More

    ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಕಾರು ಅಪಘಾತ: ನಮಗಾಗಿ ಪ್ರಾರ್ಥಿಸಿ ಎಂದು ನಟಿ ರಂಭಾ ಮನವಿ

    ಒಟ್ಟಾವ: ಮಕ್ಕಳನ್ನು ಶಾಲೆಯಿಂದ ಪಿಕಪ್​ ಮಾಡಿಕೊಂಡು ಮನೆಗೆ ಹಿಂದಿರುಗುವಾಗ 90ರ ದಶಕದ ನಟಿ ರಂಭಾ ಅವರು ಕಾರು ಅಪಘಾತಕ್ಕೀಡಾದ ಘಟನೆ ಇತ್ತೀಚೆಗೆ ಕೆನಡಾದಲ್ಲಿ ನಡೆದಿದೆ.

    ಅದೃಷ್ಟವಶಾತ್​ ಸಣ್ಣ ಪುಟ್ಟ ಗಾಯಗಳಿಂದ ಎಲ್ಲರು ಬಚಾವ್​ ಆಗಿದ್ದಾರೆ. ಗಾಯಗೊಂಡಿರುವ ರಂಭಾ ಅವರ ಕಿರಿಯ ಮಗಳು ಸಾಶಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹಾಗೂ ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಂಭಾ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಮಗಳ ಶೀಘ್ರ ಚೇರಿಕೆಗೆ ಪ್ರಾರ್ಥನೆ ಸಲ್ಲಿಸುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಮತ್ತೊಂದು ಕಾರಿನಿಂದ ಡಿಕ್ಕಿಯಾಗಿ ಹಾನಿಯಾಗಿರುವ ತಮ್ಮ ಕಾರಿನ ಫೋಟೋ ಮತ್ತು ಮಗಳು ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವ ಫೋಟೋವನ್ನು ರಂಭಾ ಶೇರ್​ ಮಾಡಿಕೊಂಡಿದ್ದು, ಮಕ್ಕಳನ್ನು ಶಾಲೆಯಿಂದ ಪಿಕಪ್​ ಮಾಡಿಕೊಂಡು ಬರುವಾಗ ಎದುರಿಗೆ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ನಾನು ಮತ್ತು ನನ್ನ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತರಾಗಿದ್ದೇವೆ. ನನ್ನ ಪುಟ್ಟ ಮಗಳು ಸಾಶಾ ಇನ್ನೂ ಆಸ್ಪತ್ರೆಯಲ್ಲೇ ಇದ್ದಾಳೆ. ಕೆಟ್ಟ ದಿನ ಮತ್ತು ಕೆಟ್ಟ ಸಮಯ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ರಂಭಾ ಕೇಳಿಕೊಂಡಿದ್ದಾರೆ.

    ಅಂದಹಾಗೆ 90ರ ದಶಕದಲ್ಲಿ ಸಕ್ರಿಯವಾಗಿದ್ದ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ರಂಭಾ ಕೂಡ ಒಬ್ಬರು. ಮೂಲ ಹೆಸರು ವಿಜಯಲಕ್ಷ್ಮಿ ಯೀಡಿ. ರಜನಿಕಾಂತ್, ಅಜಿತ್, ವಿಜಯ್, ಸಲ್ಮಾನ್ ಖಾನ್, ಚಿರಂಜೀವಿ ಮತ್ತು ಮಮ್ಮುಟ್ಟಿ,ಮ ರವಿಚಂದ್ರನ್​, ಶಿವರಾಜ್​ ಕುಮಾರ್​ ಸೇರಿದಂತೆ ಭಾರತದ ಟಾಪ್ ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡಿದ್ದಾರೆ.

    2010 ರಲ್ಲಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರನ್ನು ಮದುವೆಯಾದ ನಂತರ ರಂಭಾ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ಟೊರೊಂಟೊದಲ್ಲಿ ನೆಲೆಸಿದ್ದಾರೆ. ರಂಭಾ ಅವರಿಗೆ ಮೂವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನಿದ್ದಾನೆ. (ಏಜೆನ್ಸೀಸ್​)

    ಯಲ್ಲಾಪುರದ ಶಿವಪುರ ಗ್ರಾಮದಲ್ಲಿರುವ ತೂಗು ಸೇತುವೆ ಮೇಲೆ ಕಾರು ಚಲಾಯಿಸಿ ಪುಂಡರ ದುರ್ವರ್ತನೆ

    ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಕುರಿಗಳ ಹಿಂಡಿನ ಮಧ್ಯೆ ಇರುವ ತೋಳವನ್ನು ಪತ್ತೆ ಹಚ್ಚುವಿರಾ?

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts