More

    ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ!

    ಇಸ್ಲಾಮಾಬಾದ್:‌ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಶಿವಖೋರಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಭಯೋತ್ಪಾದಕರು ದಾಳಿಯಲ್ಲಿ ಬಸ್​ ಕಂದಕಕ್ಕೆ ಬಿದ್ದು, ಒಂಬತ್ತು ಮಂದಿ ಭಕ್ತಾದಿಗಳು ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದರು.

    ಇದನ್ನೂ ಓದಿ: ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ಮರನೇಮಕ

    ಈ ದಾಳಿಯನ್ನು ಖಂಡಿಸಿ ಭಾರತದೆಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆಲ್​ ಐಸ್​ ಆನ್​ ವೈಷ್ಣೋದೇವಿ ಅಟ್ಯಾಕ್ ಎಐ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಮಂದಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ, ಉಗ್ರರ ದಾಳಿಯನ್ನು ಪಾಕಿಸ್ತಾನ ಕ್ರಿಕೆಟ್‌ ತಂಡದ ವೇಗಿ ಹಸನ್‌ ಅಲಿ ಅವರು ಖಂಡಿಸಿದ್ದಾರೆ. ಹಾಗೆಯೇ, ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

    ಕಾಶ್ಮೀರದಲ್ಲಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ!

    ವೈಷ್ಣೋದೇವಿಗೆ ತೆರಳುತ್ತಿದ್ದ ಹಿಂದುಗಳ ಮೇಲೆ ಉಗ್ರರು ದಾಳಿ ನಡೆಸಿದ್ದನ್ನು ಹಸನ್‌ ಅಲಿ ಅವರು ಖಂಡಿಸಿದ್ದಾರೆ. ಹಾಗೆಯೇ, ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದು ಪೋಸ್ಟ್‌ ಮಾಡುವ ಮೂಲಕ ಬೆಂಬಲ ಸೂಚಿಸಿದ್ದಾರೆ. ವೈಷ್ಣೋದೇವಿ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಸೂಚಿಸುವ ಜತೆಗೆ, ಎಲ್ಲರ ಗಮನವೂ ವೈಷ್ಣೋದೇವಿ ಯಾತ್ರಾಸ್ಥಳದ ಮೇಲಿದೆ ಎಂಬುದನ್ನು ಅವರು ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ತಿಳಿಸಿದ್ದಾರೆ.

    ಆದರೆ ವೇಗಿ ಹಸನ್​ ಅಲಿ ಅವರಿಗೆ ಪಾಕಿಸ್ತಾನದಿಂದಲೇ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಲಿ ಭಯೋತ್ಪಾದನೆ ಅಥವಾ ಹಿಂಸಾಚಾರ ಯಾವುದೇ ಧರ್ಮ ಅಥವಾ ಜನಾಂಗದ ವಿರುದ್ಧವಾದರೂ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ ಇದನ್ನು ಹಂಚಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ನನ್ನಿಂದ ಹೇಗೆ ಸಾಧ್ಯವೋ ಶಾಂತಿಯನ್ನು ಬೆಂಬಲಿಸಲು ಪ್ರಯತ್ನಿಸುತ್ತೇನೆ. ಗಾಜಾದಲ್ಲಿ ನಡೆಯುತ್ತಿರುವ ದಾಳಿಯನ್ನು ನಾನು ಯಾವಾಗಲೂ ಖಂಡಿಸುತ್ತೇನೆ. ಅಮಾಯಕರ ಮೇಲಿನ ದಾಳಿಯನ್ನು ಖಂಡಿಸುವುದನ್ನು ಮುಂದುವರೆಸುತ್ತೇನೆ. ಪ್ರತಿಯೊಬ್ಬ ಮಾನವನ ಜೀವನವು ಮುಖ್ಯವಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

    ನಾಗ್ಪುರ: ಸ್ಫೋಟಕ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ, ಐವರು ಕಾರ್ಮಿಕರ ಸಾವು!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts