More

    ಸಿಸಿಬಿ ವಶಕ್ಕೆ ರಾಗಿಣಿ …

    ಸ್ಯಾಂಡಲ್​ವುಡ್​ ನಟಿ ರಾಗಿಣಿ ಅವರ ಅಪಾರ್ಟ್​​ಮೆಂಟ್​ನಲ್ಲಿ ಶೋಧಕಾರ್ಯ ಮಾಡುವ ಮೂಲಕ, ಶುಕ್ರವಾರ ಬೆಳಿಗ್ಗೆ ಶಾಕ್​ ನೀಡಿದ್ದ ಸಿಸಿಬಿ ಪೊಲೀಸರು, ಇದೀಗ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ರಾಗಿಣಿ ಅವರನ್ನು ಸದ್ಯದಲ್ಲೇ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತದೆ.

    ಇದನ್ನೂ ಓದಿ: ನಾನೇ ಬರ್ತಿದ್ನಲ್ಲಾ ಅಂತ ರಾಗ ಎಳೆದ್ರು ರಾಗಿಣಿ: ಮೊಬೈಲ್, ಲ್ಯಾಪ್​ಟಾಪ್ ಸಿಸಿಬಿ ವಶ

    ಡ್ರಗ್ಸ್​ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್​ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಇಂದು ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್‌ ಲೇಔಟ್​ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್​ಗೆ ಸರ್ಚ್​​ ವಾರೆಂಟ್​ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ, ಶುರುಮಾಡಿದ್ದಾರೆ. ರಾಗಿಣಿ ಮನೆಯಲ್ಲೇ ಇದ್ದು, ಶೋಧ ಕಾರ್ಯಕ್ಕೆ ಸಹಕಾರ ನೀಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

    ಈ ಮಧ್ಯೆ, ರಾಗಿಣಿ ಅವರ ಮೊಬೈಲ್​, ಕಾರ್​ ಮತ್ತು ಮನೆಯ ಕೀಗಳನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ರಾಗಿಣಿ ಹೆಸರಿನಲ್ಲಿರುವ ಆಸ್ತಿ-ಪಾಸ್ತಿಯ ಕುರಿತಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರಾಗಿಣಿ ಅವರ ಕಾರನ್ನು ಶೋಧ ಮಾಡಿರುವ ಅಧಿಕಾರಿಗಳು, ಆ ಕಾರು ರಾಗಿಣಿ ಅವರ ತಾಯಿ ರೋಹಿಣಿ ದ್ವಿವೇದಿ ಹೆಸರಿನಲ್ಲಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

    ಇದನ್ನೂ ಓದಿ: ‘ಮಾದಕ’ ನಟಿಗೆ ಶುಕ್ರವಾರ ಬೆಳಗ್ಗೆಯೇ ಶಾಕ್​ !

    ಮನೆಯಲ್ಲಿ ಶೋಧ ಕಾರ್ಯ ಮುಗಿದ ನಂತರ ರಾಗಿಣಿ ಅವರನ್ನು ಸಿಸಿಬಿ ಕಚೇರಿಗೆ ಕರೆದುಕೊಕಂಡು ಹೋಗಲಾಗುತ್ತದೆ. ಅಲ್ಲಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುತ್ತದೆ.

    LIVE: ಸಿಸಿಬಿ ವಶದಲ್ಲಿ ‘ಮಾದಕ’ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts