More

    ಬಾಕ್ಸ್​ ಆಫೀಸ್​ನಲ್ಲಿ ಪ್ರಭಾಸ್​ ‘ಕಲ್ಕಿ’ ಅಬ್ಬರ! ಒಟ್ಟು ಕಲೆಕ್ಷನ್ ಎಷ್ಟು? ಹೀಗಿದೆ ವಿವರ

    ಆಂಧ್ರಪ್ರದೇಶ: ಜೂನ್ 27ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸೈನ್ಸ್​-ಫಿಕ್ಷನ್ ಆಧರಿತ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಸಿನಿಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ದೊರೆತಿದ್ದು, ರಿಲೀಸ್ ಆದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಇದೀಗ ಎರಡನೇ ದಿನ ಪೂರೈಸಿರುವ ನಾಗ್ ಅಶ್ವಿನ್ ನಿರ್ದೇಶನದ ಹಾಗೂ ಟಾಲಿವುಡ್​ನ ರೆಬೆಲ್ ಸ್ಟಾರ್ ಪ್ರಭಾಸ್​ ಅಭಿನಯದ ಪ್ಯಾನ್ ಇಂಡಿಯಾ ‘ಕಲ್ಕಿ’, ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷೆಗೆ ತಕ್ಕಂತೆ ಗಳಿಕೆ ಕಾಣುತ್ತಿದೆ.

    ಇದನ್ನೂ ಓದಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದ ಸಿದ್ದರಾಮಯ್ಯ

    ಮುಂಗಡ ಬುಕ್ಕಿಂಗ್​ನಲ್ಲಿಯೇ ಅಬ್ಬರಿಸಿದ್ದ ‘ಕಲ್ಕಿ’ ಚಿತ್ರವು ಇದೀಗ ಬಾಕ್ಸ್​ ಆಫೀಸ್​ನಲ್ಲಿ ಎರಡನೇ ದಿನ ಕೂಡ ಉತ್ತಮ ಕಲೆಕ್ಷನ್ ಕಂಡಿದೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಸಿನಿಮಾ, ಗಳಿಕೆಯಲ್ಲಿ ಕುಸಿತ ಕಾಣದೆ, ಮಿಂಚಿನ ಓಟ ಮುಂದುವರೆಸಿದೆ. ಪ್ರಸ್ತುತ 4ರಿಂದ 5 ಆಟಗಳನ್ನು ಆಯೋಜಿಸಿರುವ ಚಿತ್ರಮಂದಿರಗಳಲ್ಲಿ ಸಂಜೆ ಮತ್ತು ರಾತ್ರಿ ಶೋಗಳು ಪ್ರೇಕ್ಷಕರಿಂದ ಭರ್ತಿಯಾಗುತ್ತಿವೆ ಎಂದು ವರದಿಯಾಗಿದೆ.

    ಜಾಗತಿಕ ಮಟ್ಟದಲ್ಲಿ ತೆರೆಕಂಡಿರುವ ಪ್ರಭಾಸ್​ ಸಿನಿಮಾ ಎರಡನೇ ದಿನಕ್ಕೆ 300 ಕೋಟಿ ರೂ. ಕಲೆಕ್ಷನ್ ಕಂಡಿದೆ. ಎರಡು ದಿನಗಳ ಅವಧಿಯಲ್ಲಿ ಈ ವೇಗವನ್ನು ನೋಡಿರುವ ಚಿತ್ರ, ವಾರಾಂತ್ಯದಲ್ಲಿ 500 ಕೋಟಿ ರೂ. ಕ್ಲಬ್ ಸೇರುವುದು ಖಚಿತ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಉತ್ತರ ಅಮೆರಿಕಾ, ನಿಜಾಮ್ ಮತ್ತು ಉತ್ತರ ಭಾರತದಲ್ಲಿ ‘ಕಲ್ಕಿ’ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    ಇದನ್ನೂ ಓದಿ:ಪ್ರಿಯಾಂಕಾ ವಾಗ್ಲೆಗೆ ದಿ ಬೆಸ್ಟ್ ಮಾಸ್ಟರ್ಸ್‌ ಥೀಸಿಸ್ ಗೌರವ

    ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಪಶುಪತಿ ರಾಮಸ್ವಾಮಿ, ಶಾಶ್ವತ್ ಚಟರ್ಜಿ ಸೇರಿದಂತೆ ಮುಂತಾದವರ ತಾರಾಗಣವಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts