More

    ಬಿಜೆಪಿ ಮೇಲೆ ದಾಳಿ ಮಾಡಿದ್ದೇ ವಿನಃ ಹಿಂದೂಗಳ ವಿರುದ್ಧ ಅಲ್ಲ: ರಾಹುಲ್​ ಹೇಳಿಕೆ ಸಮರ್ಥಿಸಿಕೊಂಡ ಪ್ರಿಯಾಂಕಾ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಎಲ್ಲರ ಮುಂದೆ ರಾಹುಲ್​ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ಅಣ್ಣನ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ, ಅವರ ಮಾತು ಬಿಜೆಪಿಗೆ ಅನ್ವಯಿಸುತ್ತದೆ ಅಷ್ಟೇ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜನರು ಕಚೇರಿಗಳಿಗೆ ಅಲೆದಾಡದಂತೆ ನೋಡಿಕೊಳ್ಳಿ

    ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಮೊದಲ ಭಾಷಣದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಸೋಮವಾರ (ಜು.1) ಆರೋಪಿಸಿ, ಕ್ಷಮೆಯಾಚಿಸುವಂತೆ ಒತ್ತಾಯಿಸಿತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖಂಡನೆ ವ್ಯಕ್ತಪಡಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗ ಕ್ಷಮೆಗೆ ಆಗ್ರಹಿಸಿದರು.

    “ಸದನದಲ್ಲಿ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ದಿನದ 24 ಗಂಟೆ ಹಿಂಸೆ ಮತ್ತು ದ್ವೇಷದಲ್ಲಿ ತೊಡಗುತ್ತಾರೆ. ಅವರು ಹಿಂದೂಗಳೇ ಅಲ್ಲ. ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳುಗಳನ್ನು ಹರಡುವುದಿಲ್ಲ ಎಂದು ಹೇಳಿದರು. ಈ ವೇಳೆ ರಾಹುಲ್​ಗಾಂಧಿ ಅವರ ಭಾಷಣವನ್ನು ತಡೆದ ಮೋದಿ, ಈ ವಿಚಾರ ತುಂಬಾ ಗಂಭೀರವಾಗಿದೆ. ಇಡೀ ಹಿಂದೂ ಸಮುದಾಯವನ್ನು ಹಿಂಸಾಚಾರದೊಂದಿಗೆ ಜೋಡಿಸುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಸದನದಲ್ಲಿ ‘ಹಿಂದೂ’ ಗದ್ದಲ; ರಾಹುಲ್​ಗಾಂಧಿ ಹೇಳಿಕೆಗೆ ಗಂಭೀರ ವಿಚಾರ ಎಂದು ‘ನಮೋ’ ಖಂಡನೆ

    ಇನ್ನು ರಾಹುಲ್ ಗಾಂಧಿ ಬೆಂಬಲಿಸಿದ ಪ್ರಿಯಾಂಕಾ, “ಅವರು ಯಾರನ್ನೂ ಅವಮಾನಿಸಿಲ್ಲ, ಬಿಜೆಪಿ ಮತ್ತು ಪಕ್ಷದ ನಾಯಕರ ಬಗ್ಗೆ ಮಾತನಾಡಿದ್ದಾರೆಯೇ ಹೊರೆತು ಹಿಂದೂಗಳ ವಿರುದ್ಧವಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

    ಹುಚ್ಚಾಟ ಇದೇ ರೀತಿ ಮುಂದುವರಿದರೆ… ಇನ್ನಾದರೂ ಎಚ್ಚೆತ್ತುಕೊಳ್ಳಿ ಪ್ರವಾಸಿಗರೆ!

    ಊಟವಿಲ್ಲದೇ ಮಲಗಿದ ದಿನಗಳು! ಬಟ್ಟೆ ಸೋಪು ಮಾರಾಟದಿಂದ ಸ್ಕೂಲ್​ ಫೀಸ್​ ಕಟ್ಟಿದ ವ್ಯಕ್ತಿ ಇಂದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts