More

    2047ಕ್ಕೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸಂಚು; PFI ಗುರಿ NIA ತನಿಖೆಯಲ್ಲಿ ಬಹಿರಂಗ  

    ಕೊಚ್ಚಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ) 2047ರ ಹೊತ್ತಿಗೆ ಭಾರತದಾದ್ಯಂತ ಇಸ್ಲಾಮಿಕ್ ಆಡಳಿತ ಜಾರಿಗೆ ತರುವ ಗುರಿ ಹೊಂದಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಹೇಳಿದೆ.

    ‘ಪಾಲಕ್ಕಾಡ್​ನ ಆರ್​ಎಸ್​ಎಸ್ ನಾಯಕ ಶ್ರೀನಿವಾಸನ್ ಕೊಲೆಯು ಪಿಎಫ್​ಐನ ಈ ಗುರಿಯ ಭಾಗವಾಗಿತ್ತು’ ಎಂದು ಕೇರಳ ಹೈಕೋರ್ಟ್​ಗೆ ಇತ್ತೀಚೆಗೆ ಸಲ್ಲಿಸಿರುವ ವರದಿಯಲ್ಲಿ ಎನ್​ಐಎ ತಿಳಿಸಿದೆ. 2022ರ ಏ. 16ರಂದು ಶ್ರೀನಿವಾಸನ್ ಕೊಲೆ ನಡೆದಿತ್ತು. ಆರೋಪಿಗಳ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

    ‘15ನೇ ಆರೋಪಿ ಆಗಿರುವ ಮುಹಮ್ಮದ್ ಮುಬಾರಕ್​ನ ಫೋನ್​ನಲ್ಲಿ ‘ಮಿಷನ್ 2047’ ಕುರಿತ ಧ್ವನಿಸಂಭಾಷಣೆಯ ಕ್ಲಿಪ್ ದೊರಕಿದೆ. ಎರಡನೇ ಆರೋಪಿ ಅಶ್ರಫ್ ಅಲಿಯಾಸ್ ಮೌಲ್ವಿ ಪಿಎಫ್​ಐನ ಶಿಕ್ಷಣ ವಿಭಾಗದ ಮುಖ್ಯಸ್ಥನಾಗಿದ್ದು, ಐಸಿಸ್​ನಂತಹ ಉಗ್ರಗಾಮಿ ಸಂಘಟನೆಗಳಿಗೆ ಯುವಕರನ್ನು ಸೇರಿಸುವ ಕಾರ್ಯದಲ್ಲಿ ನಿರತನಾಗಿದ್ದ. ಬಂಧಿತರೆಲ್ಲರೂ ಪಿಎಫ್​ಐನ ಉಗ್ರ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು. ಆರ್ಯ ಸಮಾಜ ಮತ್ತಿತರ ಬೇರೆ ಧರ್ಮ-ಸಮುದಾಯದ ಸಂಘಟನೆಗಳ ಸದಸ್ಯರ ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದರು. ತಿರುವನಂತಪುರಂ ಶಿಕ್ಷಣ ಸೇವಾ ಟ್ರಸ್ಟ್ ಮತ್ತು ಪೆರಿಯಾರ್ ವ್ಯಾಲಿ ಟ್ರಸ್ಟ್​ನ ಕಚೇರಿಗಳಲ್ಲಿ ಪಿಎಫ್​ಐ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಕೊಡಿಸುತ್ತಿದ್ದರು. ಸ್ಪೋಟಕಗಳನ್ನು ಸಂಗ್ರಹಿಸಿಡುತ್ತಿದ್ದರು’ ಎಂದು ಎನ್​ಐಎ ತನ್ನ ವರದಿಯಲ್ಲಿ ಹೇಳಿದೆ.

    ಹಿಂದು ಸಮಾಜದ ಪ್ರಮುಖ ನಾಯಕರನ್ನು ಕೊಲ್ಲುವ ಮೂಲಕ ಆ ಧರ್ಮದವರಲ್ಲಿ ಭಯ ಉಂಟು ಮಾಡುವುದು ಇವರ ಉದ್ದೇಶವಾಗಿತ್ತು. ಹಿಂದುಗಳನ್ನು ಕಾಫಿರರು (ಇಸ್ಲಾಂನಲ್ಲಿ ನಂಬಿಕೆ ಇಲ್ಲದವರು) ಎಂದು ಬಣ್ಣಿಸಿರುವ ದಾಖಲೆಗಳು, ಭಾರತದಲ್ಲಿ ಇಸ್ಲಾಮಿಕ್ ಆಡಳಿತ ತರುವ ಕುರಿತ ಸೋಷಿಯಲ್ ಮೀಡಿಯಾ ಪೋಸ್ಟ್​ಗಳು ಬಂಧಿತರ ಬಳಿ ದೊರೆತಿವೆ ಎಂದು ಎನ್​ಐಎ ಹೇಳಿದೆ.

    ಹಿಂದುಗಳ ಕೊಲೆಗೆ ಕುಮ್ಮಕ್ಕು: ಶ್ರೀನಿವಾಸನ್ ಕೊಲೆಯಲ್ಲಿ 51 ಜನರ ಪಾತ್ರ ಇರುವುದನ್ನು ಗುರುತಿಸಿದ್ದ ಪೊಲೀಸರು ಆ ಪೈಕಿ 44 ಜನರನ್ನು ಬಂಧಿಸಿದ್ದರು. ಅದರಲ್ಲಿ ಒಬ್ಬ ನಂತರ ಮೃತಪಟ್ಟಿದ್ದಾನೆ, ಏಳು ಜನರು ನಾಪತ್ತೆಯಾಗಿದ್ದಾರೆ. ನೆಜಿಮಾನ್ ಎಂಬ ಆರೋಪಿ ಪ್ರಚೋದನಕಾರಿ ಭಾಷಣಗಳ ವಿಡಿಯೋ ಕ್ಲಿಪ್​ಗಳನ್ನು, ಇತರ ಧರ್ಮದವರಿಗೆ ಬೆದರಿಕೆ ಹಾಕುವ ಪೋಸ್ಟ್​ಗಳನ್ನು ಶೇರ್ ಮಾಡುತ್ತಿದ್ದ. ಹಿಂಸಾತ್ಮಕ ಧರ್ಮಯುದ್ಧದ ವಿಚಾರಧಾರೆಯನ್ನು ಮತ್ತೊಬ್ಬ ಆರೋಪಿ ಸಿ.ಟಿ. ಸುಲೇಮಾನ್ ಪ್ರಸಾರ ಮಾಡುತ್ತಿದ್ದ. ‘ಮಿಷನ್ 2047’ಕ್ಕೆ ಪೂರಕವಾಗಿ ಇತರ ಧರ್ಮದವರ ಕೊಲೆ ಮಾಡಲು ಪಿಎಫ್​ಐ ಕಾರ್ಯಕರ್ತರಿಗೆ ಕುಮ್ಮಕ್ಕು ಕೊಡುತ್ತಿದ್ದ ಎಂದು ಎನ್​ಐಎ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts