More

    ಟಿ20 ವಿಶ್ವಕಪ್​ ಗೆದ್ದ ಖುಷಿಯಲ್ಲಿ​ ಹಾರ್ದಿಕ್​ ಕಣ್ಣೀರು: ಪತ್ನಿ ನತಾಶಾ ಪೋಸ್ಟ್​ಗೆ ಫ್ಯಾನ್ಸ್​ ಆಕ್ರೋಶ!

    ನವದೆಹಲಿ: ಟೀಮ್​ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಅವರ ಡಿವೋರ್ಸ್​ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ. ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್​ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಬೇರೆ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿಬಂದಿತ್ತು. ಸದ್ಯ ಈ ಸುದ್ದಿ ತಣ್ಣಗಾಗಿದ್ದರೂ ಇಬ್ಬರು ಡಿವೋರ್ಸ್​ ವದಂತಿ ಬಗ್ಗೆ ಸ್ಪಷ್ಟನೆ ನೀಡದೇ ಇರುವುದರಿಂದ ವದಂತಿ ಜೀವಂತವಾಗಿಯೇ ಇದೆ. ಇದೀಗ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ನತಾಶಾ ಪೋಸ್ಟ್​ ಮಾಡಿರುವ ಇನ್​ಸ್ಟಾಗ್ರಾಂ ಸ್ಟೋರಿ ವೈರಲ್​ ಆಗಿದೆ.

    ಟಿ20 ವಿಶ್ವಕಪ್​ ಫೈನಲ್​ ಆರಂಭಕ್ಕೂ ಮುನ್ನ ನತಾಶಾ ಅವರು ಜಿಮ್​ನಲ್ಲಿ ಡಾನ್ಸ್​ ಮಾಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದರು. ವಿಡಿಯೋ ಜತೆಗೆ ನನ್ನ ದಿಗಂತದಲ್ಲಿರುವ ಸೂರ್ಯ ನೀನು ಎಂಬ ಅಡಿಬರಹ ಬರೆದುಕೊಂಡಿದ್ದರು. ತಾವು ಡಾನ್ಸ್​ ಮಾಡುತ್ತಿದ್ದ ಹಾಡಿನ ಸಾಲುಗಳನ್ನೇ ನತಾಶಾ ಬರೆದುಕೊಂಡಿದ್ದರು. ಆದರೆ, ಅಭಿಮಾನಿಗಳ ಗಮನ ಸೆಳೆದಿದ್ದು ಮಾತ್ರ ಫೈನಲ್​ ಪಂದ್ಯದ ಬಳಿಕ ಪಾಂಡ್ಯ ಅವರು ವಿಡಿಯೋ ಕಾಲ್​ನಲ್ಲಿ ಮಾತನಾಡಿದ ಕ್ಷಣ.

    Natasha

    ಪಂದ್ಯದ ಬಳಿಕ ಪಾಂಡ್ಯ ವಿಡಿಯೋ ಕಾಲ್​ನಲ್ಲಿ ಪಾಂಡ್ಯ ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋ ಕಾಲ್​ನಲ್ಲಿ ಪಾಂಡ್ಯ ಜತೆ ಮಾತನಾಡಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ. ಆದರೆ, ನತಾಶಾ ಈವರೆಗೂ ಟೀಮ್​ ಇಂಡಿಯಾ ವಿಶ್ವಕಪ್​ ಜಯಿಸಿದ್ದರ ಬಗ್ಗೆ ಒಂದೇ ಒಂದು ಪೋಸ್ಟ್​ ಮಾಡಿಲ್ಲ. ಪ್ರತಿಕ್ರಿಯೆ ಸಹ ನೀಡಿಲ್ಲ. ಫೈನಲ್​ನಲ್ಲಿ ಟೀಮ್​ ಇಂಡಿಯಾ ಗೆಲುವಿಗೆ ತಮ್ಮ ಪತಿ ಪಾಂಡ್ಯ ಕೂಡ ಕಾರಣ. ಆದರೆ, ಒಂದೇ ಒಂದು ಮಾತನಾಡದಿರುವುದು ಪಾಂಡ್ಯ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

    ಪಾಂಡ್ಯ ಇಂಥದ್ದೊಂದು ಸಾಧನೆ ಮಾಡಿರುವಾಗ ನತಾಶಾ ಯಾಕೆ ಮೌನವಾಗಿದ್ದಾರೆ ಎಂದು ಫ್ಯಾನ್ಸ್​ ಪ್ರಶ್ನೆ ಮಾಡಿದ್ದಾರೆ. ಇದೆಲ್ಲ ನೋಡಿದರೆ ಪಾಂಡ್ಯ ಮತ್ತು ನತಾಶಾ ಬೇರೆಯಾಗಿರುವುದು ಖಚಿತವಾದಂತಿದೆ. ಡಿವೋರ್ಸ್​ ಪಕ್ಕಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ನತಾಶಾ ವಿಡಿಯೋ ಕಾಲ್​ ಮೂಲಕ ಪಾಂಡ್ಯ ಜತೆ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ನತಾಶಾ ಎಲ್ಲೂ ಒಂದೇ ಒಂದು ಮಾತು ಟೀಮ್​ ಇಂಡಿಯಾ ಬಗ್ಗೆ ಮಾತನಾಡದೇ ಇರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    View this post on Instagram

    A post shared by Voompla (@voompla)

    ಅಂದಹಾಗೆ ಐಪಿಎಲ್​ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಹಾರ್ದಿಕ್​ ಅವರ ವೈವಾಹಿಕ ಜೀವನದ ಸುದ್ದಿ ಹೆಚ್ಚು ಚರ್ಚೆಯಾಯಿತು. ನತಾಶಾ ಮತ್ತು ಹಾರ್ದಿಕ್​ ನಡುವೆ ವೈಮನಸ್ಸು ಮೂಡಿದ್ದು, ಬೇರೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ನತಾಶಾ ಕೂಡ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಾರ್ದಿಕ್ ಹೆಸರನ್ನು ತೆಗೆದುಹಾಕಿದರು. ಅಲ್ಲದೆ, ನಿಗೂಢ ಪೋಸ್ಟ್​ಗಳನ್ನು ಹಾಕುವ ಮೂಲಕ ಇಬ್ಬರ ನಡುವೆ ಏನೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದರ ನಡುವೆ ನತಾಶಾ, ಬೇರೋಬ್ಬನ ಜತೆ ಸುತ್ತಾಡುತ್ತಿರುವ ಫೋಟೋಗಳು ವೈರಲ್​ ಆಗಿವೆ. ಈ ಎಲ್ಲ ಕಾರಣಗಳಿಂದ ಹಾರ್ದಿಕ್​ ಮತ್ತು ನತಾಶಾ ಡಿವೋರ್ಸ್​ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ನತಾಶಾ ಆಗಲಿ ಅಥವಾ ಹಾರ್ದಿಕ್​ ಆಗಲಿ ಇದುವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ.

    ಯಾರು ಈ ನತಾಶಾ?
    ಮಾರ್ಚ್​ 4, 1992ರಂದು ಜನಿಸಿದ ನತಾಶಾ, ಸೆರ್ಬಿಯಾ ಮೂಲದ ಓರ್ವ ಮಾಡೆಲ್​. 2012ಕ್ಕೆ ಭಾರತಕ್ಕೆ ಕಾಲಿಟ್ಟ ಈ ಬ್ಯೂಟಿ ಇಂಡಿಯನ್​ ರ್ಯಾಪರ್​ ಬಾದ್​ಷಾ ಅವರ ಮ್ಯೂಸಿಕ್​ ವಿಡಿಯೋ ಆಲ್ಬಂನಲ್ಲಿ ಹೆಜ್ಜೆ ಹಾಕುವ ಮೂಲಕ ಪ್ರಖ್ಯಾತಿ ಗಳಿಸಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವ ನತಾಶಾ ಕೆಲ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ನತಾಶಾ ಅವರು ಮೊದಲಿಗೆ ಪ್ರಕಾಶ್​ ಝಾ ಅವರ ಸತ್ಯಾಗ್ರಹ ಸಿನಿಮಾದಲ್ಲಿ ‘ಅಯೋ ಜಿ’ ಎಂಬ ಹಾಡೊಂದರಲ್ಲಿ ಕಾಣಿಸಿಕೊಂಡರು. ಇದಾದ ಬೆನ್ನಲ್ಲೇ ಸಲ್ಮಾನ್​ ಖಾನ್​ ನಡೆಸಿಕೊಡುವ ಬಿಗ್​ಬಾಸ್​ 8ನೇ ಆವೃತ್ತಿಯಲ್ಲಿ ಕಾಣಿಸಿಕೊಂಡರು. ಬಳಿಕ ಫರ್ಕಿ ರಿಟರ್ನ್ಸ್​(ಮೆಹಬೂಬ), ಡ್ಯಾಡಿ(ಜಿಂದಗಿ ಮೆರಿ ಡ್ಯಾನ್ಸ್​ ಡ್ಯಾನ್ಸ್​) ಮತ್ತು ಫ್ರೈ ಡೇ (ಜಿಮೈ ಛೋಯಿ) ಚಿತ್ರಗಳ ಹಾಡಿನಲ್ಲಿ ನತಾಶಾ ಕಾಣಿಸಿಕೊಂಡರು. ಇತ್ತೀಚೆಗೆ ಇಮ್ರಾನ್​ ಹಶ್ಮಿ ಅವರ ದಿ ಬಾಡಿ ಚಿತ್ರದ ಜಲಕ್​ ದಿಕಲಾಜಾ ಹೊಸ ಅವತರಣಿಕೆಯ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2019ರ ನಾಚ್​ ಬೆಲಿಯೇ-9 ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಮೂರನೇ ರನ್ನರ್​ ಅಪ್​ ಆಗಿದ್ದರು.

    ಕನ್ನಡದಲ್ಲಿಯೂ ನಶೆ ಏರಿಸಿದ ನತಾಶಾ
    ನಟ ದುನಿಯಾ ವಿಜಯ್​ ಅಭಿನಯದ ಯೋಗರಾಜ್​ ಭಟ್​ ನಿರ್ದೇಶನದ ದನ ಕಾಯೋನು ಚಿತ್ರದಲ್ಲಿಯು ನತಾಶಾ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ವಿಶ್ವಕಪ್​ಗೆ ಕೊಡಬೇಕಾದ ಗೌರವ ಇದು! ಕಪ್​ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್ ಕಾಲೆಳೆದ ಭಾರತೀಯರು​

    ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಪಿಚ್​ನಲ್ಲಿನ ಮಣ್ಣು ತಿಂದ ರೋಹಿತ್​ ಶರ್ಮ! ಹಿಟ್​ಮ್ಯಾನ್ ನಡೆಗೆ ಎಲ್ಲೆಡೆ ಮೆಚ್ಚುಗೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts