More

    ಹಂಪಿಯಲ್ಲಿ ಅಪರೂಪದ ಬಿಳಿ ಬಣ್ಣದ ಹಾವು ಪತ್ತೆ! ಇದರ ವಿಶೇಷತೆ ಬಗ್ಗೆ ಉರಗ ರಕ್ಷಕ ಹೇಳಿದ್ದಿಷ್ಟು…

    ಹೊಸಪೇಟೆ: ಐತಿಹಾಸಿಕ ಕ್ಷೇತ್ರ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಅಪರೂಪದ ಬಿಳಿ ಬಣ್ಣದ ಮಣ್ಣು ಮುಕ್ಕ ಹಾವು ಪತ್ತೆಯಾಗಿದ್ದು, ಈ ಹಾವು ಯಾವ ಪ್ರಭೇದದ್ದು ಎಂದು ಗುರುತಿಸಲಾಗದೇ ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಪ್ರವಾಸಿಗರು ಗೊಂದಲಕ್ಕೀಡಾಗಿದ್ದರು.

    ಹಾವು ಪತ್ತೆಯಾದ ವಿಷಯ ತಿಳಿದ ಕಮಲಾಪುರದ ಹಾವು(ಉರಗ) ಮತ್ತು ವನ್ಯಜೀವಿ ರಕ್ಷಕ ಮಲ್ಲಿಕಾರ್ಜುನ ಜಿ.ಬಿ ಅವರು ಸ್ಥಳಕ್ಕೆ ಬಂದು ಈ ಹಾವನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.

    ಇದು ಬೇರೆಯ ಜಾತಿ ಹಾವಲ್ಲ. ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ. ಇದನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯುತ್ತಾರೆ ಎಂದು ಅನಿಮಲ್ ಕನ್ಸರ್ವೇಷನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಹಾವು(ಉರಗ) ಮತ್ತು ವನ್ಯ ಜೀವಿ ರಕ್ಷಕ ವೇಣುಗೋಪಾಲ್ ನಾಯ್ಡು ತಿಳಿಸಿದರು.

    ಇದನ್ನೂ ಓದಿ: ವಿಕ್ರಮ್​ ಲ್ಯಾಂಡರ್​ ವಿನ್ಯಾಸ ಮಾಡಿದ್ದು ನಾನೇ ಎಂದು ಮಾಧ್ಯಮಗಳಿಗೆ ಸಂದರ್ಶನ ಕೊಡ್ತಿದ್ದ ನಕಲಿ ವಿಜ್ಞಾನಿ ಕೊನೆಗೂ ಅರೆಸ್ಟ್​!

    ಇದು ಅನುವಂಶಿಕ ಅಸಹಜತೆಯಾಗಿದೆ. ಇವುಗಳ ಅಸಹಜತೆ, ವರ್ಣದ್ರವ್ಯ ಮತ್ತು ಬಣ್ಣದಿಂದಾಗಿ ಈ ಹಾವುಗಳನ್ನು ‘ಅಪರೂಪ’ದ ಹಾವು ಎಂದು ಕರೆಯುತ್ತಾರೆ. ಬಹುಶಃ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಇಂತಹ ಅಪರೂಪದ ಸಾಮಾನ್ಯ ಬಿಳಿ ಮಣ್ಣು ಮುಕ್ಕ ಹಾವು (albino Common Sand Boa) ಕಂಡುಬಂದಿದೆ. ಈ ಹಾವುಗಳು ವಿಷಕಾರಿಯಲ್ಲದ ಹಾವಾಗಿದೆ.

    ಈ ಮಣ್ಣು ಮುಕ್ಕ ಹಾವುಗಳಲ್ಲಿ ಮೂರು ಜಾತಿಯ ಹಾವುಗಳಿದ್ದು, ಸಾಮಾನ್ಯ ಮಣ್ಣು ಮುಕ್ಕ ಹಾವು (Common Sand Boa), ಕೆಂಪು ಮಣ್ಣು ಮುಕ್ಕ ಹಾವು (Red Sand Boa), ಹಾಗೂ ವೇಟೆಕಾರ್ ಮಣ್ಣು ಮುಕ್ಕ (Whitaker’s Boa) ಹಾವುಗಳಿವೆ ಎಂದು ಉರಗ ರಕ್ಷಕ ಮಲ್ಲಿಕಾರ್ಜುನ್ ಅಭಿಪ್ರಾಯವಾಗಿದೆ. (ದಿಗ್ವಿಜಯ ನ್ಯೂಸ್​)

    G20 ಶೃಂಗಸಭೆ; ವಿದೇಶಿ ಗಣ್ಯರ ಸುರಕ್ಷತೆಗೆ AIನ ಕ್ಯಾಮರಾ ಕಣ್ಣುಗಳು!

    ಇಂದಿನಿಂದ ಏಷ್ಯಾಕಪ್​ ಕ್ರಿಕೆಟ್​ ಹಬ್ಬ; ಪಾಕ್​-ನೇಪಾಳ ಉದ್ಘಾಟನಾ ಪಂದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts