More

    ವೈದ್ಯರಿಲ್ಲದ ಜಗತ್ತು ಊಹಿಸಲು ಅಸಾಧ್ಯ: ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

    ಕೆ.ಎಂ.ದೊಡ್ಡಿ: ವೈದ್ಯರು ಎಂದರೆ ಜೀವ ಉಳಿಸುವ ದೇವರಿದ್ದಂತೆ. ಸತತ ಪರಿಶ್ರಮ ಮತ್ತು ದಣಿವರಿಯದ ಕಾರ್ಯ ತತ್ಪರತೆಗೆ ಮತ್ತೊಂದು ಹೆಸರೇ ವೈದ್ಯರು. ಅವರಿಲ್ಲದ ಜಗತ್ತನ್ನು ಉಹಿಸಿಕೊಳ್ಳಲು ಅಸಾಧ್ಯ ಎಂದು ಅಸೋಸಿಯೇಷನ್ ಆಫ್ ಅಲೆಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಜಿಲ್ಲೆ 268 ಎಸ್ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿದರು.
    ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆ.ಎಂ.ದೊಡ್ಡಿ ಅಲೆಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿ ವರ್ಷ ಜು.1ರಂದು ಹೆಸರಾಂತ ವೈದ್ಯ, ಶಿಕ್ಷಣ ತಜ್ಞ, ಸ್ವಾತಂತ್ರೃ, ಹೋರಾಟಗಾರ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಡಾ.ಬಿ.ಸಿ.ರಾಯ್ ಜನ್ಮದಿನ. ಅವರ ಗೌರವಾರ್ಥ ದೇಶದ ವಿವಿಧಡೆ ಜನ ಸೇವೆಗಾಗಿ ಹಗಲಿರುಳು ಶ್ರಮಿಸುವ ವೈದ್ಯರ ಪರಿಶ್ರಮವನ್ನು ಈ ದಿನ ಗೌರವಿಸಲಾಗುತ್ತದೆ ಎಂದರು.
    ಕೊರೊನಾ ದೇಶವನ್ನು ಆವರಿಸಿದಾಗ ವೈದ್ಯರ ಪ್ರಾಮುಖ್ಯತೆ ಹಿಂದೆಂದಿಗಿಂತಲೂ ಹೆಚ್ಚು ಚೆನ್ನಾಗಿ ಮನವರಿಕೆ ಆಯಿತು. ಪ್ರತಿಯೊಬ್ಬರೂ ವೈದ್ಯರನ್ನು ಪ್ರೀತಿಸಿ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು. ಅಂತೆಯೇ ಪ್ರತಿ ವೈದರೂ ಡಾ.ಬಿ.ಸಿ.ರಾಯ್ ಅವರ ಆದರ್ಶ, ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
    ಇದೇ ಸಂದರ್ಭದಲ್ಲಿ ವೈದ್ಯರಾದ ಡಾ.ಜಗದೀಶ್, ಡಾ.ಅರ್ಜುನ್, ಡಾ.ಮಧುರ, ಡಾ.ಸೌಮ್ಯಾ, ಡಾ.ರಮ್ಯಾ ಅವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆಯನ್ನು ಮದ್ದೂರು ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಅವರು ವಹಿಸಿದ್ದರು. ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಕೆ.ಎನ್.ನೀನಾ ಪಟೇಲ್, ಸತೀಶ್, ವಸಂತಮ್ಮ, ಸುಜಾತಾ, ಗೀತಾ, ಅನುಪಮಾ, ಶಶಿಕಲಾ, ಪ್ರಭಾವತಿ, ಶಿವಮ್ಮ, ಮಮತಾ, ನೀಲಮ್ಮ, ನಾಗರತ್ನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts