More

    ಆಸ್ಟ್ರೇಲಿಯಾದಲ್ಲಿ ತಂದೆಯ ಮಡಿಲು ಸೇರಿದ ಮಕ್ಕಳು

    ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಸತತ ಪ್ರಯತ್ನದ ಲವಾಗಿ ಮಕ್ಕಳಿಬ್ಬರು ಅನಿವಾಸಿ ಭಾರತೀಯ, ಧಾರವಾಡ ಮೂಲದ ತಂದೆಯ ಮಡಿಲು ಸೇರಿದ್ದಾರೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಲಿಂಗರಾಜ ಪಾಟೀಲ ಅವರ ಮಕ್ಕಳು ಜು. 11ರಂದು ಭಾರತಕ್ಕೆ ಆಗಮಿಸಲಿದ್ದಾರೆ.
    ನಗರದ ಸಪ್ತಾಪುರ ನಿವಾಸಿ, ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತ ಪ್ರೊ. ಎಸ್.ಎಸ್. ದೇಸಾಯಿ ಅವರ ಪುತ್ರಿ ಪ್ರಿಯದರ್ಶಿನಿ ಅವರ ವಿವಾಹ ಲಿಂಗರಾಜ ಪಾಟೀಲ ಅವರೊಂದಿಗೆ ನಡೆದಿತ್ತು. ಪುತ್ರ ಹಾಗೂ ಪುತ್ರಿಯೊಂದಿಗೆ ದಂಪತಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಪುತ್ರನ ಆರೋಗ್ಯ ಸಮಸ್ಯೆ ವಿಚಾರವಾಗಿ ಪ್ರಿಯದರ್ಶಿನಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಪ್ರಕರಣ ದಾಖಲಿಸಿದ್ದರು. ಆದರೆ, ಅಲ್ಲಿನ ಕಾನೂನಿನಂತೆ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದು, ಸರ್ಕಾರ ಇಬ್ಬರೂ ಮಕ್ಕಳನ್ನು ವಶಕ್ಕೆ ಪಡೆದು ಪೋಷಣೆ ಮಾಡುತ್ತಿತ್ತು. ಆಸ್ಟ್ರೇಲಿಯಾದ ಕಠಿಣ ಕಾನೂನಿನ ವಿರುದ್ಧ ಹೋರಾಡಿ ಬೇಸತ್ತಿದ್ದ ಪ್ರಿಯದರ್ಶಿನಿ, 2023ರ ಆಗಸ್ಟ್‌ನಲ್ಲಿ ಭಾರತಕ್ಕೆ ಬಂದು ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ. 20ರಂದು ಅವರ ಮೃತದೇಹ ಪತ್ತೆಯಾಗಿತ್ತು.
    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೊ. ಪಾಟೀಲ ಅವರನ್ನು ಭೇಟಿ ಮಾಡಿ ಮೊಮ್ಮಕ್ಕಳನ್ನು ಆಸ್ಟ್ರೇಲಿಯಾದಿಂದ ಭಾರತಕ್ಕೆ ಕರೆಸಿಕೊಡುವುದಾಗಿ ಭರವಸೆ ನೀಡಿದ್ದರು. ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಅವರ ಗಮನಕ್ಕೆ ವಿಷಯ ತಂದು ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು.
    ಸಚಿವರ ನಿರಂತರ ಪ್ರಯತ್ನದ ಫಲವಾಗಿ ಆಸ್ಟ್ರೇಲಿಯಾ ಸರ್ಕಾರ ಮಕ್ಕಳನ್ನು ತಂದೆಯ ಸುಪರ್ದಿಗೆ ನೀಡಿದೆ. ಜು. 11ರಂದು ತವರಿಗೆ ಆಗಮಿಸಲಿದ್ದು, ಅಜ್ಜ- ಅಜ್ಜಿಯ ಮಡಿಲು ಸೇರಲಿದ್ದಾರೆ. ಕೇಂದ್ರ ಸಚಿವರ ಪ್ರಯತ್ನವನ್ನು ಮಾಜಿ ಮೇಯರ್ ಈರೇಶ ಅಂಚಟಗೇರಿ ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts