More

    ಶಾಲೆಯಲ್ಲಿ ಮಳೆನೀರು ಕೊಯ್ಲು, ಸೋಲಾರ್ ವ್ಯವಸ್ಥೆ : ವಗ್ಗ ಸರ್ಕಾರಿ ಹೈಸ್ಕೂಲ್‌ನಲ್ಲಿ ಸ್ವಾವಲಂಬನೆಯತ್ತ ಹೆಜ್ಜೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಹರಿದು ಹೋಗುವ ಮಳೆ ನೀರನ್ನು ಮಳೆಕೊಯ್ಲು ವ್ಯವಸ್ಥೆಯ ಮೂಲಕ ಭೂಮಿಗೆ ಇಂಗಿಸಿ ಅಂತರ್ಜಲ ಹೆಚ್ಚಿಸುವ ಹಾಗೂ ಸೂರ್ಯನ ಬೆಳಕಿನಿಂದ ಸೋಲಾರ್ ವಿದ್ಯುತ್ ಪಡೆಯುವ ಬಗ್ಗೆ ಪ್ರಾಯೋಗಿಕ ಪಾಠ ಶಾಲೆಯಲ್ಲಿಯೇ ಸಿಕ್ಕರೆ ವಿದ್ಯಾರ್ಥಿಗಳು ಪ್ರೇರಣೆ ಪಡೆಯಲು ಸಾಧ್ಯವಿದೆ. ಇಂತಹದೊಂದು ಪ್ರಯತ್ನವನ್ನು ವಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಮಾಡಲಾಗಿದೆ.

    ಎಸ್ಸೆಸ್ಸೆಲ್ಸಿಯಲ್ಲಿ ನೂರು ಶೇಕಡ ಫಲಿತಾಂಶದ ಜತೆಗೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಮನ್ನಣೆ ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ವಗ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಮಳೆ ನೀರು ಇಂಗಿಸುವ ಹಾಗೂ ಸೋಲಾರ್ ವ್ಯವಸ್ಥೆ ಅಳವಡಿಸುವ ಕಾರ್ಯ ನಡೆದಿದೆ. ದಾನಿಗಳ ನೆರವಿನಿಂದ 3.5ಲಕ್ಷ ರೂ.ವೆಚ್ಚದಲ್ಲಿ ಮಳೆ ಕೊಯ್ಲು ವ್ಯವಸ್ಥೆ ಹಾಗೂ 30 ಲಕ್ಷ ರೂ.ವೆಚ್ಚದಲ್ಲಿ ಸೋಲಾರ್ ಪಾನಲ್ ಅಳವಡಿಸಿ ಮುಂದಿನ ದಿನಗಳಲ್ಲಿ ನೀರು ಹಾಗೂ ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗುವ ಯೋಜನೆ ರೂಪಿಸಲಾಗಿದೆ.

    ಶಾಲೆಯ ಒಂದು ಪಾರ್ಶ್ವದಲ್ಲಿ ಕೊಳವೆಬಾವಿ ಅದರ ಸುತ್ತಲೂ 6 ಅಡಿ ಅಗಲ, 10 ಅಡಿ ಉದ್ದ ಮತ್ತು 40 ಅಡಿ ಆಳದ ಹೊಂಡವನ್ನು ಮಾಡಿ ಅದರಲ್ಲಿ ವೃತ್ತಾಕಾರದ ಬಾವಿ ರಿಂಗನ್ನು ಬೋರ್‌ವೆಲ್‌ಗೆ ಹಾನಿಯಾಗದಂತೆ ಅಳವಡಿಸಿ, ರಿಂಗ್ ಹೊರ ಭಾಗದಲ್ಲಿ ಸುತ್ತಲೂ ಜಲ್ಲಿ ಕಲ್ಲುಗಳನ್ನು ತುಂಬಿಸಿ ಶಾಲೆಯ ಛಾವಣಿ ಹಾಗೂ ಸಭಾಂಗಣದ ಮೇಲ್ಛಾವಣಿಯಿಂದ ಬರುವ ಮಳೆ ನೀರೆಲ್ಲಾ ಅದರಲ್ಲಿ ಇಂಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಸೋಲಾರ್ ಮೂಲಕ ವಿದ್ಯುತ್ ಸ್ವಾವಲಂಬನೆ

    ಸೋಲಾರ್ ವ್ಯವಸ್ಥೆಯ ಮೂಲಕ ಶಾಲೆಯಲ್ಲಿಯೇ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಎಲ್ಲ ತರಗತಿ ಕೋಣೆಗಳು, ಮುಖ್ಯಶಿಕ್ಷಕರ ಕಚೇರಿ, ಅಧ್ಯಾಪಕರ ಕೊಠಡಿ, ಕಂಪ್ಯೂಟರ್ ಲ್ಯಾಬ್‌ನ ಲೈಟ್ ಹಾಗೂ ಫ್ಯಾನ್‌ಗಳು ಸೋಲಾರ್ ಮೂಲಕ ಕಾರ್ಯನಿರ್ವಹಿಸುತ್ತವೆ.

    ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ಉತ್ತಮ ಫಲಿತಾಂಶ ಬರುತ್ತಿದೆ. ದಾನಿಗಳ ಸಹಕಾರದಿಂದ ಶಾಲೆಗೆ ಮಳೆ ನೀರು ಇಂಗಿಸಿ ಅಂತರ್ಜಲ ಹೆಚ್ಚಿಸುವ ವ್ಯವಸ್ಥೆ ಮತ್ತು ಸೋಲಾರ್ ವ್ಯವಸ್ಥೆಯನ್ನೂ ಮಾಡಲಾಗಿದೆ.

    ಆದಂ ಸಾಹೇಬ್, ಮುಖ್ಯಶಿಕ್ಷಕಿ, ವಗ್ಗ ಸರ್ಕಾರಿ ಪ್ರೌಢ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts