More

    ಸಂಸತ್​ನಲ್ಲಿ ನೀಟ್ ಅಕ್ರಮದ ಚರ್ಚೆಯಾಗಬೇಕು.. ಪ್ರಧಾನಿ ಮೋದಿಗೆ ರಾಹುಲ್ ಆಗ್ರಹ

    ನವದೆಹಲಿ: ನೀಟ್ ಪರೀಕ್ಷೆ ಪೇಪರ್ ಸೋರಿಕೆ ವಿಚಾರವಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ವರಿಷ್ಠ ಮತ್ತು ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಡಿಆರ್​ಡಿಒಗೆ ಮತ್ತೊಂದು ಗರಿ.. ವೈಮಾನಿಕ ಗುರಿ ಧ್ವಂಸ ಸಾಮರ್ಥ್ಯದ ‘ಅಭ್ಯಾಸ್​’ ಪರೀಕ್ಷಾರ್ಥ ಹಾರಾಟ ಯಶಸ್ವಿ!

    ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಮಂಡಿಸುವ ಮುನ್ನ ಈ ವಿಷಯದ ಬಗ್ಗೆ ಆಳವಾದ ಚರ್ಚೆ ನಡೆಸಬೇಕು ಎಂದು ಕೋರಿದರು.

    ಯುವಕರು ಚಿಂತಾಕ್ರಾಂತರಾಗಿದ್ದಾರೆ, ಏನಾಗುತ್ತಿದೆ ಎಂದು ಅವರಿಗೆ ತಿಳಿದಿಲ್ಲ, ವಿದ್ಯಾರ್ಥಿಗಳ ಆತಂಕವನ್ನು ಕಡಿಮೆ ಮಾಡಲು ಆಡಳಿತ ಮತ್ತು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಭಯವನ್ನು ಹೋಗಲಾಡಿಸಬೇಕು. ಇದು ಯುವಜನತೆಗೆ ಸಂಬಂಧಿಸಿದ ಸಮಸ್ಯೆಯಾಗಿರುವುದರಿಂದ, ನಾನು ವಿನಂತಿಸುತ್ತೇನೆ. ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಗೌರವಾನ್ವಿತ ಚರ್ಚೆ ನಡೆಸಲು ಎಲ್ಲಾ ಪ್ರತಿಪಕ್ಷಗಳ ನಾಯಕರು ಈಗಾಗಲೇ ನೀಟ್​ ಪೇಪರ್ ಸೋರಿಕೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಒಪ್ಪಿಕೊಂಡಿದ್ದಾರೆ ಅವರಿಗೆ ನ್ಯಾಯ ಕೊಡಿಸಿ ಎಂದು ರಾಹುಲ್ ಒತ್ತಾಯಿಸಿದರು.

    ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (ಪದವಿಪೂರ್ವ) / ನೀಟ್​-ಯುಜಿ ಅನ್ನು ಮೇ 5 ರಂದು ಎನ್​ಟಿಎ ನಡೆಸಿತು. ಪರೀಕ್ಷೆಗೆ 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಜೂನ್ 4 ರಂದು ಫಲಿತಾಂಶ ಪ್ರಕಟವಾದಾಗ ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಆರೋಪ ಕೇಳಿಬಂದಿತ್ತು. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್‌ ಪಡೆದಿರುವುದರಿಂದ ಆರೋಪಗಳು ಬಲಗೊಂಡಿವೆ. ಇದರೊಂದಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಯುಜಿಸಿ- ನೆಟ್ ಮತ್ತು ನೀಟ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ.

    ಓವೈಸಿ ಮನೆ ಮೇಲೆ ದಾಳಿ.. ಇದಕ್ಕೆಲ್ಲ ಹೆದರೋಲ್ಲ ಎಂದ ಎಐಎಂಐಎಂ ಸಂಸದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts