More

    ಬಜೆಟ್​ನಲ್ಲಿ ಹೊಸ ತೆರಿಗೆ ಸ್ಲ್ಯಾಬ್ ಪರಿಚಯ ಸಾಧ್ಯತೆ: ಒಂದಿಷ್ಟು ಕಡಿಮೆಯಾಗಬಹುದು ಇನ್​ಕಂ ಟ್ಯಾಕ್ಸ್

    ನವದೆಹಲಿ: ಮುಂಬರುವ ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ಕಡಿತದ ವಿಷಯದಲ್ಲಿ ಸ್ವಲ್ಪ ಪರಿಹಾರವನ್ನು ನೀಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿದೆ. ತೆರಿಗೆದಾರರಿಗೆ ಹೊಸ ಪರಿಹಾರ ನೀಡುವ ಮೂಲಕ ಹೊಸ ತೆರಿಗೆ ಪದ್ಧತಿಯನ್ನು ಇನ್ನಷ್ಟು ಆಕರ್ಷಕವಾಗಿಸಲು ಸರ್ಕಾರದೊಳಗೆ ಚರ್ಚೆಗಳು ಪ್ರಾರಂಭವಾಗಿವೆ.

    ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹೊಸ ತೆರಿಗೆ ಸ್ಲ್ಯಾಬ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವರ್ಷಕ್ಕೆ ರೂ. 5 ಲಕ್ಷದವರೆಗೆ ಆದಾಯ ಗಳಿಸುವ ತೆರಿಗೆದಾರರು, ಹಾಗೆಯೇ ರೂ .15 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರು ಕಡಿಮೆ ತೆರಿಗೆ ಪರಿಹಾರ ಪಡೆಯುವ ನಿರೀಕ್ಷೆಯಿದೆ.

    ತೆರಿಗೆ ಕಡಿತದ ಜತೆಗೆ, ಮುಂಬರುವ ಬಜೆಟ್‌ನಲ್ಲಿ ಪ್ರಕ್ರಿಯೆ ಸರಳೀಕರಣಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಸರ್ಕಾರ ಘೋಷಿಸುವ ನಿರೀಕ್ಷೆಯಿದೆ. ಆದರೆ, ಈ ಚರ್ಚೆಗಳು ಆರಂಭಿಕ ಹಂತದಲ್ಲಿವೆ. ಅಂತಿಮ ನಿರ್ಧಾರವನ್ನು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

    ಸಾಮಾನ್ಯ ಜನರ ಮೇಲೆ ಆದಾಯ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಆಗ್ರಹ ಕೇಳಿಬಂದಿದೆ. ಸೀತಾರಾಮನ್ ಅವರೊಂದಿಗಿನ ಬಜೆಟ್ ಪೂರ್ವ ಸಮಾಲೋಚನೆಯ ಸಂದರ್ಭದಲ್ಲಿ, ಉದ್ಯಮದ ಪ್ರಮುಖರು ಮತ್ತು ಸಂಘಗಳು ಆದಾಯದ ಸ್ಲ್ಯಾಬ್‌ಗಳ ಕೆಳ ತುದಿಯಲ್ಲಿ ಆದಾಯ ತೆರಿಗೆಯಲ್ಲಿ ಪರಿಹಾರವನ್ನು ಸೇರಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ, ಉತ್ಪಾದನಾ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ರೀತಿಯ ಉದ್ಯೋಗ ಪ್ರೋತ್ಸಾಹಕ ಯೋಜನೆಗಳನ್ನು ಸುಗಮಗೊಳಿಸಿ, ವ್ಯವಹಾರವನ್ನು ಸುಲಭಗೊಳಿಸಲು ಉತ್ತೇಜಿಸಬೇಕು ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (FICCI- ಫಿಕ್ಕಿ) ಮನವಿ ಮಾಡಿದೆ.

    ಫಿಕ್ಕಿಯ ಶಿಫಾರಸುಗಳು ಕ್ಯಾಪೆಕ್ಸ್ ಡ್ರೈವ್, ನಾವೀನ್ಯತೆ ಮತ್ತು ತೆರಿಗೆ ಸರಳೀಕರಣದ ಸುತ್ತ ಕೇಂದ್ರೀಕೃತವಾಗಿವೆ. ಉದ್ಯಮದ ಪ್ರಮುಖರು ಎಂಎಸ್​ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯವನ್ನು ಉತ್ತೇಜಿಸಲು ಒತ್ತು ನೀಡಿದ್ದಾರೆ, ಇದನ್ನು ಭಾರತೀಯ ಆರ್ಥಿಕತೆಯ ಬೆನ್ನೆಲುಬು ಮತ್ತು ಮುಖ್ಯ ಉದ್ಯೋಗ ಉತ್ಪಾದಕ ಎಂದು ಪರಿಗಣಿಸಲಾಗಿದೆ.

    ಕ್ವಾಂಟ್ ಮ್ಯೂಚುವಲ್ ಫಂಡ್ ವಿರುದ್ಧ ಸೆಬಿ ತನಿಖೆ ಏಕೆ?

    ಅದಾನಿ ಎಂಟರ್​ಪ್ರೈಸಸ್​ ಹೆಸರು ಹಾಳು ಮಾಡಲು ಹಿಂಡನ್‌ಬರ್ಗ್ ವರದಿಯ ಸೃಷ್ಟಿ: ಗೌತಮ್​ ಅದಾನಿ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts