More

    *ಅಖಿಲ ಭಾರತ ಪೋಸ್ಟರ್ ಸ್ಪರ್ಧೆ : ಆದಿತ್‌ಗೆ ರಾಷ್ಟ್ರೀಯ ಪ್ರಶಸ್ತಿ



    ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕದ ವತಿಯಿಂದ ಮಕ್ಕಳಿಗಾಗಿ ನನ್ನ ಸ್ಮಾರಕ ಹುಡುಕಾಟ ಪೋಸ್ಟರ್ ಸ್ಪರ್ಧೆಯ ಪ್ರಮಾಣಪತ್ರ ವಿತರಣಾ ಸಮಾರಂಭ ನಗರದ
    ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
    ಇಂಟಾಕ್ ಆಯೋಜಿಸಿದ ‘ನನ್ನ ಸ್ಮಾರಕ ಹುಡುಕಾಟ’ ಅಖಿಲ ಭಾರತ ಪೋಸ್ಟರ್ ಸ್ಪರ್ಧೆಯಲ್ಲಿ ಪಾರಂಪರಿಕ ಕಟ್ಟಡವೊಂದನ್ನು ಬಿಂಬಿಸುವ ಪೋಸ್ಟರ್ ರಚನೆ ಮತ್ತು ಅದನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಕಿರು ಪ್ರಬಂಧ ಸಲ್ಲಿಸಬೇಕಾಗಿತ್ತು. ವಿದ್ಯಾರ್ಥಿಗಳು ರಚಿಸಿದ ಪೋಸ್ಟರ್ ಮತ್ತು ಲೇಖನಗಳನ್ನು ರಾಷ್ಟ್ರೀಯ ಮೌಲ್ಯಮಾಪನಕ್ಕೆ ಕಳುಹಿಸಲಾಗಿತ್ತು.
    ನಗರದ ಉರ್ವ ಕೆನರಾ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಆದಿತ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಈ ಗೌರವ ಪಡೆದ ಮಂಗಳೂರಿನ ಮೊದಲ ವಿದ್ಯಾರ್ಥಿ. ರಾಷ್ಟ್ರಾದ್ಯಂತ 670 ಶಾಲೆಗಳನ್ನು ಪ್ರತಿನಿಧಿಸುವ 5,628 ಬಾಲಕಲಾವಿದರಲ್ಲಿ ಆಯ್ಕೆಯಾದ 15 ವಿದ್ಯಾರ್ಥಿಗಳಲ್ಲಿ ಆದಿತ್ ಒಬ್ಬರು. ಅವರು ದೆಹಲಿಗೆ ಸಂಪೂರ್ಣ ಪ್ರಾಯೋಜಿತ ಪ್ರವಾಸವನ್ನು ಬಹುಮಾನವಾಗಿ ಗೆದ್ದಿದ್ದಾರೆ.
    ಉಡುಪಿಯ ಬೈಲೂರಿನ ವಾಸುದೇವ ಕೃಪಾ ವಿದ್ಯಾ ಮಂದಿರ ಶಾಲೆಯ ವಿದ್ಯಾರ್ಥಿನಿ ಅದಿತಿ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಗೊನ್ಜಾಗಾ ಶಾಲೆಯ ವಿದ್ಯಾರ್ಥಿನಿ ಅವನಿ ಸಿ.ಕಾಮತ್ ಪ್ರಾದೇಶಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ (ಮೈನ್)ನ 8ನೇ ವಿದ್ಯಾರ್ಥಿ ಎಚ್.ಪೂರ್ಣೇಂದು ರಾವ್ ಅವರು ಅಧ್ಯಾಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಕೆನರಾ ಪ್ರೌಢಶಾಲೆ, ಡೊಂಗರಕೇರಿ ಹಾಗೂ ನಳಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
    ಮುಖ್ಯ ಅತಿಥಿಯಾಗಿ ಹಿರಿಯ ಕಲಾವಿದ ಗಣೇಶ ಸೋಮಯಾಜಿ ಭಾಗವಹಿಸಿದ್ದರು. ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಷ್ ಬಸು ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts