More

    ಆರಂಭಿಕ ಕುಸಿತದ ನಂತರ ಚೇತರಿಕೆ: ಅಲ್ಪ ಏರಿಕೆ ಕಂಡ ಸೂಚ್ಯಂಕ

    ಮುಂಬೈ: ಬ್ಯಾಂಕ್ ಷೇರುಗಳಲ್ಲಿ ಖರೀದಿ ಮತ್ತು ಐರೋಪ್ಯ ಮಾರುಕಟ್ಟೆಗಳಲ್ಲಿ ದೃಢವಾದ ಆರಂಭದಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಅಲ್ಪ ಏರಿಕೆ ದಾಖಲಿಸಿತು.

    30 ಷೇರುಗಳ ಬಿಎಸ್‌ಇ ಸೂಚ್ಯಂಕ 131.18 ಅಂಕಗಳು ಅಥವಾ ಶೇ. 0.17 ರಷ್ಟು ಏರಿಕೆಯಾಗಿ 77,341.08 ಕ್ಕೆ ಮುಟ್ಟಿತು. ಆರಂಭಿಕ ವಹಿವಾಟಿನಲ್ಲಿ, ಈ ಮಾನದಂಡವು 463.96 ಅಂಕಗಳು ಅಥವಾ ಶೇ. 0.60 ರಷ್ಟು ಕುಸಿದು 76,745.94 ಕ್ಕೆ ತಲುಪಿತ್ತು. ನಂತರ ಅದು ಚೇತರಿಕೆ ಕಂಡಿತು.

    ನಿಫ್ಟಿ 50 ಸೂಚ್ಯಂಕವು 36.75 ಅಂಕಗಳು ಅಥವಾ ಶೇ. 0.16 ರಷ್ಟು ಏರಿಕೆಯಾಗಿ 23,537.85 ಕ್ಕೆ ತಲುಪಿತು.

    ಪ್ರಮುಖ ಷೇರುಗಳ ಪೈಕಿ, ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ಪವರ್ ಗ್ರಿಡ್, ಸನ್ ಫಾರ್ಮಾ, ನೆಸ್ಲೆ, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಐಟಿಸಿ, ಐಸಿಐಸಿಐ ಬ್ಯಾಂಕ್, ಟೈಟಾನ್, ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚು ಲಾಭ ಗಳಿಸಿದವು. ಇಂಡಸ್‌ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಆಕ್ಸಿಸ್ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡವು. ಟೋಕಿಯೊ ಲಾಭ ದಾಖಲಿಸಿತು. ಐರೋಪ್ಯ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸಿದವು. ಶುಕ್ರವಾರ ಅಮೆರಿಕ ಮಾರುಕಟ್ಟೆಗಳು ಬಹುತೇಕ ಕುಸಿತ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 1,790.19 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಶುಕ್ರವಾರದಂದು ತನ್ನ ಆರು ದಿನಗಳ ರ್ಯಾಲಿಗೆ ಬ್ರೇಕ್​ ಹಾಕಿದ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 269.03 ಅಂಕಗಳು ಅಥವಾ ಶೇಕಡಾ 0.35 ರಷ್ಟು ಕುಸಿದು 77,209.90 ಕ್ಕೆ ಮುಟ್ಟಿತ್ತು.. ನಿಫ್ಟಿ 50 ಸೂಚ್ಯಂಕವು 65.90 ಅಂಕಗಳು ಅಥವಾ ಶೇ. 0.28 ರಷ್ಟು ಕುಸಿದು 23,501.10 ಕ್ಕೆ ತಲುಪಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts