More

    ಕಚೇರಿಗಳ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

    ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಕಂದಾಯ ದಿನಾಚರಣೆ ಹಿನ್ನೆಲೆಯಲ್ಲಿ ಸ್ವಚ್ಛತಾ ಶ್ರಮದಾನ ಮತ್ತು ಸಸಿ ನೆಡುವ ಕಾರ್ಯಕ್ರಮ ನಡೆಯಿತು.

    ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ನೌಕರರ ಸಂದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಟಿ. ಭೂಬಾಲನ್​ ಸಿಬ್ಬಂದಿ ಜತೆಗೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಕೈಗೊಂಡರು.

    ನಂತರ ಜಿಪಂ ರಸ್ತೆಯಲ್ಲಿನ ಚುನಾವಣಾ ವೇರ್​ಹೌಸ್​ ಆವರಣದಲ್ಲಿ ಗಿಡ ನೆಟ್ಟು ಸಸಿಗೆ ನೀರುಣಿಸಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ನಿರಂತರವಾಗಿ ನಡೆಯಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ತಿಳಿಸಿದರು.

    ವಿವಿಧ ಇಲಾಖೆಗಳು ಅರಣ್ಯ ಇಲಾಖೆಯ ಸಮನ್ವಯ ಸಾಧಿಸಿ ಚುನಾವಣಾ ವೇರ್​ಹೌಸ್​ನ ಖಾಲಿ ಜಾಗದಲ್ಲಿ ಐದು ನೂರು ಸಸಿಗಳನ್ನು ನೆಡುವ ಮೂಲಕ ಅರಣ್ಯೀಕರಣಗೊಳಿಸಿ ಪರಿಸರ ಪ್ರೀತಿ ತೋರಿಸಬೇಕು. ಈ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ತಹಸೀಲ್ದಾರ್​ ಕವಿತಾ, ಕಂದಾಯ ಇಲಾಖೆ ನೌಕರ ಸಂದ ಅಧ್ಯಕ್ಷ ಜಿ.ಎಸ್​. ರಾಜಾಪೂರ, ಗಣೇಶ ಡೋಬಳೆ, ಎಸ್​.ಎಸ್​. ತೇರದಾಳ, ಮಹಿಪತಿ ದೇಸಾಯಿ, ಪವನ ಕುಮಾರ ನಿಂಬಾಳ್ಕರ್​, ರಮೇಶ್​ ಚವಾಣ, ಮಹೇಶ ಬಳಗಾನೂರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts