದೇವಾಲಯದಲ್ಲಿ ಮುಂದೆಯೂ ಸಮಾಜಮುಖಿ ಕಾರ್ಯ ಮುಂದುವರಿಸುತ್ತೇವೆ. ಸಂಪ್ರದಾಯದಂತೆ ಎಲ್ಲ ಪುಣ್ಯ ಕಾರ್ಯ ಇಲ್ಲಿ ನಡೆಸಲಿದ್ದೇವೆ ಎಂದರು.

    ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮಲೆ, ಶ್ರೀಕರ ರಾವ್, ಸಂಚಾಲಕರಾದ ಜಯರಾಮ ನೆಲ್ಲಿತ್ತಾಯ, ಚಂದ್ರಶೇಖರ ಸಾಲ್ಯಾನ್ ಉಪಸ್ಥಿತರಿದ್ದರು. ಕಡಬ ಸುಂದರ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ಜರುಗಿತು. ತಾಲೂಕಿನ ವಿವಿಧ ತಂಡ ಭಾಗವಹಿಸಿದ್ದವು. ಮುರಳೀಧರ ಸ್ವಾಗತಿಸಿ, ಉಲ್ಲಾಸ್ ಭಟ್ ವಂದಿಸಿ, ರೇಣುಕಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts