More

    ಪ್ರಭಾಸ್ ಸಿನಿಮಾಗೆ ಪವನ್ ಮಗ..ಕಲ್ಕಿ ಟೀ ಶರ್ಟ್ ಧರಿಸಿ ಥಿಯೇಟರ್​ಗೆ ಬಂದ ಅಕಿರ ನಂದನ್!

    ಹೈದರಾಬಾದ್​: ಪ್ಯಾನ್ ಇಂಡಿಯಾದ ಸೂಪರ್ ಸ್ಟಾರ್ ಪ್ರಭಾಸ್ ಸಿನಿಮಾ ಕಲ್ಕಿ ರಿಲೀಸ್ ಆಗಿ ಎಲ್ಲೆಡೆ ಬ್ಲಾಕ್ ಬಸ್ಟರ್ ಟಾಕ್ ಪಡೆಯುತ್ತಿದೆ. ಅಭಿಮಾನಿಗಳು ಹಾಗೂ ಅನೇಕ ಸಿನಿ ಗಣ್ಯರು ಚಿತ್ರ ವೀಕ್ಷಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ಆಂಧ್ರದ ಡೆಪ್ಯೂಟಿ ಸಿಎಂ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಪುತ್ರ ಅಕಿರಾ ನಂದನ್ ಕಲ್ಕಿ ಟೀ ಶರ್ಟ್ ಧರಿಸಿ ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸಿ ಗಮನಸೆಳೆದರು.

    ಇದನ್ನೂ ಓದಿ: ಭೀಕರ ಅಪಘಾತ: ಎರಡು ಲಾರಿ ಡಿಕ್ಕಿ ಹೊಡೆದು ಬೆಂಕಿ.. ಚಾಲಕ ಸಜೀವ ದಹನ!

    ಈ ವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ಕಲ್ಕಿ ಗುರುವಾರ (ಜೂನ್ 27) ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ. ಎಲ್ಲೆಡೆ ಬ್ಲಾಕ್ ಬಸ್ಟರ್ ಟಾಕ್ ಪಡೆಯುತ್ತಿದೆ. ಅದರಲ್ಲೂ ವಿಎಫ್‌ಎಕ್ಸ್, ಆ್ಯಕ್ಷನ್ ಸೀಕ್ವೆನ್ಸ್, ಪ್ರಿ ಇಂಟರ್‌ವಲ್ ಮತ್ತು ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ಎಂಬ ವಿಮರ್ಶೆಗಳು ಬರುತ್ತಿವೆ. ಹೀಗಾಗಿಯೇ ಚಿತ್ರ ವೀಕ್ಷಣೆಗೆ ಸೆಲಬ್ರಿಟಿಗಳೂ ಮುಗಿಬೀಳುತ್ತಿದ್ದಾರೆ.

    ಅಕಿರಾ ಈ ಚಿತ್ರವನ್ನು ಹೈದರಾಬಾದ್‌ನ ಪ್ರಸಾದ್ ಐ ಮ್ಯಾಕ್ಸ್‌ನಲ್ಲಿ ವೀಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಅಕಿರಾ ಕಲ್ಕಿ ಟೀ ಶರ್ಟ್ ಹಾಕಿಕೊಂಡು ಥಿಯೇಟರ್ ಗೆ ಬಂದಿದ್ದರು. ಪವನ್ ಪುತ್ರನನ್ನು ನೋಡಿದ ಅಭಿಮಾನಿಗಳು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಪ್ರಭಾಸ್ ಅಭಿಮಾನಿಗಳು ಮತ್ತು ಮೆಗಾ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.

    ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ ಚಿತ್ರದಲ್ಲಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ವಿಶ್ವ ನಾಯಕ ಕಮಲ್ ಹಾಸನ್, ದಿಶಾ ಪಟಾನಿ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ, ಅಣ್ಣಾಬೆನ್, ಮಾಳವಿಕಾ ನಾಯರ್, ಬ್ರಹ್ಮಾನಂದಂ, ರಾಜೇಂದ್ರ ಪ್ರಸಾದ್, ಶೋಭನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಈ ಚಿತ್ರವನ್ನು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.

    ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದು ಸರಿ ಇದೆ: ಮಹತ್ವದ ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts