More

    ಹರಿಯಾಣ ಬಳಿ ಕಾಂಗ್ರೆಸ್ ನಾಯಕನ ಸಹೋದರನ ಗುಂಡಿಕ್ಕಿ ಹತ್ಯೆ

    ನವದೆಹಲಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹರಿಯಾಣದ ಫರಿದಾಬಾದ್‌ನಲ್ಲಿ ಕಾಂಗ್ರೆಸ್ ಮುಖಂಡರೊಬ್ಬರ ಸಹೋದರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ವ್ಯಕ್ತಿಯನ್ನು ಕುನಾಲ್ ಭದನಾ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಆಕ್ಷೇಪ

    ಮಸೀದಿ ಚೌಕ್ ಬಳಿ ಕುನಾಲ್ ನಿಂತಿದ್ದಾಗ ದುಷ್ಕರ್ಮಿಗಳು ಅವರ ಸಮೀಪ ಬಂದು ಗಲಾಟೆ ಮಾಡಿದ್ದಾರೆ. ಬಳಿಕ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೈದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳು ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುನಾಲ್ ಸ್ಥಳೀಯ ಕಾಂಗ್ರೆಸ್ ನಾಯಕ ಜ್ಯೋತೇಂದರ್ ಭದಾನ ಅವರ ಸಹೋದರ. ವಿಜಯ್ ಎಂಬ ವ್ಯಕ್ತಿಯೊಂದಿಗೆ ಫೋನ್‌ನಲ್ಲಿ ಕೆಲವು ವಿಷಯದ ಕುರಿತು ಅವರು ಗಲಾಟೆ ಮಾಡಿದ್ದಾರೆ. ನಂತರ ವಿಜಯ್ ಅವರ ಸಹೋದರ ಬಿಲ್ಲು ಮತ್ತು ಇತರ ಇಬ್ಬರು ಸಹಚರರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಘಟನೆಯ ಸಮಯದಲ್ಲಿ ಅವನೊಂದಿಗೆ ಇದ್ದ ಕುನಾಲ್ ಸ್ನೇಹಿತ ಪೊಲೀಸರಿಗೆ ತಿಳಿಸಿದ್ದಾರೆ. ಸಂತ್ರಸ್ತೆಯ ಸಹೋದರ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಜ್ಯೋತೇಂದರ್ ಭದಾನ, ನನ್ನ ಸಹೋದರನ ಸ್ನೇಹಿತನಿಂದ ಮಾಹಿತಿ ಪಡೆದು ನಾನು ಸ್ಥಳಕ್ಕೆ ಧಾವಿಸಿದೆ. ವಿಜಯ್ ಅವನ ಎದೆಗೆ ಗುಂಡು ಹಾರಿಸಿದಾಗ ಬಿಲ್ಲು ನನ್ನ ಸಹೋದರನ ಕೈ ಹಿಡಿದಿರುವುದನ್ನು ನಾನು ನೋಡಿದೆ. ನಂತರ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದಾರೆ. ಇತರರ ಸಹಾಯದಿಂದ ನಾನು ಕುನಾಲ್‍ನನ್ನು ಚಿಕಿತ್ಸೆಗಾಗಿ ಸೆಕ್ಟರ್ ಏಷ್ಯನ್ ಆಸ್ಪತ್ರೆಗೆ ಕರೆದೊಯ್ದಿದ್ದೆ. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅವರು ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ.

    ಈ ಸಂಬಂಧ ವಿಜಯ್, ಬಿಲ್ಲು ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಮತ್ತು 34 (ಸಾಮಾನ್ಯ ಉದ್ದೇಶ) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಸೋಮವಾರ ದಾಬುವಾ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂದರು.

    ಅಬಕಾರಿ ನೀತಿ ಹಗರಣ: ಕೆ. ಕವಿತಾ ಸಲ್ಲಿಸಿದ್ದ ಎರಡು ಜಾಮೀನು ಅರ್ಜಿ ತಿರಸ್ಕೃತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts