More

    ರಸ್ತೆ ಕಾಮಗಾರಿ ಅರ್ಧಂಬರ್ಧ – ಮಳೆಗಾಲದಲ್ಲಿ ಡಾಂಬರು ಹಾಕಿ ಸಮಸ್ಯೆ ಸೃಷ್ಟಿಸಿದ ನಗರಸಭೆ – ದುರಸ್ತಿಯಾದ ಬಳಿಕ ಹೆಚ್ಚಿದ ಸಂಕಷ್ಟ


    ಪುತ್ತೂರು: ಕೆಲವು ಭಾಗದಲ್ಲಿ ರಸ್ತೆ ಹದಗೆಟ್ಟು ಹೋಗಿದೆಯೆಂದು ಸಂಪೂರ್ಣ ರಸ್ತೆಗೆ ಮಳೆ ಬರುವ ಕೆಲವು ದಿನಗಳ ಮೊದಲು ಡಾಂಬರೀಕರಣಕ್ಕೆ ಮುಂದಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಸ್ಥಗಿತವಾಗಿದೆ. ಡಾಂಬರು ಏಳಲಾರಂಭಿಸಿದ್ದು, ದ್ವಿಚಕ್ರ ವಾಹನ ಸವಾರರು ಓಡಾಡುವುದೇ ದುಸ್ತರವಾಗಿದೆ. ನಿತ್ಯ ಈ ರಸ್ತೆಯನ್ನೇ ಬಳಸುವ ಜನಪ್ರತಿನಿಽಗಳು ಹಾಗೂ ಅಽಕಾರಿ ವರ್ಗ ಜಾಣ ಕುರುಡು ಪ್ರದರ್ಶಿಸುತ್ತಿದೆ.


    ಪುತ್ತೂರು ಎಂ. ಜಿ. ರಸ್ತೆಯ ಚೇತನಾ ಆಸ್ಪತ್ರೆಯ ಸಮೀಪದಲ್ಲಿ ರಸ್ತೆ ಕೆಟ್ಟು ಹೋಗಿದ್ದು, ಅದನ್ನು ದುರಸ್ತಿ ಮಾಡಿ ಮಳೆಗಾಲ ಕಳೆದ ಬಳಿಕ ಸಂಪೂರ್ಣ ರಸ್ತೆಯನ್ನು ಡಾಂಬರು ಹಾಕಿ ದುರಸ್ತಿ ಮಾಡಬೇಕಾದ ಅಽಕಾರಿಗಳು ಪುತ್ತೂರು ಮುಖ್ಯ ರಸ್ತೆಯ ಶ್ರೀಧರ ಭಟ್ ಅಂಗಡಿಯ ಬಳಿಯಿಂದ ಕಿಲ್ಲೆ ಮೈದಾನದ ಬದಿಯಿಂದ ಕಲ್ಲಿಮಾರು ಪರ್ಲಡ್ಕವರೆಗೆ ರಸ್ತೆಗೆ ಡಾಂಬರು ಹಾಕಿದ್ದಾರೆ. ಡಾಂಬರು ಹಾಕುವ ಸಮಯದಲ್ಲೇ ಮಳೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕಾಮಗಾರಿಯನ್ನು ಸ್ಥಗಿತ ಮಾಡಲಾಗಿದೆ.

    ನಗರ ಸಭೆ ಸಮೀಪದ ಮೀನು ಮಾರುಕಟ್ಟೆ ಮುಂಭಾಗದಲ್ಲಿ ಡಾಂಬರು ಸಂಪೂರ್ಣ ಹಾಕದೆ ರಸ್ತೆಯಲ್ಲಿ ಏರು ತಗ್ಗು ನಿರ್ಮಾಣವಾಗಿದೆ. ಕೋರ್ಟ್ ರಸ್ತೆ ಸೇರುವ ಜಾಗದಲ್ಲಿಯೂ ಸಮರ್ಪಕವಾಗಿ ಕೆಲಸ ನಿರ್ವಹಿಸದ ಹಿನ್ನಲೆಯಲ್ಲಿ ದ್ವಿಚಕ್ರವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮೊಳಹಳ್ಳಿ ಶಿವರಾಯ ವೃತ್ತದ ಮುಂಭಾಗ ಜಲ್ಲಿ ಎದ್ದು ಹಳ್ಳಗಳು ನಿರ್ಮಾಣವಾಗಿದ್ದಲ್ಲದೆ ವಾಹನ ಸವಾರರಿಗೆ ವಾಹನ ನಿಯಂತ್ರಿಸಲಾಗದ ಸ್ಥಿತಿಯಿದೆ.

    ರಸ್ತೆಯ ಮೂಲೆಯಿಂದ ಮೂಲೆಗೆ ಡಾಂಬರು ಹಾಕುವುದು ಸಾಮಾನ್ಯ. ಆದರೆ ಈಗ ಹಾಕಿದ ಡಾಂಬರು ರಸ್ತೆಯ ಮಧ್ಯಕ್ಕೆ ಕೆಲವು ಭಾಗದಲ್ಲಿ ಅಂತ್ಯವಾಗಿದೆ. ಇದರಿಂದ ಡಾಂಬರು ಹಾಕುವ ಕೆಲಸ ವಹಿಸಿಕೊಂಡವರು ಇದೇ ಮೊದಲ ಬಾರಿ ಕೆಲಸ ನಿರ್ವಹಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಲಾರಂಭಿಸಿದೆ. ನಗರಸಭೆಯ ಸುತ್ತಲಲ್ಲೇ ಈ ರೀತಿಯ ಕಾಮಗಾರಿ ನಡೆದರೂ, ಅಲ್ಲಿನ ಅಽಕಾರಿಗಳು ಹೊರಬರದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

    ಮಳೆಗಾಲದಲ್ಲೇ ಕಾಮಗಾರಿ ಯಾಕೆ?
    ಹಲವು ಮಂದಿ ಕಚೇರಿಗೆ ತೆರಳುವ ನೌಕರರು ವಾಹನ ಅಪಘಾತಕ್ಕೊಳಗಾಗಿ ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದರೂ ಇದಕ್ಕೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಬರುವ ಸಂದರ್ಭ ಬಳಸುವ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಪರಿಹಾರ ಒದಗಿಸಿವ ಕಾರ್ಯವನ್ನು ಮಾಡುತ್ತಿಲ್ಲ. ಕರಾವಳಿ ಭಾಗದಲ್ಲಿ ಮೇ ಕೊನೆ ಅಥವಾ ಜೂನ್ ಪ್ರಾರಂಭದಲ್ಲಿ ಮಳೆಯಾಗುವ ಮಾಹಿತಿ ಅಽಕಾರಿ ವರ್ಗಕ್ಕೆ ಇದ್ದರೂ, ಇದೇ ಸಮಯದಲ್ಲಿ ಡಾಂಬರು ಹಾಕುವುದಕ್ಕೆ ಮುಂದಾಗುವ ಹಿಂದಿನ ಗುಟ್ಟೇನು ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.


    ಹಿಂದೆ ಪರಿಹಾರ ನೀಡಲಾಗಿತ್ತು!
    ನಗರಸಭೆಯ ವ್ಯಾಪ್ತಿಯಲ್ಲಿ ರಸ್ತೆಗಳು ಕೆಟ್ಟು ಹೋಗಿ ಅದರಿಂದ ಅಪಘಾತವಾಗಿತ್ತು. ಈ ಬಗ್ಗೆ ಅಪಘಾತಕ್ಕೊಳಗಾದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊನೆಗೆ ನಗರಸಭೆಯ ಅಽಕಾರಿ ವರ್ಗವೇ ಸಮಸ್ಯೆಗೊಳಗಾದವರಿಗೆ ಪರಿಹಾರ ವಿತರಣೆ ಮಾಡುವ ಹಂತಕ್ಕೆ ತಲುಪಿತ್ತು. ಆದರೆ ಈಗ ಸಮಸ್ಯೆಗೊಳಗಾದವರು ಠಾಣೆಯ ಮೆಟ್ಟಲು ಹತ್ತಲು ಹಿಂದೇಟು ಹಾಕುತ್ತಿರುವುದರಿಂದ ನಗರಸಭೆಯ ಅಽಕಾರಿ ವರ್ಗಕ್ಕೂ ರಸ್ತೆಯ ಬಗ್ಗೆ ಹೆಚ್ಚಿನ ಗಮನಕೊಡಲು ಸಮಯ ಸಿಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.


    ರಸ್ತೆಗೆ ಡಾಂಬರು ಹಾಕಿ ಯಂತ್ರ ಸ್ಥಳದಿಂದ ತೆರವು ಮಾಡುವ ಮೊದಲೇ ಕೆಲವು ಭಾಗದಲ್ಲಿ ಜಲ್ಲಿ ಕಿತ್ತು ಬರಲು ಪ್ರಾರಂಭವಾಗಿದೆ. ಮಳೆ ಪ್ರಾರಂಭವಾದ ಬಳಿಕ ಎಲ್ಲೆಂದರಲ್ಲಿ ಜಲ್ಲಿ ಹರಡಿಕೊಂಡು ದ್ವಿಚಕ್ರ ವಾಹನದಲ್ಲಿ ಓಡಾಡುವುದೇ ಕಷ್ಟಕರವಾಗಿದೆ. ಈಗ ಮಾಡಿದ ರಸ್ತೆಗಿಂತ ಮೊದಲಿನ ರಸ್ತೆಯೇ ಎಷ್ಟೋ ವಾಸಿಯಾಗಿತ್ತು.
    | ಚರಣ್
    ವಾಹನ ಸವಾರ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts