More

    ಆಡುವುದಕ್ಕೆ ಪಿಚ್​ ಸೂಕ್ತವಾಗಿರಲಿಲ್ಲ; ಸೆಮಿಫೈನಲ್​ ಸೋಲಿನ ಬಳಿಕ​ ಹೊಸ ಆರೋಪ ಮಾಡಿದ ಅಫ್ಘಾನಿಸ್ತಾನ​ ಕೋಚ್

    ಟ್ರಿನಿಡಾಡ್​: ಇಲ್ಲಿನ ಬ್ರಯನ್​ ಲಾರಾ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಮೊದಲ ಸಮಿಫೈನಲ್​ನಲ್ಲಿ ಅಫ್ಘಾನಿಸ್ತಾನ ತಂಡವು ದಕ್ಷಿಣ ಆಫ್ರಿಕಾ ಎದುರು ಸೋಲುಂಡಿದ್ದು, ಚುಟುಕು ವಿಶ್ವಸಮರದಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಅಫ್ಘಾನಿಸ್ತಾನದ ಸೋಲಿನ ಬೆನ್ನಲ್ಲೇ ಐಸಿಸಿ ವಿರುದ್ಧ ಹೊಸ ಆರೋಪಗಳು ಕೇಳಿ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಅಫ್ಘಾನಿಸ್ತಾನ ಕ್ರಿಕೆಟ್​ ಕೋಚ್​ ಜೊನಾಥನ್​ ಟ್ರಾಟ್​ ಹೊಸ ಆರೋಪ ಒಂದನ್ನು ಮಾಡಿದ್ದಾರೆ.

    ತಂಡದ ಸೋಲಿನ ಕುರಿತು ಮಾತನಾಡಿದ ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಜೊನಾಥನ್​ ಟ್ರಾಟ್​, ನಾನು ಯಾವುದೇ ಘರ್ಷಣೆ ಅಥವಾ ವಿವಾದದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ. ಆದರೆ, ಸೆಮೀಸ್​ಗಾಗಿ ರೆಡಿ ಮಾಡಿದ್ದ ಪಿಚ್​ ಕಳಪೆಯಾಗಿದ್ದು, ಪಂದ್ಯ ಆಡುವುದಕ್ಕೆ ಸೂಕ್ತವಾಗಿರಲಿಲ್ಲ. ಇದನ್ನು ನಾನು ಹೇಳಬಲ್ಲೆ.

    ಇದನ್ನೂ ಓದಿ: ಟ್ರಾಫಿಕ್​ ಪೊಲೀಸ್​ ನೋಡುತ್ತಿದ್ದಂತೆ ಹೆಲ್ಮೆಟ್​ ಧರಿಸಿದ ಸವಾರ; ಮುಂದೆ ಆಗಿದ್ದು ಮಾತ್ರ…

    ದಕ್ಷಿಣ ಆಫ್ರಿಕಾ ಉತ್ತಮವಾಗಿ ಬೌಲಿಂಗ್ ಮಾಡಿದೆ, ಪರಿಸ್ಥಿತಿಗಳನ್ನು ಬಳಸಿಕೊಂಡಿತು ಮತ್ತು ನಮ್ಮ ಹುಡುಗರಿಗೆ ತನ್ನ ಸಾಮರ್ಥ್ಯ ಏನೆಂದು ತೋರಿಸಿದೆ. ಆದರೆ ಅದು ಇಂದು ರಾತ್ರಿ ನಮ್ಮ ದಾರಿಯಲ್ಲಿ ಹೋಗಲಿಲ್ಲ. ಒಂದು ವೇಳೆ ನಾವು ದಕ್ಷಿಣ ಆಫ್ರಿಕಾ ರೀತಿ ಬೌಲಿಂಗ್​ ಮಾಡಿದ್ದರೆ ಪಂದ್ಯದ ದಿಕ್ಕೆ ಬದಲಾಗುತ್ತಿತ್ತು. ನಮ್ಮ ಸೋಲಿಗೆ ವೇಳಾಪಟ್ಟಿಯನ್ನು ದೂಷಿಸುವುದು ತಪ್ಪಾಗುತ್ತದೆ.

    ಕಳೆದ ವರ್ಷ ನಡೆದ ವಿಶ್ವಕಪ್​ಗೆ ಹೋಲಿಸಿಕೊಂಡರೆ ತಂಡದಲ್ಲಿ ಅನೇಕ ಸುಧಾರಣೆಗಳಾಗಿದ್ದು, ಯಾವುದೇ ತಂಡವಾದರು ತಕ್ಕ ಪೈಪೋಟಿ ನೀಡುತ್ತೇವೆ ಎಂದು ಧೈರ್ಯ ಬಂದಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್​ ತಂಡದ ಕೋಚ್​ ಜೊನಾಥನ್​ ಟ್ರಾಟ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts