More

    ರಾಮ ಮಂದಿರ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

    ಉತ್ತರಪ್ರದೇಶ: ರಾಮಮಂದಿರ ಟ್ರಸ್ಟ್ ರಾಮನ ಗರ್ಭಗುಡಿಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇನ್ನು ರಾಮಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದೆ.

    ಇನ್ಮುಂದೆ ರಾಮ ಮಂದಿರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಲಿದ್ದು, ಅರ್ಚಕರೆಲ್ಲರೂ ಒಂದೇ ಬಗೆಯ ಧಿರಿಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಡ್ರೆಸ್​ ಕೋಡ್ ಅರ್ಚಕರಿಗೆ ಅನ್ವಯವಾಗಲಿದೆ, ದೇವಸ್ಥಾನದ ಅರ್ಚಕರು ಇನ್ಮುಱಮದೆ ಒಂದೇ ಬಗೆಯ ಉಡುಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅರ್ಚಕರು ಚೌಬಂದಿ ಪೇಟ ಹಾಗೂ ಹಳದಿ ಬಣ್ಣದ ಧೋತಿ, ಕುರ್ತಾವನ್ನು ಧರಿಸಲಿದ್ದಾರೆ. ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್​ ಫೋನ್ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

    ಪ್ರಸ್ತುತ ಭಕ್ತರು ಅನುಸರಿಸುತ್ತಿರುವ ನಿರ್ಬಂಧವು  ಅರ್ಚಕರಿಗೂ ಅನ್ವಯವಾಗಲಿದೆ. 26 ಮಂದಿ ಅರ್ಚಕರು ವಿವಿಧ ಪಾಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ರಚಿಸಿರುವ ಧಾರ್ಮಿಕ ಸಮಿತಿಯು ಹೊಸದಾಗಿ ತರಬೇತಿ ಪಡೆದ 21 ಅರ್ಚಕರನ್ನು ಸೇರಿಸಲು ನಿರ್ಧರಿಸಿದೆ.

    ಅರ್ಚಕರಿಗೆ ಗುರುತಿನ ಚೀಟಿಯನ್ನೂ ಟ್ರಸ್ಟ್​ ನೀಡಿದೆ. ಅವರ ನೇಮಕಾತಿ ಪತ್ರಗಳನ್ನು ಅವರ ಆರು ತಿಂಗಳ ತರಬೇತಿ ಪ್ರಮಾಣಪತ್ರಗಳೊಂದಿಗೆ ಜುಲೈ 3 ಅಥವಾ 5ರಂದು ಹಸ್ತಾಂತರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಕ್ರಮಗಳು ಅರ್ಚಕರ ನಡುವೆ ಏಕರೂಪತೆಯನ್ನು ಕಾಯ್ದುಕೊಳ್ಳುವ ಮತ್ತು ಆವರಣದಲ್ಲಿ ಇತರರಿಂದ ಭಿನ್ನವಾಗಿಸುವ ಪ್ರಯತ್ನದ ಭಾಗವಾಗಿದೆ.

    1 ವರ್ಷದ ಮಗುವಿಗೆ ಕೈದಿ ಬಟ್ಟೆ ಹಾಕಿಸಿದ್ದ ದಚ್ಚು ಅಭಿಮಾನಿಗೆ ನೋಟಿಸ್‌ ನೀಡಲು ಮುಂದಾದ ಮಕ್ಕಳ ಆಯೋಗ

    See also  ಕೋಳಿ ಸಾರಿಗಾಗಿ ಮಗನನ್ನೇ ಹತ್ಯೆಗೈದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts