More

    ಪುತ್ರ ಪ್ರೇಮಕ್ಕೆ ಅಮಾನತಾದ್ಳು ಬೆಂಗಳೂರಿನ ರೈಲ್ವೆ ಉದ್ಯೋಗಿ: ರೈಲ್ವೆ ಗೆಸ್ಟ್​ ಹೌಸ್​ನಲ್ಲಿದ್ದ ಕರೋನಾ ಪೀಡಿತ ಪುತ್ರ!

    ಬೆಂಗಳೂರು: ಜರ್ಮನಿಯಿಂದ ಹಿಂದಿರುಗಿದ ಕರೊನಾ ಪೀಡಿತ ಮಗನನ್ನು ರೈಲ್ವೆಯ ಬೆಂಗಳೂರಿನ ರೆಸ್ಟ್​ ಹೌಸ್​ನಲ್ಲಿ ಬಚ್ಚಿಟ್ಟ ಉದ್ಯೋಗಿಯೊಬ್ಬರನ್ನು ನೈಋತ್ಯ ರೈಲ್ವೆ ಶುಕ್ರವಾರ ಅಮಾನತುಗೊಳಿಸಿದೆ ಎಂದು ರೈಲ್ವೆ ವಕ್ತಾರ ಇ ವಿಜಯ ಪಿಟಿಐಗೆ ತಿಳಿಸಿದ್ದಾರೆ.

    ಅತಿಯಾದ ಪುತ್ರ ಪ್ರೇಮ ತೋರಿದ ಆ ಮಹಿಳೆ ಮಗ ಜರ್ಮನಿಯಿಂದ ಮರಳಿದ ವಿಚಾರವನ್ನು ಅಧಿಕೃತರಿಗೆ ತಿಳಿಸದೇ ತಪ್ಪೆಸಗಿದ್ದಲ್ಲದೆ, ಆತನನ್ನು ರೈಲ್ವೆಯ ರೆಸ್ಟ್ ಹೌಸ್​ನಲ್ಲಿ ಬಚ್ಚಿಡುವ ಮೂಲಕ ಅಲ್ಲಿದ್ದ ಉದ್ಯೋಗಿಗಳ ಜೀವವನ್ನೂ ಅಪಾಯಕ್ಕೆ ತಳ್ಳಿದ್ದಾರೆ. ಈ ಕಾರಣಕ್ಕೆ ಆಕೆಯನ್ನು ತತ್​ಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಈ ಮಹಿಳೆ ರೈಲ್ವೆಯಲ್ಲಿ ಅಸಿಸ್ಟೆಂಟ್ ಪರ್ಸೊನೆಲ್ ಆಫೀಸರ್ (ಟ್ರಾಫಿಕ್​) ಆಗಿ ಕೆಲಸ ಮಾಡುತ್ತಿದ್ದರು ಎಂದು ವಿಜಯಾ ತಿಳಿಸಿದ್ದಾರೆ.

    ಘಟನೆಯ ವಿವರ ಹೀಗಿದೆ- ಆಕೆಯ 25 ವರ್ಷದ ಪುತ್ರ ಜರ್ಮನಿಯಿಂದ ಸ್ಪೇನ್ ಮೂಲಕ ಮಾರ್ಚ್ 13 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದ. ಅಲ್ಲಿದ್ದ ಆರೋಗ್ಯ ಅಧಿಕಾರಿಗಳು ಆತನ ಕೈಗೆ ಸ್ಟ್ಯಾಂಪಿಂಗ್ ಮಾಡಿದ್ದರು. ಮಾರ್ಚ್ 18ರಂದು ಆತನಿಗೆ Covid19 ಸೋಂಕು ತಗುಲಿರುವುದು ಧೃಡಪಟ್ಟಿದೆ. ಆಕೆ ಭ್ರಮೆಯಿಂದ ತನ್ನ ಕುಟುಂಬ ರಕ್ಷಿಸುವ ಕ್ರಮ ತೆಗೆದುಕೊಂಡರೂ ನಮ್ಮೆಲ್ಲರ ಜೀವವನ್ನು ಅಪಾಯಕ್ಕೆ ತಳ್ಳಿದ್ದಾರೆ ಎಂದು ರೈಲ್ವೆ ವಕ್ತಾರರು ವಿವರಿಸಿದ್ದಾರೆ.

    ಕರ್ನಾಟಕ ಎಪಿಡೆಮಿಕ್ (ಕರ್ನಾಟಕ ಎಪಿಡೆಮಿಕ್ ಡಿಸೀಸಸ್​ Covid19 ರೆಗುಲೇಷನ್ಸ್​ 2020) ಕಾಯ್ದೆ ಪ್ರಕಾರ, ಈ ಸೋಂಕು ಹೊಂದಿದ ಯಾವುದೇ ದೇಶದಿಂದ ಬಂದ ಯಾವುದೇ ವ್ಯಕ್ತಿ ಅಥವ ಅವರೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿ ಕೂಡ ವಿಷಯವನ್ನು ಬಹಿರಂಗಪಡಿಸಬೇಕು ಅಲ್ಲದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಸ್ಪತ್ರೆಗೆ ದಾಖಲಾಗಬೇಕು. ಆದರೆ, ಆಕೆ ಪುತ್ರನೊಂದಿಗೆ ಸಂಪರ್ಕ ಹೊಂದಿದ್ದು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಇದರ ಬದಲಾಗಿ ಪುತ್ರನನ್ನು ರೈಲ್ವೆಯ ರೆಸ್ಟ್ ಹೌಸ್​ನಲ್ಲಿ ಮಾರ್ಚ್ 13 ರಿಂದ 15ರ ತನಕ ಇರಿಸಿದ್ದಳು. ಅಲ್ಲಿಗೆ ರೈಲ್ವೆ ಅಧಿಕಾರಿಗಳು, ಸಾರ್ವಜನಿಕರು ಎಲ್ಲರೂ ಹೋಗುತ್ತಿರುವ ಕಾರಣ ಅವರೆಲ್ಲರ ಜೀವಕ್ಕೂ ಇದರಿಂದ ಅಪಾಯ ಉಂಟಾಗಿದೆ. ಇದೀಗ ಎಲ್ಲರನ್ನೂ ಗುರುತಿಸಿ ಅವರಿಗೂ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್​)

    ಕರೊನಾ ಭೀತಿ: ಸೀನಿದಾತನಿಗೆ ಬಿತ್ತು ಗೂಸಾ!

    ಡೆಡ್ಲಿ ಕರೊನಾ ವೈರಸ್​ಗೆ ದೇಶದಲ್ಲಿ 5ನೇ ಬಲಿ: ಜೈಪುರದಲ್ಲಿ ಇಟಲಿ ಪ್ರವಾಸಿಗ ಮೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts