More

    ನೀಲಗಿರಿಯಿಂದ ಎಷ್ಟೊಂದು ತೊಂದರೆಯಾಗುತ್ತಿದೆ ಗೊತ್ತಾ?

    ಮುಂದುವರಿದ ಭಾಗ…

    ನೀಲಗಿರಿಯಿಂದ ಎಷ್ಟೊಂದು ತೊಂದರೆಯಾಗುತ್ತಿದೆ ಗೊತ್ತಾ?ನೀಲಗಿರಿಗಳನ್ನು ಬೆಳೆಯಲು ನೀರು ಪೂರೈಕೆಯ ಅಗತ್ಯವಿಲ್ಲ, ಗೊಬ್ಬರ ಬೇಕಿಲ್ಲ, ಗದ್ದೆಯನ್ನು ಊಳುವ ತೊಂದರೆಯಿಲ್ಲ, ಯಾವ ಪ್ರಾಣಿಯೂ ಇದನ್ನು ತಿನ್ನುವುದಿಲ್ಲ. ಹೀಗಾಗಿ ಇದಕ್ಕೆ ಬೇಲಿಯ ಅಗತ್ಯವೂ ಇಲ್ಲ. ಅದೂ ಅಲ್ಲದೆ, ಇದು ಬಹಳ ಬೇಗ ಬೆಳೆಯುತ್ತದೆ. ಕಾಗದ ಮತ್ತು ಬಟ್ಟೆ ಕಾರ್ಖಾನೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ರೈತರು ಯಾವುದೇ ಕಷ್ಟವಿಲ್ಲದೆ ಹಣವನ್ನು ಸಂಪಾದಿಸಬಹುದು ಎಂದುಕೊಂಡು ತರಕಾರಿ, ಕಾಳುಗಳು, ಹೂವು ಬೆಳೆಯುವ ಜಾಗದಲ್ಲಿ, ರೈತ ಕಾರ್ಮಿಕರ ಅಭಾವದಿಂದ ದೊಡ್ಡ ದೊಡ್ಡ ರೈತರೂ ಕೂಡ ನೀಲಗಿರಿಯನ್ನು ಯಥೇಚ್ಛವಾಗಿ ವಾಣಿಜ್ಯ ಬೆಳೆ ಎಂಬಂತೆ ಬೆಳೆಯತೊಡಗಿದರು. ಸುಲಭವಾಗಿ ಹಣ ಸಂಪಾದಿಸುವ ದಾರಿಯಾಗಿ ಮಾರ್ಪಟ್ಟಿತ್ತು. ನಮ್ಮ ರೈತ ಬಾಂಧವರು ಹೆಚ್ಚಿನ ಶ್ರಮವಿಲ್ಲದ ಕಾರಣ ಇದಕ್ಕೆ ಹೆಚ್ಚು ಮಾರು ಹೋಗತೊಡಗಿದರು. ರೈತ ಮತ್ತು ಭೂತಾಯಿಯ ಸಂಬಂಧ ಕಳಚಿ ಬಿತ್ತು. ಭೂಮಾತೆ ಬರಡಾದಳು.

    ಜೀವ ವೈವಿದ್ಯತೆ ನಾಶ:
    ಹುಳ – ಹುಪ್ಪಟ್ಟೆಗಳು, ಸೂಕ್ಷ್ಮಜೀವಿಗಳು ಈ ಮರದಲ್ಲಿ ಮನೆ ಮಾಡಲಿಲ್ಲ, ಪಕ್ಷಿಗಳು ಹಣ್ಣು ಹಂಪಲು ತಿನ್ನಲಿಲ್ಲ, ಜೇನು ನೊಣಗಳು ಗೂಡು ಕಟ್ಟಲಾಗಲಿಲ್ಲ, ರೈತನ ಬೆಳೆಯ ಹೂವಿನ ಪರಾಗಸ್ಪರ್ಶದ ಕೊರತೆಯಾಯಿತು, ಕೋಟ್ಯಂತರ ಸೂಕ್ಷ್ಮ ಜೀವಿಗಳು ನಶಿಸಿಹೋದವು, ಜೀವ ವೈವಿಧ್ಯತೆಯಲ್ಲಿ ಏರುಪೇರಾಗಿ ಸಂಪೂರ್ಣ ಪರಿಸರ ಚಕ್ರ ಹಾಳಾಗಿ ಜೀವ ಸಂಕುಲಗಳಲ್ಲಿ ವೈಪರೀತ್ಯವುಂಟಾಯಿತು. ಬೆಳೆ ತಿನ್ನುವ ಕೀಟಗಳನ್ನು ತಿನ್ನುತ್ತಿದ್ದ ಪಕ್ಷಿಗಳು ಮತ್ತು ಇತರ ಕೀಟಗಳು ಮಾಯವಾದವು. ಆಗ ಕೀಟನಾಶಕ ಔಷಧಗಳು ಬಳಕೆಯಾದವು. ಬೇಳೆಕಾಳುಗಳು, ಹಣ್ಣು, ತರಕಾರಿಗಳು ಔಷಧಮಯವಾದವು, ಮಾನವರಿಗೆ ಹೊಸ ಹೊಸ ರೋಗಗಳು ಬರಲಾರಂಭಿಸಿದವು, ಜನರು ಔಷಧಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲಾರಂಬಿಸಿದರು, ಹೆಲ್ದಿ ಸಿಟಿಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗಿ ಹೆಲ್ತ್ ಸಿಟಿ ಎನಿಸಿಕೊಂಡವು.

    ಮುಂದುವರಿಯುತ್ತದೆ…

    ನೀಲಗಿರಿ ನಮ್ಮ ರಾಜ್ಯಕ್ಕೆ ಬಂದಿದ್ದು ಹೇಗೆ? ಆ ಮರದ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು..

    ಲಾಕ್​ಡೌನ್​ 15 ದಿನ ವಿಸ್ತರಣೆಯಾಗುವುದು ಫಿಕ್ಸ್! ಮಾಹಿತಿ ಬಿಚ್ಚಿಟ್ಟ ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts