More

    ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..

    ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..ನೀಲಗಿರಿ ನಮ್ಮ ರಾಜ್ಯಕ್ಕೆ ಬಂದದ್ದು ಅಂದಾಜು 1790ರಲ್ಲಿ. ಟಿಪ್ಪು ಸುಲ್ತಾನ್ ನಂದಿಬೆಟ್ಟದಲ್ಲಿ ನೀಲಗಿರಿ ಮರವನ್ನು ಸಾಂಕೇತಿಕವಾಗಿ ಬೆಳೆದಿದ್ದರಂತೆ. ನಂತರ ಬ್ರಿಟಿಷ್ ಆಳ್ವಿಕೆಯ 1830ರಲ್ಲಿ ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಸರ್ ಹೆನ್ರಿ ರ್ಹೋಡ್ಸ್ ಮೋರ್ಗನ್ ಎಂಬುವವರು, ಆಸ್ಟ್ರೇಲಿಯಾದಿಂದ ಯೂಕಲಿಪ್ಟಸ್ ಮರವನ್ನು ತಂದು ನೀಲಗಿರಿ ತಪ್ಪಲಿನಲ್ಲಿ ಟೀ ತೋಟದ ಕೆಲಸಗಾರರಿಗೆ ಸೌದೆ ಪೂರೈಕೆಗಾಗಿ ದೊಡ್ಡಮಟ್ಟದಲ್ಲಿ ಬೆಳೆಯಲಾರಂಭಿಸಿದರು. ಅಂದಿನಿಂದ ಯೂಕಲಿಪ್ಟಸ್ ಮರವು ಕನ್ನಡದಲ್ಲಿ ನೀಲಗಿರಿ ಮರ ಎಂದು ನಾಮಾಂಕಿತವಾಯಿತು.

    ಆಸ್ಟ್ರೇಲಿಯಾ ದೇಶವು ಅತಿ ಹೆಚ್ಚು ಮರುಭೂಮಿಗಳ ದೇಶ ಎಂದು ಖ್ಯಾತಿ ಪಡೆದಿದೆ ಮತ್ತು ಆ ದೇಶದಲ್ಲಿ ಪ್ರತಿವರ್ಷ ಕಾಡ್ಗಿಚ್ಚು ಅತಿರೇಕವಾಗುತ್ತದೆ. ಇದಕ್ಕೆ ಆ ದೇಶದಲ್ಲಿ ನೀಲಗಿರಿ ಮರವು ಹೆಚ್ಚಾಗಿರಲು ಕಾರಣವಿರಬಹುದು..! ಮತ್ತು ಈ ಎಲೆಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇದ್ದು ಇವು ಕರಗದೇ ಇರುವುದರಿಂದಲೂ ಇರಬಹುದು.

    ರಾಜ್ಯದಲ್ಲಿ ನೀಲಗಿರಿ ಮರ ಬೆಳೆಯಲು ಕಾರಣ:
    ಅಂದಾಜು 60 ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ ಅಂದಾಜು ಶೇ.95ಕ್ಕೂ ಹೆಚ್ಚು ಜನರು, ಅಡುಗೆ ಮಾಡಲು ಸೌದೆ ಉಪಯೋಗಿಸುವುದು ಸರ್ವೇಸಾಮಾನ್ಯವಾಗಿತ್ತು. ಜನರಿಗೆ ಸೌದೆ ಪೂರೈಕೆಗಾಗಿ, ಇದ್ದಿಲು ಮಾಡಲಿಕ್ಕಾಗಿ, ಮಣ್ಣಿನಲ್ಲಿರುವ ತೇವಾಂಶವನ್ನು ಇಂಗಿಸುವ ಸಲುವಾಗಿ, ರೈಲು ಹಳಿ ಸ್ಲೀಪರ್‌ಗಾಗಿ, ಕಾಗದ ಮತ್ತು ಬಟ್ಟೆ ತಯಾರಿಸುವ ಕಾರ್ಖಾನೆಗಳಿಗೆ ಕಚ್ಚಾವಸ್ತುವಾಗಿ ಮರವನ್ನು ಸರಬರಾಜು ಮಾಡಲು ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಈ ಮರವನ್ನು ರಸ್ತೆಯ ಬದಿಗಳಲ್ಲಿ, ರೈಲ್ವೆ ಹಳಿಯ ಇಕ್ಕೆಲಗಳಲ್ಲಿ, ಹೊಲ ಗದ್ದೆಗಳ ಬದುಗಳಲ್ಲಿ, ರೈತರ ಜಮೀನಿನ ಅಂಚಿನ ಬೇಲಿಗಳಲ್ಲಿ ಬೆಳೆಯಬೇಕೆಂದು ಅರಣ್ಯ ಇಲಾಖೆಯು ಈ ಗಿಡದ ಸಸಿಗಳನ್ನು ರೈತರಿಗೆ ಕೊಟ್ಟು ಬೆಳೆಯಲು ಪ್ರೋತ್ಸಾಹಿಸಿತು. ಆದ ಕಾರಣ ಈ ಮರಕ್ಕೆ ಬೇಡಿಕೆ ಹೆಚ್ಚಾಗಿ ಮರ ಬೆಳೆಯುವುದು ವಾಣಿಜ್ಯೀಕರಣವಾಯಿತು. ಅರಣ್ಯ ಇಲಾಖೆಯವರು, ವ್ಯವಸಾಯವನ್ನು ಮತ್ತು ಅರಣ್ಯೀಕರಣವನ್ನು ಕೈಗಾರೀಕರಣವನ್ನಾಗಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts