More

    ನನಗೆ ಜೀವನ ಕೊಟ್ಟಿದ್ದೆ ಅವರು ಎಂದು ದೇವ್​​ ಗಿಲ್​ ಹೇಳಿದ್ದು ಯಾರಿಗೆ?

    ಮಗಧೀರ ಚಿತ್ರದಲ್ಲಿ ಖಳನಾಯಕನಾಗುವ ಮೂಲಕ ಟಾಲಿವುಡ್​ನಲ್ಲಿ ಫೇಮಸ್​​ ಆದ ದೇವ್ ಗಿಲ್ ಯಾರಿಗೆ ಗೊತ್ತಿಲ್ಲ ಹೇಳಿ. ಮೊದಲು ಮಾಡಿದ್ದು ಕೃಷ್ಣಾರ್ಜುನ ಸಿನಿಮಾ ಆದರೂ ಎಸ್​.ಎಸ್​.ರಾಜಮೌಳಿ ಅವರು ಆ್ಯಕ್ಷನ್​-ಕಟ್​​ ಹೇಳಿದ್ದ ಮಗಧೀರ ಸಿನಿಮಾ ಅವರಿಗೆ ಕ್ರೇಜ್​ ತಂದುಕೊಟ್ಟಿತು. ಇದಾದ ನಂತರ ಹಲವು ಸಿನಿಮಾಗಳಲ್ಲಿ ವಿಲನ್​ ಆಗಿ ನಟಿಸಿದ ದೇವ್​ ಗಿಲ್​​ ಈಗ ಹೀರೋ ಆಗಿ ನಟಿಸಿ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

    ಇದನ್ನು ಓದಿ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದಿದ್ದೇಕೆ ಪ್ರಿಯಾಂಕಾ ಗಾಂಧಿ ವಾದ್ರಾ

    ‘ದಿಕ್ಕುಲು ಚೂಡಾಕು ರಾಮಯ್ಯ’, ‘ಜುವ್ವ’ ಸಿನಿಮಾ ಮಾಡಿದ ರಾಜಮೌಳಿ ಅವರ ಸಹಾಯಕ ಪೇಟಾ ತ್ರಿಕೋಟಿ ನಿರ್ದೇಶಿಸುತ್ತಿರುವ ‘ಅಹೋ ವಿಕ್ರಮಾರ್ಕ’ ಚಿತ್ರದಲ್ಲಿ ದೇವ್​ ಗಿಲ್​ ಲೀಡ್​​ ರೋಲ್​​ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ 1:01 ನಿಮಿಷದ ‘ಅಹೋ ವಿಕ್ರಮಾರ್ಕ’ ಟೀಸರ್‌ ಬಿಡುಗಡೆ ಮಾಡಿತ್ತು. ನಿರ್ದೇಶಕ ರಾಜಮೌಳಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್​ ನೋಡಿದವರಿಗೆ ಸಿನಿಮಾ ಪವರ್​ ಪೊಲೀಸ್​ ಅಧಿಕಾರಿಯ ಕಥೆ ಹೊಂದಿದೆ ಎಂಬುದು ತಿಳಿಯುತ್ತದೆ.

    ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ದೇವ್ ಗಿಲ್, ನಾನು ಹುಟ್ಟಿ ಬೆಳೆದಿದ್ದೆಲ್ಲಾ ಪುಣೆ ಮತ್ತು ಮುಂಬೈನಲ್ಲೇ ಆದರೂ ಮಗಧೀರ ಸಿನಿಮಾಕ್ಕಾಗಿ ರಾಜಮೌಳಿ ಅವರು ನನ್ನನ್ನು ಹೈದರಾಬಾದ್​ಗೆ ಕರೆತಂದು ಜೀವನ ನೀಡಿದರು. ಮಗಧೀರ ಚಿತ್ರದ ನಂತರ ತೆಲುಗು ಪ್ರೇಕ್ಷಕರು ನನಗೆ ಬಹಳ ಪ್ರೀತಿ ನೀಡಿದ್ದಾರೆ. ನನ್ನ ವೃತ್ತಿಜೀವನದಲ್ಲಿ ಏಳಿಗೆಗೆ ಅವರೇ ಕಾರಣ. ಇಲ್ಲಿಯವರೆಗೆ ಖಳನಾಯಕನಾಗಿ ಕಾಣಿಸಿಕೊಂಡಿದ್ದೇನೆ. ರಾಜಮೌಳಿ ಮತ್ತು ರಮಾ ರಾಜಮೌಳಿ ಅವರಿಂದ ನಾಯಕನಾಗಿ ನಟಿಸಲು ಸಾಧ್ಯವಾಯಿತು. ಅಹೋ ವಿಕ್ರಮಾರ್ಕಾ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಅವರೇ ಕಾರಣ. ಇದು ತುಂಬಾ ಖುಷಿ ಕೊಟ್ಟಿದೆ ಎಂದು ಹೇಳಿದರು.

    ದೇವ್​ ಗಿಲ್​ ಬಗ್ಗೆ ಸಿನಿಮಾದ ನಿರ್ದೇಶಕ ಪೇಟ ತ್ರಿಕೋಟಿ ಮಾತನಾಡಿ, ಮಗಧೀರ ಚಿತ್ರದಿಂದ ದೇವಗಿಲ್ ಸಂಪರ್ಕಕ್ಕೆ ಬಂದಿದ್ದರು. ಹೀರೋ ಆಗಿ ಸಿನಿಮಾ ಮಾಡಬೇಕು ಅಂತ ಹೇಳುತ್ತಿದ್ದರು. ಪೊಲೀಸ್ ಕಥೆಯೊಂದಿಗೆ ಈ ಸಿನಿಮಾ ಆರಂಭಿಸಿದ್ದೇವೆ. ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರ ಖಂಡಿತ ಮನರಂಜನೆ ನೀಡುತ್ತದೆ ಎಂದಿದ್ದಾರೆ. (ಏಜೆನ್ಸೀಸ್​​)

    ವಿಶ್ವ ಯೋಗ ದಿನ; ಹಿಮಭರಿತ ಪರ್ವತಗಳ ಶಿಖರಗಳಿಂದ ಮರಳಿನ ದಿಬ್ಬಗಳವರೆಗೆ ಸೈನಿಕರ ಯೋಗಾಸನ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts