More

    ರೈತ, ಯೋಧ, ಶಿಕ್ಷಕ ರಾಷ್ಟ್ರದ ರತ್ನತ್ರಯರು, ಕಮಾಂಡರ್ ಆಗಿ ಬಡ್ತಿ ಪಡೆದ ಪ್ರವೀಣಗೌಡಗೆ ಸನ್ಮಾನ

    ಲಕ್ಷ್ಮೇಶ್ವರ: ಭಾರತೀಯ ಸೇನೆಯ ಎ.ಸಿ. ಕಮಾಂಡರ್ ಆಗಿ ಬಡ್ತಿ ಪಡೆದ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಯೋಧ ಪ್ರವೀಣಗೌಡ ಚನ್ನವೀರಗೌಡ ಬೆಟದೂರ ಅವರನ್ನು ಗದಗನಲ್ಲಿ ಮಂಗಳವಾರ ಸಂಸದ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.


    ಈ ವೇಳೆ ಮಾತನಾಡಿದ ಅವರು, ರೈತರು, ಶಿಕ್ಷಕರು ಮತ್ತು ಯೋಧರು ದೇಶದ ರತ್ನತ್ರಯರಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ನಿತ್ಯ ಇವರನ್ನು ಸ್ಮರಿಸಲೇಬೇಕು. ಪ್ರಸ್ತುತ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇನಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ, ಸುಭದ್ರ ವ್ಯವಸ್ಥೆ ಕಲ್ಪಿಸಿದ್ದಾರೆ. ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಇದೀಗ ಸೇನೆಯ ಎಸಿ ಕಮಾಂಡರ್ ಆಗಿ ಬಡ್ತಿ ಹೊಂದಿರುವ ಪ್ರವೀಣಗೌಡ ಅವರು ನಮ್ಮ ನಾಡಿನ ಹೆಮ್ಮೆಯಾಗಿದ್ದಾರೆ ಎಂದರು.


    ಸನ್ಮಾನ ಸ್ವೀಕರಿಸಿದ ಪ್ರವೀಣಗೌಡ ಮಾತನಾಡಿದರು. ಶಾಸಕ ಸಿ.ಸಿ ಪಾಟೀಲ, ಡಾ. ಚಂದ್ರು ಲಮಾಣಿ, ವಿಶ್ವನಾಥ ಕಪ್ಪತ್ತನವರ, ಮಂಜುನಾಥ ಮಾಗಡಿ, ಎಂ.ಎಸ್. ದೊಡ್ಡಗೌಡ್ರ, ಶಿವಪ್ರಕಾಶ ಮಹಾಜನಶೆಟ್ರ, ತಿಪ್ಪಣ್ಣ ಕೊಂಚಿಗೇರಿ, ಚಂದ್ರಣ್ಣ ನೂರಶೆಟ್ರ, ಎಂ.ಆರ್. ಪಾಟೀಲ, ನಿಂಬಣ್ಣ ಮಡಿವಾಳರ, ಚಂದ್ರು ಮಾಗಡಿ, ಮುತ್ತು ನೀರಲಗಿ, ಅಭಯ ಜೈನ, ಮಲ್ಲಿಕಾರ್ಜುನ ನಿರಾಲೋಟಿ ಸೇರಿ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts