More

    ಬಾಡಿಗಾರ್ಡ್​ ಮಾಡಿದ ತಪ್ಪಿಗೆ ಅಭಿಮಾನಿಯನ್ನು ಖುದ್ದು ಭೇಟಿ ಮಾಡಿ ಕ್ಷಮೆಯಾಚಿಸಿದ ನಾಗಾರ್ಜುನ

    ಮುಂಬೈ: ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರನ್ನು ಭೇಟಿಯಾಗಲು ಬಂದ ಅಂಗವಿಕಲ ಅಭಿಮಾನಿಯನ್ನು ನಟನ ಬಾಡಿಗಾರ್ಡ್​​​​ ತಳ್ಳಿದ ಘಟನೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿತ್ತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೀಡಿಯೊ ನೋಡಿದ ನೆಟ್ಟಿಗರು ನಾಗಾರ್ಜುನ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತಪಡಿಸಿದ್ದರು.

    ಇದನ್ನು ಓದಿ: ಅರವಿಂದ್​ಗೆ ಜಾಮೀನು ಸಿಗದಂತೆ ಷಡ್ಯಂತ್ರ ರೂಪಿಸಲಾಗಿದೆ; ಸುನೀತಾ ಕೇಜ್ರಿವಾಲ್​ ಆರೋಪ

    ಇದಾದ ಬಳಿಕ ಭಾನುವಾರ ನಾಗಾರ್ಜುನ ಅವರು ಟ್ವೀಟ್​ ಮಾಡಿ ಅಭಿಮಾನಿ ಬಳಿ ಕ್ಷಮೆಯಾಚಿಸಿದ್ದರು. ಇದು ನನ್ನ ಗಮನಕ್ಕೆ ಬಂದಿದೆ. ಹೀಗಾಗಬಾರದಿತ್ತು!! ನಾನು ಆ ವ್ಯಕ್ತಿಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೆ ಭವಿಷ್ಯದಲ್ಲಿ ಹೀಗಾಗದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

    ಕೊನೆಗೂ ನಾಗಾರ್ಜುನ ಬುಧವಾರ(ಜೂನ್​​ 26) ಬಾಡಿಗಾರ್ಡ್ ​​​​ತಳ್ಳಿದ್ದ ಅಂಗವಿಕಲ ಅಭಿಮಾನಿಯನ್ನು ಭೇಟಿಯಾಗಿದ್ದಾರೆ. ಆತನನ್ನು ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು, ಇದು ನಿನ್ನ ತಪ್ಪಲ್ಲ ಕ್ಷಮಿಸಿಬಿಡು.. ತಪ್ಪು ನನ್ನದು ಎಂದು ಹೇಳಿದ್ದಾರೆ. ಸದ್ಯ ನಾಗಾರ್ಜುನ ತಮ್ಮ ಅಭಿಮಾನಿಯನ್ನು ಭೇಟಿ ಮಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಕೆಲ ನೆಟ್ಟಿಗರು ನಾಗಾರ್ಜುನ ಅವರ ಕಾರ್ಯವನ್ನು ಮೆಚ್ಚಿಕೊಂಡರೆ, ಮತ್ತೆ ಕೆಲವರು ಇದೆಲ್ಲಾ ವೀಡಿಯೊ ವೈರಲ್​ ಆದ ಬಳಿಕ ತೋರಿಕೆಗೆ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

    ಸದ್ಯ ನಾಗಾರ್ಜುನ ನಿರ್ದೇಶಕ ಶೇಖರ್ ಕಮ್ಮುಲ ಅವರ ಕುಬೇರ ಚಿತ್ರೀಕರಣದಲ್ಲಿ ಬಿಸಿ ಇದ್ದಾರೆ. ಧನುಷ್ ಮತ್ತು ರಶ್ಮಿಕಾ ಮಂದಣ್ಣ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ ಸಂಗೀತವಿದೆ. ಈ ತಿಂಗಳ ಆರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. (ಏಜೆನ್ಸೀಸ್​​)

    ಅಮರನಾಥ ಯಾತ್ರೆಗೆ ಆಫ್​ಲೈನ್​ ನೋಂದಣಿ ಆರಂಭ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts