"ಅಮೆರಿಕನ್ನರಿಗೆ ಬೋರ್ ಆದ್ರೆ ಇಸ್ರೇಲ್ ಪ್ರಧಾನಿ ಆಗ್ತೀನಿ!": ಟ್ರಂಪ್​ ಸ್ಪೋಟಕ ಹೇಳಿಕೆ; ನೆತನ್ಯಾಹು ಜೊತೆಗಿನ ರಹಸ್ಯ ಒಪ್ಪಂದ ರಿವೀಲ್! Donald Trump

Donald Trump says he would become Israel's PM if Americans get bored!
ಅಮೆರಿಕನ್ನರಿಗೆ ಬೋರ್ ಆದರೆ ಇಸ್ರೇಲ್ ಪಿಎಂ ಆಗುವೆ ಎಂದ ಡೊನಾಲ್ಡ್ ಟ್ರಂಪ್!
Published on: 

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಯ್ಬಿಟ್ಟರೆ ಸಾಕು, ಜಗತ್ತಿನಾದ್ಯಂತ ಸಂಚಲನ ಸೃಷ್ಟಿಯಾಗುವುದು ಗ್ಯಾರಂಟಿ. ಇದೀಗ ಅಮೆರಿಕದ ಹೈ-ವೋಲ್ಟೇಜ್ ಮಧ್ಯಂತರ ಚುನಾವಣೆಗಳ ಮತದಾನದ ದಿನವೇ ಟ್ರಂಪ್ ತಮ್ಮ ಎಂದಿನ ಅಚ್ಚರಿಯ ಹೇಳಿಕೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದಾರೆ.

"ಅಮೆರಿಕದ ಜನರಿಗೆ ನನ್ನಿಂದ ಬೇಸರ ಬಂದರೆ, ನಾನು ಇಸ್ರೇಲ್‌ಗೆ ಹೋಗಿ ಅಲ್ಲಿನ ಪ್ರಧಾನಿಯಾಗುತ್ತೇನೆ!" ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಖಾಸಗಿ ಮಾಧ್ಯವೊಂದರ ಕಾರ್ಯಕ್ರಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಮಾತುಗಳನ್ನಾಡಿದ್ದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

"ಇಸ್ರೇಲ್‌ನಲ್ಲಿ ನನ್ನ ರೇಟಿಂಗ್ 99%"!

ಸಂದರ್ಶನದಲ್ಲಿ ಮಾತನಾಡುತ್ತಾ ಅಮೆರಿಕ ಹಾಗೂ ಇಸ್ರೇಲ್ ರಾಜಕೀಯದ ಬಗ್ಗೆ ಚರ್ಚಿಸಿದ ಟ್ರಂಪ್, ಇಸ್ರೇಲ್‌ನಲ್ಲಿ ನನ್ನ ಜನಪ್ರಿಯತೆಯ ರೇಟಿಂಗ್ ಶೇಕಡಾ 99ರಷ್ಟಿದೆ. ಒಂದು ವೇಳೆ ಯುನೈಟೆಡ್ ಸ್ಟೇಟ್ಸ್‌ನ ಜನರು ನನ್ನಿಂದ ಬೇಸತ್ತರೆ, ನಾನು ನೇರವಾಗಿ ಇಸ್ರೇಲ್‌ಗೆ ತೆರಳಿ ಅಲ್ಲಿನ ಪ್ರಧಾನಮಂತ್ರಿ ಆಗಿಬಿಡುತ್ತೇನೆ" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಡೆಮಾಕ್ರಟ್‌ಗಳು ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಭಾರೀ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ, ಟ್ರಂಪ್ ಅವರ ಎರಡನೇ ಅವಧಿಯ ಶಾಸಕಾಂಗ ಪರೀಕ್ಷೆಯಂತಿರುವ ಮಧ್ಯಂತರ ಚುನಾವಣೆ ವೇಳೆ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಸ್ರೇಲ್‌ಗೆ ನೀಡುತ್ತಿದ್ದ 4 ಬಿಲಿಯನ್ ಡಾಲರ್ ನೆರವು ಕಟ್!

ಕೇವಲ ಪ್ರಧಾನಿ ಹುದ್ದೆಯ ಮಾತು ಮಾತ್ರವಲ್ಲದೆ, ಇಸ್ರೇಲ್‌ಗೆ ಅಮೆರಿಕ ನೀಡುತ್ತಿದ್ದ ಬೃಹತ್ ಆರ್ಥಿಕ ಪ್ಯಾಕೇಜ್ ಕುರಿತು ಟ್ರಂಪ್ ಶಾಕಿಂಗ್ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ತಾವು ಈಗಾಗಲೇ ಮಹತ್ವದ ಒಪ್ಪಂದ ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ನೆರವು ಬಂದ್: ವಾಷಿಂಗ್ಟನ್ ಇನ್ಮುಂದೆ ಇಸ್ರೇಲ್‌ಗೆ ಪ್ರತಿ ವರ್ಷ ನೀಡುತ್ತಿದ್ದ ಸುಮಾರು 4 ಬಿಲಿಯನ್ ಡಾಲರ್ ಆರ್ಥಿಕ ನೆರವನ್ನು ಈ ವರ್ಷದ ಅಂತ್ಯದ ನಂತರ ಸಂಪೂರ್ಣವಾಗಿ ನಿಲ್ಲಿಸಲಿದೆ.

Also Read
ಹಿಂದೂ ಧರ್ಮ, ಅರ್ಚಕರ ವಿರುದ್ಧ ವಿವಾದಾತ್ಮಕ ಹೇಳಿಕೆ: AISA ಅಧ್ಯಕ್ಷೆ ನೇಹಾ ಬೋರಾ ವಿರುದ್ಧ ದೂರು; ರಾಹುಲ್​ ವಿರುದ್ಧ ಕಿಡಿಕಾರಿದ ಬಿಜೆಪಿ! Neha Bora
Donald Trump says he would become Israel's PM if Americans get bored!

ಕಾರಣವೇನು?: ಇಸ್ರೇಲ್‌ಗೆ ಇನ್ನು ಮುಂದೆ ನಮ್ಮ ಹಣಕಾಸಿನ ನೆರವಿನ ಅಗತ್ಯವಿಲ್ಲ. ಅವರು ಆರ್ಥಿಕವಾಗಿ ಬಲಿಷ್ಠವಾಗಿದ್ದಾರೆ. ಆದರೆ ಎಡಪಂಥೀಯರು ಮತ್ತು ಕೆಲ ಡೆಮಾಕ್ರಟ್‌ಗಳು ಈ ನಿಧಿಯನ್ನೇ ಮುಂದಿಟ್ಟುಕೊಂಡು ರಿಪಬ್ಲಿಕನ್ನರ ಮೇಲೆ ದಾಳಿ ನಡೆಸಲು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

ಈಗಾಗಲೇ ನೆತನ್ಯಾಹು ಮತ್ತು ನಾನು ತಿಂಗಳ ಹಿಂದೆಯೇ ಒಪ್ಪಂದಕ್ಕೆ ಬಂದಿದ್ದೇವೆ. ಈ ವರ್ಷದ ಕೊನೆಗೆ ಹಣ ನೀಡುವುದನ್ನು ನಿಲ್ಲಿಸುತ್ತೇವೆ. ಭವಿಷ್ಯದಲ್ಲಿ ನಿಜವಾಗಿಯೂ ಅಗತ್ಯ ಬಿದ್ದರೆ ಮಾತ್ರ ಸಹಾಯ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇರಾನ್ ವಿಮಾನ ವಿರೋಧಿ ನೆಲೆ ಧ್ವಂಸ: ರಹಸ್ಯ ಆಪರೇಷನ್ ಬಿಚ್ಚಿಟ್ಟ ಟ್ರಂಪ್!

ಇನ್ನೊಂದೆಡೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ನಡುವೆಯೇ, ಇರಾನ್ ವಿರುದ್ಧ ಅಮೆರಿಕ ಸೇನೆ ನಡೆಸಿದ ರಹಸ್ಯ ಕಾರ್ಯಾಚರಣೆಯ ವಿವರಗಳನ್ನು ಟ್ರಂಪ್ ತೆರೆದಿಟ್ಟಿದ್ದಾರೆ. ಇರಾನ್‌ನ ಕೇಶಮ್​ (Qeshm) ದ್ವೀಪದ ಮೇಲಿನ ಅಮೆರಿಕದ ದಾಳಿಯ ಕುರಿತು ಮಾತನಾಡಿದ ಅವರು, ಇದೊಂದು ಭರ್ಜರಿ ಯಶಸ್ವಿ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.

ಅಮೆರಿಕದ ಮಿಲಿಟರಿ ಪಡೆಗಳು ಇರಾನ್‌ನ ವಾಯು ರಕ್ಷಣಾ ನೆಲೆಯನ್ನು ಸತತ ಎರಡು ತಿಂಗಳುಗಳ ಕಾಲ ಹದ್ದಿನ ಕಣ್ಣಿಟ್ಟು ಮೇಲ್ವಿಚಾರಣೆ ನಡೆಸುತ್ತಿದ್ದವು. ಆ ನೆಲೆ ಸಂಪೂರ್ಣ ಸಜ್ಜುಗೊಂಡ ಕೆಲವೇ ದಿನಗಳಲ್ಲಿ ಅಮೆರಿಕದ ಪಡೆಗಳು ಅದರ ಮೇಲೆ ಮಿಂಚಿನ ದಾಳಿ ನಡೆಸಿ ಧ್ವಂಸಗೊಳಿಸಿವೆ ಎಂದು ಟ್ರಂಪ್ ವಿವರ ನೀಡಿದ್ದಾರೆ.

ಈ ದಾಳಿಯ ನಂತರ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವೆ ಉದ್ವಿಗ್ನತೆ ತಾರಕಕ್ಕೇರಿದ್ದು, ಅಮೆರಿಕದ ಯಾವುದೇ ಮುಂದಿನ ಸೇನಾ ಕ್ರಮಕ್ಕೆ ತಕ್ಕ ಪ್ರತ್ಯುತ್ತರ ಹಾಗೂ ತೀವ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದೆ, (ಏಜೆನ್ಸೀಸ್​).

Related Stories

A photo of Donald Trump issuing a warning against Iran
ಸೋಶಿಯಲ್​ ಮೀಡಿಯಾದಲ್ಲಿ ಟ್ರಂಪ್ ವಿರುದ್ಧ ಟ್ರೋಲ್
US President Donald Trump
Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್