More

    ಆರೋಗ್ಯಕರ ಸಮಾಜಕ್ಕೆ ಸಹಕಾರ ಅವಶ್ಯ

    ನ್ಯಾಮತಿ: ಯುವಸಮೂಹ ಮಾದಕ ವಸ್ತುಗಳ ವ್ಯಸನದಿಂದ ದೂರ ಉಳಿಯುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದು ಪಿಐ ಎನ್.ಎಸ್. ರವಿ ಸಲಹೆ ನೀಡಿದರು.

    ಪಟ್ಟಣದ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ನ್ಯಾಮತಿ ಪೊಲೀಸ್ ಇಲಾಖೆ ಹಾಗೂ ಬಾಲಕರ ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಏರ್ಪಡಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯುವಸಮೂಹ ಮಾದಕ ವಸ್ತುಗಳ ದುಶ್ಚಟಗಳಿಂದ ದೂರ ಇರುವ ಜತೆಗೆ ಬಳಕೆ, ಮಾರಾಟದಂಥ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ವ್ಯಸನಮುಕ್ತ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.

    ಯುವಸಮೂಹ ಮಾದಕ ವಸ್ತುಗಳ ದಾಸರಾಗದೆ ಓದಿನತ್ತ ಹೆಚ್ಚು ಗಮನ ಹರಿಸಬೇಕು. ಪಾಲಕರು ನಿಮ್ಮ ಮೇಲೆ ಇಟ್ಟಿರುವ ಕನಸು ನನಸು ಮಾಡುವಂತೆ ತಿಳಿಸಿದರು.

    ತಹಸೀಲ್ದಾರ್ ಎಚ್.ಬಿ. ಗೊವಿಂದಪ್ಪ, ಪ್ರಾಚಾರ್ಯರಾದ ಡಾ.ಟಿ.ಸಿ. ಭಾರತಿ, ವಿ.ಪಿ. ಪೂರ್ಣಾನಂದ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

    ಇದಕ್ಕೂ ಮೊದಲು ನ್ಯಾಮತಿ- ಸುರಹೊನ್ನೆ ಮುಖ್ಯರಸ್ತೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಮಹಾಂತೇಶ್ವರ ಬಸ್ ನಿಲ್ದಾಣ ವೃತ್ತ ಜಾಥಾ ನಡೆಸಲಾಯಿತು.

    ಪಿಎಸ್‌ಐ ಜಯಪ್ಪ ನಾಯ್ಕ ಮತ್ತು ಚಂದ್ರಶೇಖರ್, ಎಚ್.ಬಿ. ಮಂಜಪ್ಪ, ಸರ್ಕಾರಿ ಪಿಯು ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ನವಲೆ ಗಂಗಾಧರ್, ಪಪಂ ಮುಖ್ಯಾಧಿಕಾರಿ ಪಿ. ಗಣೇಶ್‌ರಾವ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts