More

    ಕೆಜಿಎಫ್​ ಚಾಪ್ಟರ್​-3 ಬರೋದು ಫಿಕ್ಸ್​ ಆಯ್ತಾ?; ಅಪ್ಡೇಟ್ ಕೊಟ್ಟ ನಿರ್ದೇಶಕ ಪ್ರಶಾಂತ್​ ನೀಲ್

    ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ, ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಸರಣಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಈ ಚಿತ್ರದ ಮೂಲಕ ಮೂಲಕ ಕನ್ನಡ ಚಿತ್ರರಂಗ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ದಂತು ಸುಳ್ಳಲ್ಲ. ಇದೀಗ ಮಹತ್ವದ ಬೆಳವಣಿಗೆ ಒಂದರಲ್ಲಿ ಕೆಜಿಎಫ್​ ಚಾಪ್ಟರ್​-3 ಕುರಿತಾದ ಅಪ್ಡೇಟ್​ ಒಂದು ಹೊರಬಿದ್ದಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

    ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಿರ್ದೇಶದ ಪ್ರಶಾಂತ್​ ನೀಲ್​ ಕೆಜಿಎಫ್​ ಚಾಪ್ಟರ್​-3ಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಚಿತ್ರದ ಕುರಿತಾದ ಅಪ್ಡೇಟ್​ ಒಂದನ್ನು ನೀಡಿದ್ದಾರೆ.

    ಇದನ್ನೂ ಓದಿ: ಮೂಕಿ ಪತ್ನಿಗಾಗಿ ತನ್ನ ನಾಲಿಗೆಯನ್ನೆ ಕತ್ತರಿಸಿ ದೇವರಿಗೆ ಸಮರ್ಪಿಸಿದ ಪತಿ

    ಕೆಜಿಎಫ್​-3 ಸಿನಿಮಾ ಖಂಡಿತವಾಗಿ ಆಗುತ್ತದೆ. ಅದರ ಸ್ಕ್ರಿಪ್ಟ್​ ತಯಾರು ಮಾಡಲಾಗಿದ್ದು, ಒಂದು ವೇಳೆ ಸ್ಕ್ರಿಪ್ಟ್​​ ಬರೆದಿಲ್ಲವೆಂದರೆ ಕೆಜಿಎಫ್​-2ನಲ್ಲಿ ನಾವು ಈ ಬಗ್ಗೆ ಘೋಷಣೆ ಮಾಡುತ್ತಿರಲಿಲ್ಲ. ನಾವು ಕೆಜಿಎಫ್​ ಪಾರ್ಟ್​ 3 ಮಾಡುತ್ತೇವೆ ಎಂಬುದು ಕೊನೆಗೆ ಎಲ್ಲರಿಗೂ ತಿಳಿದಿತ್ತು. ಸಲಾರ್​-2 ಕೆಲಸಗಳು ಮುಗಿದ ನಂತರ ಕೆಜಿಎಫ್​-3 ಶುರು ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಪ್ರಸ್ತುತ ನಟ ಯಶ್​ ಹಾಗೂ ಪ್ರಶಾಂತ್​ ನೀಲ್​ ಬ್ಯುಸಿ ಇದ್ದು, ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್​ ಕೂಡ ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದೆ. ಸೂಕ್ತ ಸಮಯಲ್ಲಿ ಈ ಮೂವರೂ ಒಂದಾಗಬೇಕಿದೆ. ಇತ್ತ ಪ್ರಶಾಂತ್​ ನೀಲ್​ ಕೆಜಿಎಫ್​-3 ಕುರಿತಾಗಿ ಮಾಹಿತಿ ನೀಡುತ್ತಿದ್ದಂತೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟುಗೊಂಡಿದ್ದು, ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts