More

    24 ಲಕ್ಷ ನೀಟ್ ಅಭ್ಯರ್ಥಿಗಳಿಗೆ ಉತ್ತರ ಸಿಗಬೇಕಿದೆ! ನೀವು ಈ ಚರ್ಚೆಗೆ ಸಿದ್ದರೇ? ಪ್ರಧಾನಿಗೆ ಸವಾಲೆಸೆದ ರಾಹುಲ್​

    ನವದೆಹಲಿ: ಈ ಹಿಂದೆಯೇ ನೀಟ್-ಯುಜಿ ವೈದ್ಯಕೀಯ ಪ್ರವೇಶದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೀಟ್‌ ಪರೀಕ್ಷಾ ಅಕ್ರಮಗಳಿಂದ 24 ಲಕ್ಷಕ್ಕೂ ಅಭ್ಯರ್ಥಿಗಳ ಕನಸು ಭಗ್ನಗೊಂಡಿದೆ. ಈ ಪ್ರಶ್ನೆಗೆ ಪ್ರಧಾನಿಗಳು ಉತ್ತರಿಸಬೇಕಿದೆ. ವಿದ್ಯಾರ್ಥಿಗಳ ಧ್ವನಿಯಾಗಿ ಸಂಸತ್ತಿನಲ್ಲಿ ಈ ಕುರಿತು ಪ್ರಶ್ನಿಸುವೆ ಎಂದು ರಾಹುಲ್ ಹೇಳಿದ್ದರು. ಇದೀಗ ಮೋದಿಗೆ ಪತ್ರ ಬರೆದು, ಸವಾಲು ಎಸೆದಿರುವ ಕಾಂಗ್ರೆಸ್ ನಾಯಕ, ಚರ್ಚೆಗೆ ಒಪ್ಪುತ್ತೀರಾ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

    ನಾಳೆ (ಜು.03) ನೀಟ್​ ಕುರಿತು ಸಂಸತ್ತಿನಲ್ಲಿ ಚರ್ಚೆ ಮಾಡಲು ಈ ಪತ್ರ ಬರೆಯುತ್ತಿದ್ದೇನೆ. 24 ಲಕ್ಷ ನೀಟ್​ ಅಭ್ಯರ್ಥಿಗಳ ಧ್ವನಿಯಾಗಿ ನಾನು ಈ ಚರ್ಚೆಗೆ ಹಾಜರಾಗುವೆ. ಅವರೆಲ್ಲರೂ ಉತ್ತರಕ್ಕೆ ಅರ್ಹರು. ಈ ಚರ್ಚೆಗೆ ನೀವು ಒಪ್ಪುತ್ತೀರಾ ಎಂಬ ನಂಬಿಕೆ ನನಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

    ನಿಮಗೆ ತಿಳಿದಿರುವಂತೆ, ಜೂನ್ 28ರಂದು ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯದ ಚರ್ಚೆಗೆ ವಿರೋಧ ಪಕ್ಷದ ಮನವಿಯನ್ನು ನಿರಾಕರಿಸಲಾಯಿತು. ನಿನ್ನೆ ಪ್ರತಿಪಕ್ಷಗಳು ಈ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಮನವಿ ಮಾಡಿತ್ತು. ಲೋಕಸಭೆಯ ಗೌರವಾನ್ವಿತ ಸ್ಪೀಕರ್ ಅವರು ಈ ಕುರಿತು ಸರ್ಕಾರದ ಜತೆ ಚರ್ಚಿಸುವುದಾಗಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದ್ದರು.

    ಇದನ್ನೂ ಓದಿ: ಅಯೋಧ್ಯೆಯ ಮಾನಹಾನಿ ಮಾಡುವ ಪ್ರಯತ್ನ; ಸಿಎಂ ಯೋಗಿ ಆದಿತ್ಯನಾಥ್​​

    ಈ ಕ್ಷಣದಲ್ಲಿ, ಭಾರತದಾದ್ಯಂತ ಸುಮಾರು 24 ಲಕ್ಷ ನೀಟ್​ ಅಭ್ಯರ್ಥಿಗಳ ಜೀವನದ ಬಗ್ಗೆ ಮಾತ್ರ ನಮ್ಮ ಕಾಳಜಿ. ಲಕ್ಷಾಂತರ ಕುಟುಂಬಗಳು ತಮ್ಮ ಮಕ್ಕಳನ್ನು ಭವಿಷ್ಯ ರೂಪಿಸಲು ಅನೇಕ ರೀತಿಯಲ್ಲಿ ತ್ಯಾಗಗಳನ್ನು ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯು ಈ ವಿದ್ಯಾರ್ಥಿಗಳ ಕನಸಿಗೆ ದ್ರೋಹ ಬಗೆದಿದೆ. ಇಂದು ಈ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ನಮ್ಮನ್ನು ಮತ್ತು ಸಾರ್ವಜನಿಕ ಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂದು ಎದುರು ನೋಡುತ್ತಿದ್ದಾರೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಳಪೆ ಫಾರ್ಮ್​​ ದಿನಗಳನ್ನು ನೆನೆದು ದ್ರಾವಿಡ್​ ಮುಂದೆ ವಿರಾಟ್​​​ ಭಾವುಕ! ಹೇಳಿಕೊಂಡ ಮಾತುಗಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts