More

    ರಿಯಾಸಿ ಭಯೋತ್ಪಾದಕ ದಾಳಿ; ಉಗ್ರರಿಗೆ ಲಾಜಿಸ್ಟಿಕ್ಸ್​​ ಒದಗಿಸಿದ್ದ ಶಂಕಿತ ಅರೆಸ್ಟ್​​

    ಜಮ್ಮು: ರಿಯಾಸಿ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನಾಗಿರುವ ವ್ಯಕ್ತಿ ಬಸ್​ ಮೇಲೆ ದಾಳಿ ಮಾಡಿದ ಭಯೋತ್ಪಾದಕ ತಂಡದ ಮಾಸ್ಟರ್​ ಮೈಂಡ್​​​​ ಅಲ್ಲ. ಆದರೆ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ರಿಯಾಸಿಯ ಹಿರಿಯ ಪೊಲೀಸ್ ಅಧೀಕ್ಷಕ ಮೋಹಿತಾ ಶರ್ಮಾ ಹೇಳಿದ್ದಾರೆ.

    ಇದನ್ನು ಓದಿ: ವಿಮಾನದಲ್ಲಿ ಜಗಳ..ರಂಪಾಟ; ಏರ್​ಲೈನ್ಸ್​​ ಸಿಬ್ಬಂದಿಗೆ ಕಚ್ಚಿದ ಮಹಿಳೆ ನೆಕ್ಸ್ಟ್​ ಆಗಿದ್ದೇನು ಗೊತ್ತಾ?

    ಪೊಲೀಸರ ಪ್ರಕಾರ, ಆರೋಪಿ ಹಕೀಮ್ ದಿನ್ ರಾಜೌರಿ ನಿವಾಸಿಯಾಗಿದ್ದು, ದಾಳಿಗೆ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಒದಗಿಸಿರುವ ಶಂಕೆ ಇದೆ ಎನ್ನಲಾಗಿದೆ.

    ಶಿವಖೋಡಿ ಗುಹೆ ದೇಗುಲದಿಂದ ರಿಯಾಸಿ ಜಿಲ್ಲೆಯ ಕತ್ರಾಕ್ಕೆ ಯಾತ್ರಾರ್ಥಿಗಳಿದ್ದ ಬಸ್​​ ಮೇಲೆ ಭಯೋತ್ಪಾದಕ ದಾಳಿ ನಡೆಯಿತು. ಉಗ್ರರು ಬಸ್ ಚಾಲಕನಿಗೆ ಗುಂಡು ಹಾರಿಸಿದರು. ಬಳಿಕ ಬಸ್ ಬ್ಯಾಲೆನ್ಸ್ ಕಳೆದುಕೊಂಡು ನಾಲೆಗೆ ಬಿದ್ದಿದೆ. ಇದಾದ ಬಳಿಕವೂ ಭಯೋತ್ಪಾದಕರು ಬಸ್ ಮೇಲೆ ಗುಂಡಿನ ದಾಳಿ ಮುಂದುವರಿಸಿದ್ದರು. ಈ ದಾಳಿಯಲ್ಲಿ ಒಂಬತ್ತು ಜನರು ಮೃತಪಟ್ಟಿದ್ದರು ಮತ್ತು 33 ಮಂದಿ ಗಾಯಗೊಂಡಿದ್ದರು.

    ನಂತರ ಪೊಲೀಸರು, ಸೇನೆ ಮತ್ತು ತನಿಖಾ ಸಂಸ್ಥೆಗಳು ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ದಾಳಿಯನ್ನು ಪರಿಶೀಲಿಸಿದವು. ದಾಳಿಯ ನಂತರ ಭದ್ರತಾ ಪಡೆಗಳು ದಟ್ಟವಾದ ಕಾಡುಗಳು, ಪರ್ವತಗಳು ಮತ್ತು ಗಡಿಗಳಲ್ಲಿ ಭಯೋತ್ಪಾದಕರ ಹುಡುಕಾಟವನ್ನು ಪ್ರಾರಂಭಿಸಿದವು. ಕಳೆದ ವಾರ, ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ಚಿತ್ರವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿದ್ದರು ಮತ್ತು ಆತನ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಪ್ರತ್ಯಕ್ಷದರ್ಶಿಗಳು ನೀಡಿದ ವಿವರಣೆಯನ್ನು ಆಧರಿಸಿ ಭಯೋತ್ಪಾದಕನ ಚಿತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. (ಏಜೆನ್ಸೀಸ್​)

    ದೆಹಲಿ ಅಬಕಾರಿ ನೀತಿ ಪ್ರಕರಣ; ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ನ್ಯಾಯಾಂಗ ಬಂಧನ ವಿಸ್ತರಣೆ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts