More

    ಜೂ.1ಕ್ಕೆ ಸಂಸತ್ ಕಲಾಪ ಪುನರಾರಂಭ: ಪ್ರತಿಧ್ವನಿಸಲಿವೆ ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತಿತರ ವಿಷಯಗಳು..

    ನವದೆಹಲಿ: ಕೆಲವು ದಿನಗಳ ನಂತರ ಸಂಸತ್ ಅಧಿವೇಶ ಸೋಮವಾರ (ಜುಲೈ 1) ಪುನರಾರಂಭಗೊಳ್ಳಲಿದೆ. ಸದನದಲ್ಲಿ ಪ್ರಬಲ ಪ್ರತಿಪಕ್ಷಗಳ ಉಪಸ್ಥಿತಿ ಎನ್​ಡಿಎ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಇದನ್ನೂ ಓದಿ: ಕಾಮಿಡಿಯನ್ ಡೇನಿಯಲ್ ಫರ್ನಾಂಡೀಸ್‌ ಶೋ ರದ್ದು ! ಪ್ರಬಲವಾದ ಕಾರಣವಿದೆ ನೋಡಿ?

    ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಕಳಪೆ ಕಾಮಗಾರಿ, ಅಗ್ನಿಪಥ್ ಯೋಜನೆಯಲ್ಲಿನ ಬದಲಾವಣೆ, ನಿರುದ್ಯೋಗ ಮತ್ತಿತರ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

    ಇನ್ನು ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ಅನುರಾಗ್ ಠಾಕೂರ್ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯನ್ನು ಆರಂಭಿಸಲಿದ್ದು, ನಂತರ ಮತ್ತೊಬ್ಬ ಸದಸ್ಯ ಬಾನ್ಸುರಿ ಸ್ವರಾಜ್ ಅವರು ಪ್ರಸ್ತಾವನೆಯನ್ನು ಅನುಮೋದಿಸಲಿದ್ದಾರೆ. ರಾಜ್ಯಸಭೆಯಲ್ಲಿ ಇದೇ ವಿಷಯದ ಚರ್ಚೆಗೆ 21 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಷ್ಟ್ರಪತಿಗಳ ವಂದನಾ ನಿರ್ಣಯವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ಲೋಕಸಭೆಯಲ್ಲಿ ಚರ್ಚೆಗೆ 16 ಗಂಟೆ ಕಾಲಾವಕಾಶ ನೀಡಲಾಗಿದೆ.

    ಇದರ ನಡುವೆ, ಸಂಸತ್ತಿನ ಉಭಯ ಸದನಗಳಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಬಿರುಸಿನ ಚರ್ಚೆ ನಡೆಯುವ ಸಾಧ್ಯತೆಯಿದೆ.

    ಆಘಾತಕ್ಕೀಡಾಗಿದ್ದ ಮರಿಗೆರಿಲ್ಲಾ ಮತ್ತೆ ಮನುಷ್ಯನ ನಂಬಿದ್ದು ಹೇಗೆ? ಮನಮಿಡಿಯುವ ಕಥೆ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts