More

    ಜನತಾ ಕರ್ಫ್ಯೂ ಬಗ್ಗೆ ಜಾಗೃತಿ ಮೂಡಿಸಿದ್ರು ನೂತನ ವಧು- ವರರು! : ಗುಂಡ್ಲುಪೇಟೆಯ ಕಲ್ಯಾಣ ಮಂಟಪವೊಂದು ಜಾಗೃತಿಗೆ ವೇದಿಕೆಯಾಯಿತು!

    ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದ ದಯಾನಂದ್ ಹಾಗೂ ಆಶಾ ಅವರ ಮದುವೆ ಪಟ್ಟಣದ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮದುವೆಯ ಆರತಕ್ಷತೆಯ ಸಮಯದಲ್ಲಿ ಜನತಾ ಕರ್ಫ್ಯೂ ಬೆಂಬಲಿಸುವ ಭಿತ್ತಿ ಪತ್ರವನ್ನು ಪ್ರದರ್ಶಿಸುವುದರ ಮುಖಾಂತರ ಮದುವೆಗೆ ಬಂದ ಮಂದಿಗೆ ಜನತಾ ಕರ್ಫ್ಯೂವನ್ನು ಪಾಲಿಸೋಣ ಎಂಬ ಸಂದೇಶವನ್ನು ರವಾನಿಸಿದರು.

    ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ಕರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂಪ್ರೇರಿತರಾಗಿ ಮಾರ್ಚ್ 22 ರಂದು ಜನತಾ ಕರ್ಫ್ಯೂವನ್ನು ಪಾಲಿಸಲು ಕರೆ ನೀಡಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಎಲ್ಲರೂ ಒಟ್ಟಾಗಿ ಪಾಲಿಸೋಣ ಎಂದು ನೂತನ ವಧು ವರರು ತಿಳಿಸಿದರು.

    ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾ.19ರಂದು ರಾತ್ರಿ 8 ಗಂಟೆಗೆ ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತ ಈ ಕರೆಯನ್ನು ಕೊಟ್ಟಿದ್ದಾರೆ. ಕೊರನಾ ವೈರಸ್ Covid19 ಸೋಂಕು ಹರಡದಂತೆ ತಡೆಯಲು ಸರ್ಕಾರದ ಈ ಹೆಜ್ಜೆ ಮಹತ್ವದ್ದಾಗಿ ಗೋಚರಿಸಿದೆ.

    ಕರೋನಾ ವೈರಸ್​: ರಾಜ್ಯಗಳ ಸಹಾಯವಾಣಿ ಸಂಖ್ಯೆಗಳ ಬಗ್ಗೆ ತಿಳಿದುಕೊಂಡಿರಿ..

    ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts