More

    ಸಲ್ಮಾನ್​ರನ್ನು​​ ತಬ್ಬಿಕೊಂಡಾಗ ರಜನಿ ವರ್ತನೆ ಕಂಡು ಗಳಗಳನೇ ಅತ್ತಿದ್ದರಂತೆ ನಟಿ ರಂಭಾ!

    ಚೆನ್ನೈ: ನಟಿ ರಂಭಾ ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ಸ್ಟಾರ್​ ನಟಿಯ ಪಟ್ಟ ಪಡೆದವರು. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಾಯಕ ನಟಿ ಮತ್ತು ಪೋಷಕ ನಟಿಯಾಗಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ನಟನಾ ವೃತ್ತಿಯನ್ನು ತ್ಯಜಿಸಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಪತಿ ಮತ್ತು ಮೂವರು ಮಕ್ಕಳೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.

    ಆದರೆ, ಇಂದಿಗೂ ಸಿನಿಪ್ರೇಮಿಗಳು ರಂಭಾ ಅವರನ್ನು ಮರೆತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಂಭಾ ಆಗಾಗ ಫೋಟೋ ಮತ್ತು ವಿಡಿಯೋಗಳನ್ನು ಅಪ್​ಲೋಡ್​ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಇತ್ತೀಚೆಗೆ, ರಂಭಾ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಆಡಿದ ಮಾತುಗಳು ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ರಂಭಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ ‘ಅರುಣಾಚಲಂ’ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ನಡೆದ ಕೆಲವು ವಿಚಾರಗಳನ್ನು ಸಂದರ್ಶನದಲ್ಲಿ ರಂಭಾ ಬಹಿರಂಗಪಡಿಸಿದ್ದಾರೆ. ಚಿತ್ರೀಕರಣದ ವೇಳೆ ರಜನಿಕಾಂತ್ ಅವರು ಗೇಲಿ ಮಾಡಿದ್ದು ಮತ್ತು ಅದರಿಂದ ಕಣ್ಣೀರು ಹಾಕಿದ್ದನ್ನು ರಂಭಾ ಮೆಲಕು ಹಾಕಿದ್ದಾರೆ.

    ಅರುಣಾಚಲಂ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಜೊತೆ ‘ಬಂಧನ್’ ಸಿನಿಮಾದಲ್ಲೂ ನಾನು ನಟಿಸಿದ್ದೆ. ಬೆಳಗ್ಗೆ ರಜನಿ ಸರ್ ಸಿನಿಮಾದಲ್ಲಿ ಹಾಗೂ ಮಧ್ಯಾಹ್ನ ಸಲ್ಮಾನ್ ಖಾನ್ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದೆ. ಒಂದು ದಿನ ಸಲ್ಮಾನ್ ಖಾನ್ ಮತ್ತು ಜಾಕಿ ಶ್ರಾಫ್ ಅರುಣಾಚಲಂ ಚಿತ್ರದ ಶೂಟಿಂಗ್ ಸೆಟ್‌ಗೆ ಬಂದಿದ್ದರು.

    ನಾನು ಸಲ್ಮಾನ್​ ಖಾನ್​ ಅವರನ್ನು ನೋಡಿದಾಗ ತಬ್ಬಿಕೊಂಡೆ. ಈ ರೀತಿ ತಬ್ಬಿಕೊಳ್ಳುವುದು ಬಾಲಿವುಡ್​ ಸಂಸ್ಕೃತಿಯ ಭಾಗವಾಗಿತ್ತು. ಆದರೆ, ರಜನಿ ಸರ್ ಇದನ್ನು ಗಮನಿಸಿದರು. ಸಲ್ಮಾನ್​ ಖಾನ್​ ಹೋದ ನಂತರ ಸೆಟ್‌ನಲ್ಲಿದ್ದವರೆಲ್ಲರೂ ನನ್ನತ್ತ ಕೋಪದಿಂದ ನೋಡಿದರು. ಮೊದಲಿಗೆ ನನಗೆ ಅರ್ಥವಾಗಲಿಲ್ಲ. ಬಳಿಕ ಕ್ಯಾಮರಾಮನ್ ಯು.ಕೆ.ಸೆಂಥಿಲ್ ಕುಮಾರ್ ಅವರು ಅರ್ಥ ಮಾಡಿಸಿದರು. ನೀವು ಏನು ಮಾಡಿದಿರಿ ಎಂಬ ಅರಿವು ಇರಲಿಲ್ಲವೇ ಎಂದು ಪ್ರಶ್ನಿಸಿದರು. ರಜನಿ ಸರ್‌ಗೆ ಕೋಪ ಬಂದಿದೆ ಎಂದು ತಿಳಿಸಿದರು. ನನ್ನ ಜೊತೆ ನಟಿಸುವುದಿಲ್ಲ ಎಂದು ರಜನಿ ಸರ್ ಹೇಳಿರುವುದಾಗಿ ಸೆಟ್‌ನಲ್ಲಿರುವವರು ತಿಳಿಸಿದರು. ಇದರಿಂದ ನಾನು ಗೊಂದಲಕ್ಕೆ ಒಳಗಾದೆ ಮತ್ತು ಅಳಲು ಪ್ರಾರಂಭಿಸಿದೆ.

    ನಾನು ಅಳುವುದನ್ನುನೋಡಿ ರಜನಿ ಸರ್ ನನ್ನ ಬಳಿ ಧಾವಿಸಿ, ಸಮಾಧಾನ ಮಾಡಿದರು. ನಂತರ ಎಲ್ಲರನ್ನೂ ಸೆಟ್‌ಗೆ ಕರೆತಂದು ಸಾಲಾಗಿ ನಿಲ್ಲಿಸಿ, ನಾನು ಸಲ್ಮಾನ್ ಖಾನ್‌ನನ್ನು ಹೇಗೆ ಸ್ವಾಗತಿಸಿದೆ? ನಾನು ಅವರ ಬಳಿಗೆ ಹೇಗೆ ಓಡಿದೆ? ಎಂಬುದನ್ನು ರಜನಿ ಸರ್​ ಅನುಕರಿಸಲು ಪ್ರಾರಂಭಿಸಿದರು. ನಾನೆಂದು ರಜನಿ ಸರ್​ ಅವರನ್ನು ಆ ರೀತಿ ನೋಡಿರಲಿಲ್ಲ. ರಂಭಾ ನಮ್ಮನೆಲ್ಲ ಪ್ರತಿದಿನ ಹೇಗೆ ಸ್ವಾಗತಿಸುತ್ತಾಳೆ ಎಂದು ಸೆಟ್​ನಲ್ಲಿದ್ದವರನ್ನು ರಜಿನಿ ಸರ್​ ಪ್ರಶ್ನೆ ಮಾಡಿದರು. ಹಾಯ್ ಸರ್ ಎಂದು ಹೇಳಿ ಇಲ್ಲಿ ಬಂದು ಪುಸ್ತಕಾ ಓದುತ್ತಾ ಕುಳಿತುಕೊಳ್ಳುತ್ತಾಳೆ. ಹಾಗಾದರೆ, ನೀವು ಉತ್ತರದವರನ್ನು ಮಾತ್ರ ಗೌರವಿಸುತ್ತೀರಿ ಮತ್ತು ದಕ್ಷಿಣದ ಜನರು ನಿಮಗೆ ಕಡಿಮೆಯೇ? ಎಂದು ಕಿಚಾಯಿಸಿದರು ಎಂದು ರಂಭಾ ಹಳೆಯ ಘಟನೆಯನ್ನು ನೆನೆದರು. ಅಲ್ಲದೆ, ಅದೊಂದು ಮರೆಯಲಾಗದ ಅನುಭವ ಎಂದು ತಿಳಿಸಿದರು.

    ಮತ್ತೊಂದು ಘಟನೆಯನ್ನು ವಿವರಿಸಿದ ರಂಭಾ, ಒಮ್ಮೆ ಅರುಣಾಚಲಂ ಸೆಟ್‌ನಲ್ಲಿ ಇದ್ದಕ್ಕಿದ್ದಂತೆ ಲೈಟ್ ಆಫ್ ಆಯಿತು ಮತ್ತು ಯಾರೋ ನನ್ನನ್ನು ಸ್ಪರ್ಶಿಸಿದರು. ಇದರಿಂದ ನಾನು ಕಿರುಚಿದೆ. ಆಮೇಲೆ ಲೈಟ್ ಆನ್​ ಆದಾಗ ಸೆಟ್​ನಲ್ಲಿ ಇಡೀ ಚರ್ಚೆ ರಂಭಾ ಮುಟ್ಟಿದ್ದು ಯಾರು ಅಂತ. ಇಡೀ ಸೆಟ್ ಒಟ್ಟುಗೂಡಿತು ಮತ್ತು ಎಲ್ಲರೂ ಅದು ರಜನಿ ಸರ್ ಎಂದರು. ಹೀಗೆ ಅನೇಕ ಘಟನೆಗಳು ನಡೆದವು ಎಂದ ರಂಭಾ, ರಜನಿಕಾಂತ್​ ಅವರ ಚೇಷ್ಟೆಗಳನ್ನು ಬಹಿರಂಗಪಡಿಸಿದರು. (ಏಜೆನ್ಸೀಸ್​)

    ಅಫ್ಘಾನಿಸ್ತಾನ ಎದುರು ಹೀನಾಯ ಸೋಲು: ಭಾರತದ ವಿರುದ್ಧ ಚೀಪ್​ ಕಾಮೆಂಟ್​ ಮಾಡಿದ ಆಸಿಸ್ ಕ್ಯಾಪ್ಟನ್!

    ಆಕೆ 150 ರೂಪಾಯಿಗೆ ಸಿಗ್ತಾಳೆ! ವಿದೇಶಿ ಮಹಿಳೆಯರಿಗೆ ಯುವಕನ ಕಿರುಕುಳ, ಕ್ರಮಕ್ಕೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts