More

    ಅಲೋಶಿಯಸ್ ಪರಿಗಣಿತ ವಿವಿಗೆ ಎನ್‌ಸಿಸಿ ಡಿಡಿಜಿ ಭೇಟಿ



    ಮಂಗಳೂರು : ಎನ್‌ಸಿಸಿಯ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಡಿಡಿಜಿ, ಕಮೋಡೋರ್ ಬಿ.ಅರುಣ್ ಕುಮಾರ್ ಅವರು ನಗರದ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಗೆ ಭೇಟಿ ನೀಡಿ ಉಪ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್, ಎಎನ್‌ಒಗಳು ಮತ್ತು ಎನ್‌ಸಿಸಿ ಕೆಡೆಟ್‌ಗಳ ಜತೆ ಸಂವಾದ ನಡೆಸಿದರು. ಎನ್‌ಸಿಸಿಯ ತರಬೇತಿ ಮತ್ತು ಚಟುವಟಿಕೆಗಳ ಪರಿಶೀಲನೆಯ ಭಾಗವಾಗಿ ಆವರು ಆಗಮಿಸಿದ್ದರು.
    ಎನ್‌ಸಿಸಿ ಮಂಗಳೂರು ವಲಯದ ಗ್ರೂಪ್ ಕಮಾಂಡರ್ ಕರ್ನಲ್ ಎನ್.ಕೆ. ಭಗಸ್ರ, ಕಮಾಂಡಿಂಗ್ ಆಫೀಸರ್
    ಲೆ.ಕರ್ನಲ್ ಗ್ರೇಶನ್ ಸಿಕ್ವೇರಾ ಉಪಸ್ಥಿತರಿದ್ದರು.
    ಸೈಂಟ್ ಅಲೋಶಿಯಸ್ ಕಾಲೇಜ್ 1956ರಿಂದ ಎನ್‌ಸಿಸಿಯ ಆರ್ಮಿ ವಿಂಗ್ ,ಏರ್ ವಿಂಗ್ ಮತ್ತು ನೇವಲ್ ವಿಂಗ್
    ವಿಭಾಗಗಳನ್ನು ಹೊಂದಿದೆ. ಈ ಎಲ್ಲ ಎನ್‌ಸಿಸಿ ವಿಂಗ್‌ಗಳ ಕೆಡೆಟ್‌ಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು
    ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ಇತರ ಸಂಸ್ಥೆಗಳ ಎನ್‌ಸಿಸಿ
    ಕೆಡೆಟ್‌ಗಳಿಗೆ ತರಬೇತಿ ನೀಡುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts