More

    ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    ಅಳವಂಡಿ: ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸಬೇಕು ಎಂದು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

    ಇದನ್ನೂ ಓದಿ: ಯೋಗ ಆಚರಣೆ, ಅನುಷ್ಠಾನ ಪದ್ಧತಿ : ಆರೋಗ್ಯ ಮಾಹಿತಿ ಶಿಬಿರ ಉದ್ಘಾಟಿಸಿ ರಶ್ಮಿ ಎಸ್.ಆರ್. ಅನಿಸಿಕೆ

    ಸಮೀಪದ ಕವಲೂರು ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂಗನವಾಡಿ, ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

    ಗರ್ಭಿಣಿಯರು ಹಾಗೂ ಬಾಣತಿಯರ ದಾಖಲೆಯಲ್ಲಿ ಸಮಾನತೆ ಕಾಯ್ದುಕೊಳ್ಳಬೇಕು, ಮಕ್ಕಳು, ತಾಯಂದಿರ ಆರೋಗ್ಯದ ಬಗ್ಗೆ ಗಮನವಹಿಸಿ. ಎಲ್ಲ ಇಲಾಖೆ ಅವರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

    ವೈದ್ಯಾಧಿಕಾರಿ ಪ್ರವೀಣ ಗುತ್ತೇದಾರ ಮಾತನಾಡಿ, ಮಳೆಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಲಿದೆ ಕಾರಣ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿ ಕೆಲಸ ಮಾಡಬೇಕು ಎಂದರು.

    ಅಂಗನವಾಡಿ ಮೇಲ್ವಿಚಾರಕಿ ಬಸಮ್ಮ, ಎಲ್‌ಎಚ್‌ವಿ ವಂದನಾ, ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ಜಿ.ಎಸ್.ಬೂಸನೂರಮಠ, ಕಾಶಪ್ಪ, ವಸಂತ ಗದ್ದಿಕೇರಿ, ಆರೋಗ್ಯ ಸುರಕ್ಷತಾಧಿಕಾರಿಗಳಾದ ಬಸಮ್ಮ, ಸುಜಾತಾ, ಶಾಹಿನ್, ಪ್ರತಿಭಾ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts