More

    ಆರು ತಿಂಗಳಲ್ಲಿ 300 ರೋಬಾಟಿಕ್ ಶಸಚಿಕಿತ್ಸೆ: ನಾರಾಯಣ ಹೆಲ್ತ್ ಸಿಟಿ ಸಾಧನೆ

    ಬೆಂಗಳೂರು: ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಆರು ತಿಂಗಳಲ್ಲಿ 300 ರೊಬೊಟಿಕ್ ಮೊಣಕಾಲಿನ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದೆ. ಆಸ್ಪತ್ರೆಯ ಆರ್ಥೊಪಿಡಿಕ್ಸ್, ಸ್ಪೈನ್ ಅಂಡ್ ಟ್ರೌಮಾದ ಸೀನಿಯರ್ ಕನ್ಸಲ್ಟೆಂಟ್ ಪ್ರೊ. ಅರುಣ್ ರಂಗನಾಥನ್ ಅವರ ನೇತೃತ್ವದ ಆರ್ಥೋಪಿಡಿಕ್ ತಜ್ಞರ ತಂಡ ಈ ಸಾಧನೆ ಮಾಡಿದೆ.

    ಮಹಾವೀರ ಚಕ್ರ ಪುರಸ್ಕೃತ ಪಿಟಿ ಎಸ್.ಕೆ. ಗುಪಾ ್ತ(88 )ಮೊಣಕಾಲಿನ ಆರ್ಥ್ರೈಟಿಸ್‌ನಿಂದ ನಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಅವರಿಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ರೋಬಾಟಿಕ್ ಶಸಚಿಕಿತ್ಸೆ ಮೂಲಕ ಮರು ಜೀವನ ನೀಡಲಾಗಿದೆ.

    ಈ ಕುರಿತು ನಾರಾಯಣ ಹೆಲ್ತ್ ಸಿಟಿಯ ರೊಬೊಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್, ನೀ ರಿಪ್ಲೇಸ್ಮೆಂಟ್‌ಸರ್ಜರಿಯ ಆರ್ಥೊಪಿಡಿಕ್ ಸರ್ಜನ್ ಡಾ. ಅಭಿನಂದನ್ ಎಸ್. ಪುನೀತ್ ಮಾತನಾಡಿ, ನಾರಾಯಣ ಹೆಲ್ತ್ ಸಿಟಿಯಲ್ಲಿ ನಮ್ಮ ಉದ್ದೇಶ ಸದಾ ನಮ್ಮ ರೋಗಿಗಳ ಸ್ವಾಸ್ಥ್ಯದ ಸುತ್ತಲೂ ಕೇಂದ್ರೀಕೃತವಾಗಿದೆ. ರೊಬೊಟಿಕ್ ಮೊಣಕಾಲು ಶಸ್ತ್ರಚಿಕಿತ್ಸೆಯ ತಂತ್ರಜ್ಞಾನ ಪರಿಚಯಿಸುವುದು ನಮಗೆ ಸಹಜ ಹೆಜ್ಜೆಯಾಗಿದ್ದು, ಅದು ಸರಿಸಾಟಿ ಇರದ ನಿಖರತೆ ಮತ್ತು ಗುಣಮಟ್ಟದ ಆರೈಕೆ ನೀಡುತ್ತದೆ. ಈ ಸುಧಾರಿತ ತಂತ್ರಜ್ಞಾನವು ವೈದ್ಯರಿಗಷ್ಟೇ ಅಲ್ಲ ರೋಗಿಗಳಿಗೂ ವರದಾನವಾಗಿದೆ ಎಂದು ತಿಳಿಸಿದ್ದಾರೆ.

    ಪ್ರೊ. ಅರುಣ್ ರಂಗನಾಥನ್ ಮಾತನಾಡಿ, ನಮ್ಮಲ್ಲಿ ಬರುವ ಎಲ್ಲ ರೋಗಿಗಳಿಗೂ ಅತ್ಯಾಧುನಿಕ ಮೊಣಕಾಲಿನ ಬದಲಾವಣೆ ತಂತ್ರಜ್ಞಾನ ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ಪ್ರಕ್ರಿಯೆಯಲ್ಲಿ ರಿಯಲ್-ಟೈಮ್ ಮ್ಯಾಪಿಂಗ್ ಅನ್ನು ನಡೆಸುವ ಮೂಲಕ ರೋಗಿಯ ಮೊಣಕಾಲಿನ 3ಡಿ ಮಾಡೆಲ್ ಸೃಷ್ಟಿಸಲಾಗುತ್ತದೆ. ರೊಬೊಟಿಕ್ ಸಾಧನವು ಶಸ್ತ್ರಚಿಕಿತ್ಸೆ ನಿರ್ವಹಿಸುತ್ತದೆ, ಶಸ್ತ್ರಚಿಕಿತ್ಸಾ ತಜ್ಞರು ಅದರ ಪೂರ್ಣ ನಿಯಂತ್ರಣ ಕಾಪಾಡಿಕೊಳ್ಳುವ ಮೂಲಕ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts