More

    ಶೇ. 80ರಷ್ಟು ಗಣಿತ ಶಿಕ್ಷಕರಿಗೇ ಲೆಕ್ಕ ಬರಲ್ಲ!

    ನವದೆಹಲಿ: ಭಾರತ ಮತ್ತು ಮಧ್ಯಪ್ರಾಚ್ಯದ ಶೇ. 80ರಷ್ಟು ಗಣಿತ ಶಿಕ್ಷಕರಿಗೆ ಅನುಪಾತ, ಬೀಜಗಣಿತ ಮುಂತಾದ ಮೂಲ ಸಂಗತಿಗಳೇ ಗೊತ್ತಿಲ್ಲ ಎಂಬ ವಿಷಯ ‘ಇಐ’ ಎಂಬ ಹೆಸರಿನ ಎಜುಟೆಕ್ ಕಂಪನಿ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.

    ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ, ಯುಎಇ, ಒಮಾನ್, ಸೌದಿ ಅರೇಬಿಯಾದ 152 ಶಾಲೆಗಳಲ್ಲಿ 3ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಗಣಿತ ಪಾಠ ಹೇಳುವ 1300 ಶಿಕ್ಷಕರನ್ನು ಸಂದರ್ಶಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ.

    ಅಧ್ಯಯನ ವೇಳೆ ‘ಗಣಿತ ವಿಷಯಜ್ಞಾನ ಮಟ್ಟ -1 ಮೌಲ್ಯಮಾಪನ’ ಪರೀಕ್ಷೆಯನ್ನು 1,357 ಶಿಕ್ಷಕರು ತೆಗೆದುಕೊಂಡರು. ಆ ಪೈಕಿ ಶೇ. 80ರಷ್ಟು ಶಿಕ್ಷಕರು ಭಾರತೀಯರು, ಶೇ. 18ರಷ್ಟು ಯುಎಇಯವರು ಮತ್ತು ತಲಾ ಶೇ. 1ರಷ್ಟು ಒಮನ್ ಮತ್ತು ಸೌದಿ ಅರೇಬಿಯಾದವರಿದ್ದರು. ಅಧ್ಯಯನದ ಸಂದರ್ಭದಲ್ಲಿ ಶೇ. 75ರಷ್ಟು ಶಿಕ್ಷಕರು ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರಲ್ಲದೇ ಕೇವಲ ಅರ್ಧದಷ್ಟು ಪ್ರಶ್ನೆಗಳಿಗೆ ಮಾತ್ರ ಸರಿಯುತ್ತರ ನೀಡಿದರು.

    ಪ್ರಮೇಯಗಳನ್ನು ಬಿಡಿಸಲು ಅವಶ್ಯವಿರುವ ಅನುಪಾತ, ಪ್ರಮಾಣಾನುಗುಣ ತರ್ಕ, ಬೀಜಗಣಿತದ ತರ್ಕ, ಅಂದಾಜು ಮುಂತಾದ ಮೂಲ ವಿಷಯಗಳ ಬಗ್ಗೆ ಶೇ. 80ರಷ್ಟು ಶಿಕ್ಷಕರು ಮಾತ್ರ ಸರಿಯಾದ ಉತ್ತರ ನೀಡಿದರು. ನಾಲ್ಕನೇ ತರಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಶೇ.73.3ರಷ್ಟು ಶಿಕ್ಷಕರು ಮಾತ್ರ ಸರಿಯಾಗಿ ಉತ್ತರಿಸಿದರು. ಏಳನೇ ತರಗತಿಯ ಪಠ್ಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಿಕ್ಷಕರ ಸಂಖ್ಯೆ ಕೇವಲ ಶೇ. 36.7ರಷ್ಟಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

    ದಶಮಾಂಶ ಚಿಹ್ನೆಯನ್ನು ಎಲ್ಲಿ ಬಳಸಬೇಕು ಎಂಬುದರ ಬಗ್ಗೆ ಶೇ.36.3ರಷ್ಟು ಶಿಕ್ಷಕರಿಗೆ ಅರಿವಿರಲಿಲ್ಲ. ದಶಮಾಂಶ ಚಿಹ್ನೆ ಹಾಕಿದ ಸಂಖ್ಯೆಗಳಲ್ಲಿಯೂ ಅದನ್ನು ನಿರ್ಲಕ್ಷಿಸಿ ಮುಂದಿನ ಶೂನ್ಯಗಳನ್ನು ಸೇರಿಸಿಕೊಂಡು ತಪ್ಪು ಉತ್ತರ ನೀಡುತ್ತಿ ದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.


    ಶೇ. 80ರಷ್ಟು ಗಣಿತ ಶಿಕ್ಷಕರಿಗೇ ಲೆಕ್ಕ ಬರಲ್ಲ! ಶಿಕ್ಷಕರಿಗೇ ಲೆಕ್ಕ ಬರುವುದಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿರುವ ಈ ವರದಿ ಆತಂಕಕಾರಿ ಆಗಿದೆ. ಮುಂದಿನ ಪೀಳಿಗೆಗಳು ಇವರಿಂದ ಯಾವ ಮಟ್ಟಿನ ಶಿಕ್ಷಣ ಪಡೆಯಬಹುದು ಎಂಬುದನ್ನು ಊಹಿಸಿ ಕೊಂಡರೆ ಗಾಬರಿ ಆಗುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ಇದೊಂದು ಎಚ್ಚರಿಕೆ ಗಂಟೆ ಆಗಿದೆ.

    | ಶ್ರೀಧರ್ ರಾಜಗೋಪಾಲನ್, ಇಐ ಎಜುಟೆಕ್ ಸಹಸಂಸ್ಥಾಪಕ

    NEET ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಾಂಶುಪಾಲರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts