More

    ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡಗೆ ಹೈಕೋರ್ಟ್‌ ಜಾಮೀನು

    ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿರುವ ವಕೀಲ ಜಿ.ದೇವರಾಜೇಗೌಡ ಅವರಿಗೆ ಕರ್ನಾಟಕ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

    ಇದನ್ನೂ ಓದಿ: ಹರಿಯಾಣ ಬಳಿ ಕಾಂಗ್ರೆಸ್ ನಾಯಕನ ಸಹೋದರನ ಗುಂಡಿಕ್ಕಿ ಹತ್ಯೆ

    ಈ ಸಂಬಂಧ ಹಾಸನದ ಜಿ.ದೇವರಾಜೇಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಪುರಸ್ಕರಿಸಿ ಆದೇಶಿಸಿದೆ.

    ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಘಟನೆಯ ಬಳಿಕ 90 ದಿನ ವಿಳಂಬವಾಗಿ ದೂರು ದಾಖಲಿಸಿದ್ದಾರೆ. ವಿಡಿಯೋ ಕಾಲ್‌ಗಳನ್ನು ಏಕೆ ಸ್ವೀಕರಿಸಿದ್ದರೆಂಬುದಕ್ಕೆ ಸಮರ್ಥನೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು ಜಾಮೀನು ನೀಡಿತು.

    ಹಳೇ ಕೇಸ್​ಗಳೇ ದೇವರಾಜೇಗೌಡಗೆ ಉರುಳಾಗಿದ್ದರು. ಒಂದೊಂದೇ ಕೇಸ್​ಗಳು ದಾಖಲಾಗಿದ್ದವು. ಅತ್ಯಾಚಾರ, ಜಾತಿ ನಿಂದನೆ ಕೇಸ್​ ಬಳಿಕ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ಕೂಡ ದೂರು ದಾಖಲಾಗಿತ್ತು. ಹಾಸನದಲ್ಲಿ ಮಾರ್ಚ್​ 14ರಂದು ದೇವರಾಜೇಗೌಡ ವಿರುದ್ಧ ಡಿಸಿ ದೂರು ನೀಡಿದ್ದರು. ಡಿಸಿ ದೂರು ಆಧರಿಸಿ ಹಾಸನ ನಗರ ಠಾಣೆಯಲ್ಲಿ ಕೇಸ್​ ದಾಖಲಾಗಿತ್ತು.

    ಪೊಲೀಸರು ಬಿ ರಿಪೋರ್ಟ್‌ ಸಲ್ಲಿಕೆ: ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್‌ ಶ್ಯಾಮ್‌ 2023ರ ಡಿ.29ರಂದು ಅತ್ಯಾಚಾರ ನಡೆಸಿದ್ದಾರೆಂದು 2024ರ ಏ.1ರಂದು ದೂರು ನೀಡಿದ್ದಾರೆ. ಅದಕ್ಕೂ ಮೊದಲು ಮಾ.29ರಂದೇ ಹನಿಟ್ರ್ಯಾಪ್‌ ಎಂದು ದೇವರಾಜೇಗೌಡ ದೂರು ನೀಡಿದ್ದಾರೆ. ಮಾ.29ರಂದು ದೇವರಾಜೇಗೌಡ ವಿರುದ್ಧ ಸಂತ್ರಸ್ತೆ ಪತಿ ದೂರು ನೀಡಿದ್ದಾರೆ. ಆದರೆ ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ. ಆ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

    ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಆಕ್ಷೇಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts