More

    ರೋಗ ನಿವಾರಣೆಗೆ ತಾಳ್ಮೆ ಮುಖ್ಯ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ವೈದ್ಯರಿಗೆ ಕಲಿಕೆ ಮತ್ತು ವಿಷಯದಲ್ಲಿ ನವೀಕರಣ ನಿರಂತರವಾಗಿರುತ್ತದೆ. ವೈದ್ಯರು ರೋಗಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿ ರೋಗ ನಿವಾರಿಸಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರ ತೃಪ್ತಿಗೆ ಮೂಲ ಎಂದು ಎಸ್​ಡಿಎಂ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ. ನಿರಂಜನ್​ ಕುಮಾರ ಹೇಳಿದರು.
    ಸತ್ತೂರಿನ ಎಸ್​ಡಿಎಂ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಎಲ್ಲ ವೈದ್ಯರು ನಾವೀನ್ಯತೆ ಮತ್ತು ಸಂಶೋಧನೆ ಮಾಡುವ ಮೂಲಕ ವಿಜ್ಞಾನಿಗಳಾಗುತ್ತಾರೆ. ಸಾಮರ್ಥ್ಯ, ಸಮರ್ಥನೆ ಮತ್ತು ಉತ್ತಮ ಸಂವಹನ ವೈದ್ಯರ ಗುಣ. ಸಮಾಜದಲ್ಲಿ ಜನರು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಅನಾರೋಗ್ಯಕ್ಕೆ ಒಳಗಾದಾಗ ಮಾತ್ರ ವೈದ್ಯರನ್ನು ಸ್ಮರಿಸುವುದು ರೂಢಿ. ರೋಗಗಳನ್ನು ನಿವಾರಿಸಿ ಜೀವನ ಹಸನುಗೊಳಿಸಿದ ವೈದ್ಯರನ್ನು ವೈದ್ಯರ ದಿನದಂದು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
    ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಹಿರಿಯ ವೈದ್ಯರಾದ ರೋಗ ಲಕ್ಪಣ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಧಿಶಾ ಅಥಣಿಕರ, ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ವಿಜಯಲಕ್ಷ್ಮೀ , ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಪೈ ಅವರನ್ನು ಸನ್ಮಾನಿಸಲಾಯಿತು.
    ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಸಹ ಉಪ ಕುಲಪತಿ ಜೀವಂಧರ್​ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ವಿಶ್ವ ವಿದ್ಯಾಲಯದ ಅಧಿಕಾರಿಗಳು, ಸಂಸ್ಥೆ ಮುಖ್ಯಸ್ಥರು, ವೈದ್ಯರು, ಇತರರು ಇದ್ದರು.
    ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲೆ ಡಾ. ರತ್ನಮಾಲಾ ದೇಸಾಯಿ ಸ್ವಾಗತಿಸಿದರು. ಡಾ. ಯಶಸ್ವಿನಿ ನಿರೂಪಿಸಿದರು. ಉಪ ಪ್ರಾಂಶುಪಾಲ ಡಾ. ವಿಜಯ ಕುಲಕರ್ಣಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts