More

    ಪ್ರಿನ್ಸ್ ಚಾರ್ಲ್ಸ್ ಅನ್ನೂ ಬಿಡಲಿಲ್ಲ ಕರೊನಾ ವೈರಸ್ ಸೋಂಕು: 71 ವರ್ಷ ವಯಸ್ಸಿನ ಭಾವಿ ರಾಜನನ್ನೂ ಕಾಡುತ್ತಿದೆ COVID19

    ಲಂಡನ್: ಫ್ಯೂಚರ್ ಕಿಂಗ್‍ ಪ್ರಿನ್ಸ್‍ ಚಾರ್ಲ್ಸ್‍ (71) ಅವರನ್ನೂ ಕರೊನಾ ವೈರಸ್ ಸೋಂಕು ಕಾಡಿದ್ದು COVID19 ಟೆಸ್ಟ್‍ನಲ್ಲಿ ಪಾಸಿಟಿವ್ ಬಂದಿದೆ ಎಂದು ಕ್ಲಾರೆನ್ಸ್ ಹೌಸ್ ಬುಧವಾರ ಹೇಳಿದೆ.

    ಕರೊನಾ ಸೋಂಕಿನ ಸಣ್ಣ ಪ್ರಮಾಣದ ಗುಣಲಕ್ಷಣಗಳು ಅವರಲ್ಲಿ ಕಂಡುಬಂದಿದ್ದಾಗ್ಯೂ, ಅವರ ಆರೋಗ್ಯ ಸ್ಥಿರವಾಗಿದೆ. ಕಳೆದ ಕೆಲವು ದಿನಗಳಿಂದ ಅವರು ಮನೆಯಿಂದಲೇ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದಾರೆ. ಅವರು ಸದ್ಯ ಸೆಲ್ಫ್ ಐಸೋಲೇಷನ್‍ಗೆ ಒಳಗಾಗಿದ್ದಾರೆ. ಅದೇ ರೀತಿ,  ಅವರ ಪತ್ನಿ ಕ್ಯಾಮಿಲಾ (72) COVID19 ಟೆಸ್ಟ್ ಮಾಡಿಸಿಕೊಂಡಿದ್ದು, ನೆಗೆಟಿವ್ ಫಲಿತಾಂಶ ಬಂದಿದೆ. ಆದಾಗ್ಯು ಅವರು ಸ್ಕಾಟ್ಲೆಂಡ್‍ನಲ್ಲಿ ಸೆಲ್ಫ್ ಐಸೋಲೇಷನ್‍ಗೆ ಒಳಗಾಗಿದ್ದಾರೆ.

    ಪ್ರಿನ್ಸ್ ಮತ್ತು ಅವರ ಪತ್ನಿಯ COVID19 ಟೆಸ್ಟ್‍ಗಳನ್ನು ಅಬ್ರೆಡೀನ್‍ಶೈರ್‍ನ ಎನ್‍ಎಚ್‍ಎಸ್‍ನಲ್ಲಿ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಿನ್ಸ್‍ಗೆ ಯಾರಿಂದ ಈ ಸೋಂಕು ತಗುಲಿದೆ ಎಂಬುದನ್ನು ಪತ್ತೆ  ಹೆಚ್ಚಲಾಗದು. ಅವರು ಸಾರ್ವಜನಿಕ ಜೀವನದಲ್ಲಿರುವ ಕಾರಣ ಇತ್ತೀಚಿನ ವಾರಗಳಲ್ಲಿ ಅವರು ಸಾಕಷ್ಟು ಜನರನ್ನು ಭೇಟಿ ಮಾಡಿದ್ದಾರೆ. ಮೀಟಿಂಗ್‍ಗಳಲ್ಲಿ ಭಾಗಿಯಾಗಿದ್ದಾರೆ ಎಂದಿರುವ ಕ್ಲಾರೆನ್ಸ್ ಹೌಸ್‍ ಒಂದು ಸಂದೇಹವನ್ನು ಬಹಿರಂಗಪಡಿಸಿದೆ.

    ಪ್ರಿನ್ಸ್ ಚಾರ್ಲ್ಸ್‍ ಅವರು ಮೊನಾಕೋದ ಪ್ರಿನ್ಸ್ ಅಲ್ಬರ್ಟ್ ಅವರನ್ನು ಈ ತಿಂಗಳ ಆದಿಯಲ್ಲಿ ಭೇಟಿಯಾಗಿದ್ದರು. ಅಲ್ಬರ್ಟ್‍ ಅವರಿಗೆ COVID19 ಟೆಸ್ಟ್‍ನಲ್ಲಿ ಪಾಸಿಟಿವ್ ರಿಸಲ್ಟ್ ಬಂದಿತ್ತು. ಅರವತ್ತೆರಡು ವರ್ಷದ ಇವರು ಲಂಡನ್‍ನಲ್ಲಿ ನಡೆದ ವಾಟರ್ ಏಯ್ಡ್ ಇವೆಂಟ್‍ನಲ್ಲಿ ಪ್ರಿನ್ಸ್‍ ಆಫ್‍ ವೇಲ್ಸ್‍ ಎದುರೇ ಕುಳಿತಿದ್ದರು.

    ಇನ್ನು, ಯುನೈಟೆಡ್ ಕಿಂಗ್ಡಂನ ಕ್ವೀನ್  ಸದ್ಯ ವಿಂಡ್ಸರ್ ಕ್ಯಾಸ್ಟ್ಲೆನಲ್ಲಿ ವಾಸ್ತವ್ಯವಿದ್ದು, ಪ್ಲ್ಯಾನ್‍ಗಿಂತ ಒಂದು ವಾರ ಮುಂಚಿತವಾಗಿಯೇ ಸ್ಥಳಕ್ಕೆ ತಲುಪಿದ್ದಾರೆ. 93 ವರ್ಷದ  ಕ್ವೀನ್ ಮತ್ತು ಅವರ ಪತಿ 98 ವರ್ಷದ ಪ್ರಿನ್ಸ್ ಫಿಲಿಪ್‍ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದೇಶವಾಸಿಗಳು ಒಟ್ಟಾಗಿ ಕಠಿಣ ಸನ್ನಿವೇಶವನ್ನು ಎದುರಿಸಿ ಯಶಸ್ವಿಯಾಗೋಣ ಎಂದಿದ್ದಾರೆ. (ಏಜೆನ್ಸೀಸ್)

    ಕರೊನಾ ಲಾಕ್​ಡೌನ್​ನಿಂದ ರಾಷ್ಟ್ರಕ್ಕೆ ಎಷ್ಟು ಹೊರೆಯಾಗಲಿದೆ? ಪರಿಣಿತರ ಸಲಹೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts