More

    ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ; ಹೇಳಿದ್ದೇನು?

    ನವದೆಹಲಿ: 18ನೇ ಲೋಕಸಭೆ ಅಧಿವೇಶನದ ಮೂರನೇ ದಿನವಾದ ಬುಧವಾರ (ಜೂನ್​​​ 26) ಓಂ ಬಿರ್ಲಾ ಅವರು ಸದನದ ಸ್ಪೀಕರ್ ಆಗಿ ಆಯ್ಕೆಯಾದರು. ಇದಾದ ಬಳಿಕ ಲೋಕಸಭೆಯ ಸದಸ್ಯರು ಓಂ ಬಿರ್ಲಾ ಅವರಿಗೆ ಶುಭ ಹಾರೈಸಿದರು. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಅವರಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದರು. ಇದೇ ಸಮಯದಲ್ಲಿ ಸ್ಪೀಕರ್​ ಅವರಿಗೆ ಮನವಿ ಸಲ್ಲಿಸಿದ ಅವರು, ಈ ಬಾರಿ ನಮಗೆ ಮಾತನಾಡಲು ಅವಕಾಶ ನೀಡುತ್ತೀರಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

    ಇದನ್ನು ಓದಿ: ಜುಲೈನಲ್ಲಿ ರಷ್ಯಾಕ್ಕೆ ಪ್ರಧಾನಿ ಮೋದಿ ಭೇಟಿ?; ಮಹತ್ವದ ಒಪ್ಪಂದಗಳಿಗೆ ಸಹಿ ಸಾಧ್ಯತೆ

    ಸದನದಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿಯವರು ಮಾಡಿದ ಮೊದಲ ಭಾಷಣ ಇದಾಗಿದೆ. ಸಭಾಧ್ಯಕ್ಷರೇ, ಸತತ ಎರಡನೇ ಬಾರಿಗೆ ಆಯ್ಕೆಯಾಗಿರುವ ನಿಮಗೆ ಅಭಿನಂದಿಸುತ್ತೇನೆ. ಇಡೀ ವಿರೋಧ ಪಕ್ಷ ಮತ್ತು I.N.D.I.A. ಮೈತ್ರಿಕೂಟದ ಪರವಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ. ಈ ಸದನವು ಭಾರತದ ಜನರ ಧ್ವನಿಯ ಭರವಸೆಯಾಗಿದೆ ಮತ್ತು ನೀವು ಆ ಧ್ವನಿಯ ಅಂತಿಮ ತೀರ್ಪುಗಾರರು. ಸರ್ಕಾರಕ್ಕೆ ರಾಜಕೀಯ ಶಕ್ತಿ ಇದೆ. ಪ್ರತಿಪಕ್ಷಗಳು ದೇಶದ ಧ್ವನಿ ಎತ್ತುತ್ತವೆ. ಈ ಬಾರಿ ನೀವು ನಮಗೆ ಮಾತನಾಡಲು ಅವಕಾಶ ನೀಡುತ್ತೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದರು.

    ನಿಮ್ಮ ಕೆಲಸವನ್ನು ಮಾಡಲು ವಿರೋಧ ಪಕ್ಷವು ನಿಮಗೆ ಸಹಾಯ ಮಾಡಲು ಬಯಸುತ್ತದೆ. ಸಹಕಾರವು ನಂಬಿಕೆಯನ್ನು ಆಧರಿಸಿರುವುದು ಬಹಳ ಮುಖ್ಯ. ಆದ್ದರಿಂದ ಈ ಸದನದಲ್ಲಿ ಪ್ರತಿಪಕ್ಷಗಳ ಧ್ವನಿ ಪ್ರತಿನಿಧಿಸುವುದು ಬಹಳ ಮುಖ್ಯ. ಸದನದಲ್ಲಿ ಎಷ್ಟು ಕೆಲಸ ಮಾಡಿದ್ದಾರೆ ಎಂಬುದಲ್ಲ, ವಾಕ್​​​ ಸ್ವಾತಂತ್ರ್ಯ ಎಷ್ಟು ನೀಡಲಾಗಿದೆ ಎಂಬುದು ಪ್ರಶ್ನೆ. ಈ ಚುನಾವಣೆಯಲ್ಲಿ ಭಾರತದ ಜನತೆ ವಿರೋಧ ಪಕ್ಷಗಳು ಸಂವಿಧಾನವನ್ನು ರಕ್ಷಿಸುವ ನಿರೀಕ್ಷೆಯಲ್ಲಿದ್ದಾರೆ. ನೀವು ಸಂವಿಧಾನವನ್ನು ರಕ್ಷಿಸುವಿರಿ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​​)

    ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಮುಂದಾದ ಸರ್ಕಾರ​​​​; ಜೀವಾವಧಿ ಶಿಕ್ಷೆ ಜತೆಗೆ 1 ಕೋಟಿ ರೂ. ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts