More

    ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂಡಿಯಾ ಹೌಸ್ ನಿರ್ಮಾಣ

    ಮುಂಬೈ: ವಿಶ್ವ ಮಟ್ಟದ ಪ್ರಮುಖ ಕ್ರೀಡಾಕೂಟವಾದ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಒಂದು ತಿಂಗಳಷ್ಟೇ ಬಾಕಿ ಇದೆ. ಪ್ಯಾರಿಸ್ ಒಲಿಂಪಿಕ್ಸ್-2024ರ ಕಡೆಗೆ ವಿಶ್ವಾದ್ಯಂತದ ಕ್ರೀಡಾಸಕ್ತರು ಕಣ್ಣು ನೆಟ್ಟಿದ್ದು, ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ‘ಇಂಡಿಯಾ ಹೌಸ್’ ಕಾಣಬಹುದಾಗಿದೆ. ಭಾರತೀಯ ಒಲಿಂಪಿಕ್ಸ್ ಒಕ್ಕೂಟದ (ಐಒಎ) ಸಹಭಾಗಿತ್ವ ವಹಿಸಿರುವಂಥ ರಿಲಯನ್ಸ್ ಫೌಂಡೇಷನ್​ನಿಂದ ಈ ಇಂಡಿಯಾ ಹೌಸ್ ಪರಿಕಲ್ಪನೆ ಮೂಡಿದೆ. ಈ ಇಂಡಿಯಾ ಹೌಸ್​ನಲ್ಲಿ ಭಾರತದ ಕ್ರೀಡಾ ಸಂಸ್ಕೃತಿ- ಪರಂಪರೆಯನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ. ತಂತ್ರಜ್ಞಾನ ಮತ್ತು ಡಿಜಿಟಲೀಕರಣದಲ್ಲಿ ಭಾರತದ ಸಾಧನೆಯನ್ನು ಜಗತ್ತಿನೆದುರು ತೆರೆದಿಡಲಾಗುತ್ತದೆ. ವಿಶ್ವದ ವಿವಿಧ ಅಥ್ಲೀಟ್ ಗಳು, ಗಣ್ಯರು, ಕ್ರೀಡಾ ಉತ್ಸಾಹಿಗಳು ಈ ಇಂಡಿಯಾ ಹೌಸ್​ಗೆ ಭೇಟಿ ನೀಡುವ ನಿರೀಕ್ಷೆ ಇದೆ. ಇನ್ನು ಭಾರತದ ನೀತಿಯನ್ನು ವ್ಯಾಖ್ಯಾನಿಸುವ ಏಕತೆ, ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವುದಕ್ಕೂ ಇದು ಸಹಕಾರಿ ಆಗುತ್ತದೆ.

    ಇಂಡಿಯಾ ಹೌಸ್ ಎಂಬುದು ಯಾಕೆ ಮಹತ್ವದ್ದು ಎಂಬ ಬಗ್ಗೆ ಮಾತನಾಡಿರುವ ಐಒಎ ಸದಸ್ಯೆ , ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ, ‘ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಇಂಡಿಯಾ ಹೌಸ್ ನಿರ್ಮಾಣವನ್ನು ಘೋಷಿಸಲು ನಾನು ಅಪಾರ ಸಂತೋಷ ಪಡುತ್ತೇನೆ ಮತ್ತು ಇದೇ ಉತ್ಸಾಹದಿಂದ ರೋಮಾಂಚನಗೊಂಡಿದ್ದೇನೆ. ಕಳೆದ ವರ್ಷ ಭಾರತದಲ್ಲಿ ನಡೆದ ಐಒಸಿ ಅಧಿವೇಶನವು 40 ವರ್ಷಗಳಲ್ಲಿ ಮೊದಲನೆಯದು, ನಮ್ಮ ಒಲಿಂಪಿಕ್ ಪಯಣದಲ್ಲಿ ಇದು ಪ್ರಮುಖ ಮೈಲುಗಲ್ಲು ಮತ್ತು ನಮ್ಮ ಕ್ರೀಡಾಪಟುಗಳನ್ನು ಗೌರವಿಸುವ, ನಮ್ಮ ಜಯವನ್ನು ಆಚರಿಸುವ, ನಮ್ಮ ಯಶೋಗಾಥೆಗಳನ್ನು, ಸಾಧನೆಗಳನ್ನು ಹಂಚಿಕೊಳ್ಳುವ ಮತ್ತು ಜಗತ್ತನ್ನು ಭಾರತಕ್ಕೆ ಸ್ವಾಗತಿಸುವ ಜಾಗವಾದ ಇಂಡಿಯಾ ಹೌಸ್ ಅನ್ನು ಪ್ರಾರಂಭಿಸುವುದರೊಂದಿಗೆ ಈ ಪ್ರಯತ್ನಕ್ಕೆ ವೇಗ ನೀಡುವುದನ್ನು ಮುಂದುವರಿಸಲು ನಾವು ಸಂತೋಷಪಡುತ್ತೇವೆ’ ಎಂದಿದ್ದಾರೆ.

    ‘ಭಾರತಕ್ಕೆ ಒಲಿಂಪಿಕ್ ಸಂಭ್ರಮವನ್ನು ತರಬೇಕು ಎಂಬ 140 ಕೋಟಿ ಭಾರತೀಯರ ಕನಸನ್ನು ನನಸಾಗಿಸಲು ಇಂಡಿಯಾ ಹೌಸ್ ಮತ್ತೊಂದು ಹೆಜ್ಜೆಯಾಗಲಿದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ.

    ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ಮಾತನಾಡಿ, ‘ರಿಲಯನ್ಸ್ ಫೌಂಡೇಷನ್ ಸಹಭಾಗಿತ್ವದಲ್ಲಿ ಉದ್ಘಾಟನೆ ಆಗಲಿರುವ ಇಂಡಿಯಾ ಹೌಸ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಭಿಮಾನಿಗಳು ಮತ್ತು ಕ್ರೀಡಾಪಟುಗಳ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ಅಭಿಮಾನಿಗಳಿಗೆ ಮತ್ತು ಇತರ ದೇಶಗಳ ಜನರು ಭಾರತದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ತಮ ಮಾರ್ಗವಾಗಿದೆ. ಮತ್ತು ಭಾರತವು ಪ್ರಮುಖ ಕ್ರೀಡಾಕೂಟಗಳ ಆತಿಥೇಯ ದೇಶವಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಮತ್ತು ಇಂಡಿಯಾ ಹೌಸ್ ನಾವು ಕ್ರೀಡಾ ರಾಷ್ಟ್ರವಾಗಿ ಮತ್ತು ಒಲಿಂಪಿಕ್ ನಲ್ಲಿ ಮಾಡಿದ ಸಾಧನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಉಪಕ್ರಮ ಮತ್ತು ಭಾರತದ ಒಲಿಂಪಿಕ್ ಪಯಣಕ್ಕೆ ಚಾಲನೆ ನೀಡಿದ ಐಒಸಿ ಸದಸ್ಯೆ ನೀತಾ ಅಂಬಾನಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದಿದ್ದಾರೆ.

    ಭಾರತೀಯ ಸಂಸ್ಕೃತಿ- ಪರಂಪರೆಯ ಪ್ರದರ್ಶನ: ಒಲಿಂಪಿಕ್ಸ್ ಕ್ರೀಡಾಕೂಟದ ಸಮಯದಲ್ಲಿ ‘ಪಾರ್ಕ್ ಆಫ್ ನೇಷನ್ಸ್’ ಎಂದು ಹೆಸರಿಸಲಾದ ಐಕಾನಿಕ್ ಪಾರ್ಕ್ ಡೆ ಲಾ ವಿಲ್ಲೆಟ್ ನಲ್ಲಿ ಇಂಡಿಯಾ ಹೌಸ್ ಇರಲಿದ್ದು, ನೆದರ್ಲೆಂಡ್, ಕೆನಡಾ, ಬ್ರೆಜಿಲ್ ಮತ್ತು ಅತಿಥೇಯ ಫ್ರಾನ್ಸ್ ಸೇರಿದಂತೆ ಒಟ್ಟು 14 ಇತರ ಆತಿಥ್ಯ ಹೌಸ್​ಗಳಿಂದ ಸುತ್ತುವರಿದಿದೆ. ಇಂಡಿಯಾ ಹೌಸ್ ಎಂಬುದು ಸಂಸ್ಕೃತಿಯಿಂದ ಕಲೆ ಮತ್ತು ಕ್ರೀಡೆಗಳವರೆಗೆ ಅಡುಗೆಯ ಸತ್ಕಾರಗಳು ಮತ್ತು ಯೋಗ, ಕರಕುಶಲ ವಸ್ತುಗಳು, ಸಂಗೀತ, ಭಾರತೀಯ ನೃತ್ಯ ಗುಂಪುಗಳಿಂದ ಪ್ರದರ್ಶನಗಳು ಮತ್ತಿತರ ಅನುಭವಗಳನ್ನು ಅಭಿಮಾನಿಗಳಿಗೆ ದೊರಕಿಸುತ್ತದೆ. ಈ ಮೂಲಕ ಜಗತ್ತಿಗೆ ಭಾರತದ ಪ್ರತಿಭೆ, ಸಾಮರ್ಥ್ಯ ಮತ್ತು ಮಹತ್ವಾಕಾಂಕ್ಷೆಯ ಒಂದು ನೋಟವನ್ನು ನೀಡುತ್ತದೆ.

    ಭಾರತೀಯ ಕ್ರೀಡಾಪಟುಗಳು ಮತ್ತು ಅಭಿಮಾನಿಗಳಿಗೆ ಮನೆಯಿಂದ ದೂರ: ಇಂಡಿಯಾ ಹೌಸ್ ಭಾರತದ ವಿಜಯಗಳು ಮತ್ತು ಪದಕ ಗೆಲುವುಗಳನ್ನು ಆಚರಿಸುವ ಗುರಿಯನ್ನು ಹೊಂದಿದೆ. ಸಂದರ್ಶಕರು, ಕ್ರೀಡಾ ದಂತಕಥೆಗಳೊಂದಿಗೆ ಮಾತುಕತೆ ನಡೆಸಲು ಮತ್ತು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಸ್ನೇಹಿತರೊಂದಿಗೆ ಪ್ರಮುಖ ಘಟನೆಗಳನ್ನು ಸ್ಮರಣೀಯವಾಗಿಸುವ ಗಮ್ಯಸ್ಥಾನವಾಗಿದೆ. ಇದು ಎಲ್ಲ ದೇಶಗಳ ಮಾಧ್ಯಮ ಮತ್ತು ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ. ಪ್ರಮುಖ ಭಾರತೀಯ ಕಾರ್ಯಕ್ರಮಗಳ ಸಂಭ್ರಮಾಚರಣೆಯನ್ನು ಇಂಡಿಯಾ ಹೌಸ್‌ನಲ್ಲಿ ಭಾರತದಲ್ಲಿ ಒಲಿಂಪಿಕ್ ಗೇಮ್ಸ್‌ನ ವಿಶೇಷ ಮಾಧ್ಯಮ ಹಕ್ಕುದಾರರಾದ ವಯಾಕಾಮ್18 ಸಹಭಾಗಿತ್ವದಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

    ಭಾರತ-ಇಂಗ್ಲೆಂಡ್​ ಸೆಮೀಸ್​ಗೆ ಮಳೆ ಭೀತಿ; ಪಂದ್ಯ ರದ್ದಾದರೆ ಯಾರು ಫೈನಲ್​ಗೆ? ಐಸಿಸಿ ನಿಯಮವೇನು?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts