More

    ಚಂದಗಾಲಿನಲ್ಲಿ ದೇವರ ಪ್ರತಿಷ್ಠಾಪನೆ ಸಂಪನ್ನ: ಚುಂಚಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಹಲವರು ಭಾಗಿ

    ಮಂಡ್ಯ: ತಾಲೂಕಿನ ದುದ್ದ ಹೋಬಳಿ ಚಂದಗಾಲು ಗ್ರಾಮದಲ್ಲಿ ಮುದ್ದಮ್ಮ ದೇವಿಯ ಪುನರ್ ಪ್ರತಿಷ್ಠಾಪನೆ ಅದ್ದೂರಿಯಾಗಿ ನೆರವೇರಿತು. ಅಂತೆಯೇ ಎರಡು ದಿನದ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
    ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ಕಳಶಾರೋಹಣ, ದೇವಸ್ಥಾನದ ಉದ್ಘಾಟನೆ ಅಂಗವಾಗಿ ವಿಶೇಷ ಕೈಂಕರ್ಯ ಆಯೋಜಿಸಲಾಗಿತ್ತು. ಮೊದಲ ದಿನ ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಮತ್ತು ದುರ್ಗಾ ಹೋಮ ಸೇರಿದಂತೆ ಹಲವು ಕಾರ್ಯಕ್ರಮ ನಡೆಯಿತು. ಎರಡನೇ ದಿನ ಬೆಳಗ್ಗೆಯಿಂದಲೇ ಬ್ರಹ್ಮ ಕಳಶ ಸ್ಥಾಪನೆ, ಹೋಮ ನಡೆಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಹಾಗೂ ವೇದಮೂರ್ತಿ ಗಣಪತಿಭಟ್ ನೇತೃತ್ವದಲ್ಲಿ ಬೆಳಗ್ಗೆ 9.30ರಿಂದ 10.30ರೊಳಗೆ ದೇವರ ಬಿಂಬ ಪ್ರತಿಷ್ಠಾಪನೆ ನೆರವೇರಿತು. ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಆನೆ ಮತ್ತು ಬಸವನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
    ಇನ್ನು ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಜತೆಗೆ ಸಂಜೆ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಚಂದಗಾಲು, ಕುರಿಕೊಪ್ಪಲು, ವಡ್ಡರಹಳ್ಳಿ ಕೊಪ್ಪಲು, ಗೊರವನಹಳ್ಳಿ, ತೂಬಿನಕೆರೆ, ಮುಳ್ಳಳ್ಳಿದೊಡ್ಡಿ, ಭೂತನ ಹೊಸೂರು, ಪುರದಕೊಪ್ಪಲು, ಎಸ್.ಐ.ಕೋಡಿಹಳ್ಳಿ, ಗೊರವಾಲೆ, ಜಡಗನಪುರ, ಕಂದೇಗಾಲ, ಗೌಡಯ್ಯನದೊಡ್ಡಿ, ಹೊನಗಾನಹಳ್ಳಿ, ಸಂಗಾಪುರ ಸೇರಿದಂತೆ ಹಲವು ಗ್ರಾಮದಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
    ಇದಕ್ಕೂ ಮುನ್ನ ಮಾತನಾಡಿದ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮನುಷ್ಯ ದ್ವೇಷ ಅಸೂಯೆ ಬಿಟ್ಟು ಸಾತ್ವಿಕ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಅಹಂಕಾರ, ದುಶ್ವಟದಿಂದ ದೂರಾಗಿ ಸಮಾಜದ ಸ್ವಾಸ್ತ್ಯವನ್ನು ಕಾಪಾಡಬೇಕು. ಪ್ರಮುಖವಾಗಿ ಆಧ್ಯಾತ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ದೇವಸ್ಥಾನಗಳು ಸಮಾಜದಲ್ಲಿ ಉತ್ತಮ ಮಾರ್ಗ ತೋರಿಸುವ ದಾರಿ ದೀಪವಾಗಿದೆ. ಹೆತ್ತವರು ಹಾಗೂ ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
    ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಿಮ್ಸ್ ನಿವೃತ್ತ ಪಿಆರ್‌ಒ ಉಮೇಶ್, ನಿವೃತ್ತ ಪ್ರಾಧ್ಯಾಪಕರಾದ ಡಾ.ಗಂಗಾಧರಗೌಡ, ಕೆ.ಜೋಗಿಗೌಡ, ಮುಖಂಡರಾದ ಸುರೇಂದ್ರ, ಅಣ್ಣೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ತಿಮ್ಮೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ.ನಾಗರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಬೆಂಗಳೂರಿನ ಸಬ್‌ರಿಜಿಸ್ಟರ್ ಸಿ.ಜೆ.ಪ್ರಭಾಕರ್, ತುರುವೇಕೆರೆ ತಹಸೀಲ್ದಾರ್ ರೇಣುಕುಮಾರ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಿಕ್ಕನಾಗೇಗೌಡ, ಟ್ರಸ್ಟ್ ಅಧ್ಯಕ್ಷ ಡಾ.ಕೆ.ಪಿ.ಅಶ್ವಥ್ ಇತರರಿದ್ದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts